Tuesday, 20 May 2025

ಭಯೋತ್ಪಾದನೆ - ಅರ್ಥ, ವ್ಯಾಖ್ಯೆ, ಘಟನೆಯ ಸ್ವರೂಪ, ಲಕ್ಷಣಗಳು, ಕಾರಣಗಳು, ದುಷ್ಪರಿಣಾಮಗಳು, ಪರಿಹಾರ ಕ್ರಮಗಳು,ಪ್ರಮುಖ ಭಯೋತ್ಪಾದನೆ ಸಂಘಟನೆಗಳು, ಹಾಗೂ ಪ್ರಚಲಿತ ಮಾಹಿತಿ ಇತ್ಯಾದಿ Terrorism concept, Meaning, Definition, nature, causes, effects, preventive measures, etc in kannada

               ಭಯೋತ್ಪಾದನೆ

ಭಯೋತ್ಪಾದನೆ - ಅರ್ಥ, ವ್ಯಾಖ್ಯೆ, ಸ್ವರೂಪ, ಲಕ್ಷಣಗಳು, ಕಾರಣಗಳು ದುಷ್ಪರಿಣಾಮ, ಪರಿಹಾರ ಕ್ರಮಗಳು, ಕಾನೂನಾತ್ಮಕ ಕ್ರಮಗಳು, ಕಾನೂನು ಜಾರಿ ಸಂಸ್ಥೆಗಳು, ಭಯೋತ್ಪಾದನೆ ಮೇಲೆ ಪ್ರಭಾವ ಬೀರುವ ಅಂಶಗಳು, ಪ್ರಮುಖ ದಾಳಿಗಳು,  ಪ್ರಮುಖ ಉದಾಹರಣೆಗಳ ಪ್ರಚಲಿತ ಅಂಕಿ ಅಂಶಗಳೊಂದಿಗೆ ಮಾಹಿತಿ 


ರಚನೆ - ಭೈರಪ್ಪ ಹಾಲಪ್ಪಗೋಳ, ಸಂಶೋಧನಾ ವಿದ್ಯಾರ್ಥಿ , ಸಮಾಜಕಾರ್ಯ ವಿಭಾಗ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ


ಪೀಠಿಕೆ - ಭಯೋತ್ಪಾದನೆ ಎಂಬುದು ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ಪದವಾಗಿದೆ. ಭಯೋತ್ಪಾದನೆ ಎಂಬ ಪದವನ್ನೆ ಕೇಳಿದರೆ ಭಯ ಹುಟ್ಟುತ್ತದೆ. ಭಯೋತ್ಪಾದನೆ ಎಂಬ ಪದದಲ್ಲಿಯೇ ಅರ್ಥವಿದೆ ಭಯದ ಉತ್ಪಾದನೆ  ಎಂದರ್ಥವಾಗುತ್ತದೆ. ಅಂದರೆ ಭಯವನ್ನು ಹುಟ್ಟಿಸುವ ಸನ್ನಿವೇಶ ವಾಗಿದೆ.
ಭಯೋತ್ಪಾದನೆ ಎಂಬುದು ಮೊದಮೊದಲು ಕೇವಲ ರಾಜಕೀಯ ಉದ್ದೇಶದಿಂದ ನಡೆಯುತ್ತಿತ್ತು ಆದರೆ ಕಾಲ ಗತಿಸಿದಂತೆ ಇಂದು ಅದರ ಸ್ವರೂಪದಲ್ಲಿ ಬದಲಾಗುತ್ತಾ ಹೋಗುತ್ತದೆ ಇಂದು ಧಾರ್ಮಿಕ ಸ್ವರೂಪದಲ್ಲಿ, ಆರ್ಥಿಕ ಸ್ವರೂಪದಲ್ಲಿ ಅದೇ ರೀತಿ ವಯಕ್ತಿಕ ಸ್ವರೂಪದಲ್ಲಿ ಕೂಡಾ ನಡೆಯುತ್ತಿದೆ.
   ಭಯೋತ್ಪಾದನೆ ಎಂಬ ಪದವನ್ನು ಕೇಳಿರದ ವ್ಯಕ್ತಿಗಳು ಭೂಮಿಯ ಮೇಲೆ ಯಾರು ಇಲ್ಲ ಎಂದು ತಿಳಿಯುತ್ತದೆ. ಭಯದಿಂದ, ಒತ್ತಾಯಪೂರ್ವಕವಾಗಿ ಈ ಒಂದು ಪದವನ್ನು ಕೇಳುವ ಸನ್ನಿವೇಶವಾಗಿದೆ. ಭಯೋತ್ಪಾದನೆ ಇದು ಒಂದು ಹಿಂಸಾಚಾರದ ಪ್ರಕಾರಗಳಲ್ಲಿ ಒಂದಾಗಿದ್ದು, ಜಾಗತಿಕ ಸ್ವರೂಪವನ್ನು ಪಡೆದಿರುವ ರಾಜಕೀಯ, ಸಾಮಾಜಿಕ ಸಮಸ್ಯೆಯಾಗಿದೆ.
ಕೆಲವು ವ್ಯಕ್ತಿಗಳು ತಮ್ಮ ವಯಕ್ತಿಕ , ರಾಜಕೀಯ, ಧಾರ್ಮಿಕ, ಜನಾಂಗೀಯ ಉದ್ದೇಶಕ್ಕಾಗಿ ಸಮಾಜದಲ್ಲಿ ಮುಗ್ದ ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಾರೆ. ಇದರಿಂದ ಆಸ್ತಿ ಪಾಸ್ತಿ ಹಾನಿ , ಸಾವು ನೋವು ಉದ್ಬವಿಸಿ ವಿಪರೀತ ನಷ್ಟ ಸಂಬವಿಸುವ ಲಕ್ಷಣವಿರುತ್ತದೆ. ಈಗ ಹಂತ ಹಂತವಾಗಿ ಭಯೋತ್ಪಾದನೆ ಅರ್ಥ ಅದರ ಸ್ವರೂಪ ಅದಕ್ಕೆ  ಇರುವ ಕಾರಣಗಳು ಅದರಿಂದ ಆಗುವ ಪರಿಣಾಮಗಳು ಅದಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಇತರ ಕ್ರಮಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸೋಣ

ಭಯೋತ್ಪಾದನೆ ಅರ್ಥ -
 ಭಯೋತ್ಪಾದನೆ ಇಂಗ್ಲಿಷ್ ಭಾಷೆಯ"  ಟೆರೆರಿಸಮ್ " ಎಂಬ ಪದಕ್ಕೆ ಸಮಾನವಾದದ್ದು. ಇಂಗ್ಲಿಷ್ ಭಾಷೆಯ ಟೆರೆರಿಸಮ್ ಎಂಬ ಪದವು ಲ್ಯಾಟಿನ್ ಭಾಷೆಯ"  ಟೆರೆರೆ"  ಎಂಬ ಪದದಿಂದ ಬಂದಿದೆ  ಟೆರೆರೆ ಎಂದರೆ ಭಯಹುಟ್ಟಿಸು ಎಂದರ್ಥ. ಟೆರರ್ ಎಂಬ ಪದವು ಮೊಟ್ಟಮೊದಲ ಬಾರಿಗೆ ಫ್ರೆಂಚ್ ಕ್ರಾಂತಿ ಸಂದರ್ಭದಲ್ಲಿ  ಬಳಕೆಗೊಂಡಿತು.


ಭಯೋತ್ಪಾದನೆಯ ವ್ಯಾಖ್ಯೆ
1)ಆ್ಯಂಡರ್ಸನ್ - ರವರ ಪ್ರಕಾರ - "ಭಯೋತ್ಪಾದನೆ ಎಂದರೆ ರಾಜಕೀಯ ಉದ್ದೇಶದಿಂದ ಕೂಡಿರುವ ಸಾಮೂಹಿಕ ಸ್ವರೂಪದ ಹಿಂಸಾಚಾರವಾಗಿದೆ. "
2)ಮಿಚೆಲ್ ವಾಲ್ಜರ್ 2002 -"ಭಯೋತ್ಪಾದನೆ ಎಂಬುದು ಉದ್ದೇಶಪೂರಿತ ಚಟುವಟಿಕೆಯಾಗಿದ್ದು. ಮುಗ್ಧ ಜನರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಇಡಿ ಜನಸಮುದಾಯದಲ್ಲಿ ಭಯವನ್ನು ಹುಟ್ಟಿಸುವುದಾಗಿದೆ ಹಾಗೂ ಇದು ರಾಜಕೀಯ ಪ್ರೇರಿತವಾಗಿರುತ್ತದೆ. "
3)ಎನ್ ಸೈಕ್ಲೋಪಿಡಿಯಾ ಸಮಾಜ ವಿಜ್ಞಾನ ಶಬ್ದಕೋಶ -
"ಸಂಘಟಿತ ಸಮೂಹವು ಘೋಷಿತ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಹಿಂಸಾಚಾರದ ಕ್ರಮಬದ್ಧ ಚಟುವಟಿಕೆಯೇ ಭಯೋತ್ಪಾದನೆ "
4)ಸಾಮಾನ್ಯ ವ್ಯಾಖ್ಯೆ -
ರಾಜಕೀಯ ಹಾಗೂ ವಯಕ್ತಿಕ  ಉದ್ದೇಶ ಈಡೇರಿಸಿಕೊಳ್ಳಲು ಸಾಮಾನ್ಯ ಜನಜೀವನದಲ್ಲಿ ಶಾಂತಿ ಕದಡುವುದು ಮತ್ತು ಜನರಲ್ಲಿ ಭಯಭೀತ ವಾತಾವರಣ ಮೂಡಿಸುವುದು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಹಾಗೂ ಸಾವು ನೋವುಗಳಿಗೆ ಕಾರಣವಾಗುವ ಒಂದು ಸಾರ್ವತ್ರಿಕ, ಸಾಮಾಜಿಕ ಚಟುವಟಿಕೆಯಾಗಿದೆ.

ಭಯೋತ್ಪಾದನೆಯ ಘಟನೆಗಳ ಸ್ವರೂಪ -
1)ಬಾಂಬ್ ಸ್ಪೋಟಿಸುವುದು 2)ಅಪಹರಣ ಮಾಡುವುದು 3)ಸಾಮೂಹಿಕ ಹತ್ಯೆ ನಡೆಸುವುದು 4)ಲೈಂಗಿಕ ಶೋಷಣೆ ಮತ್ತು ಕೊಲೆ ನಡೆಸುವುದು 5)ಗುಲಾಮರನ್ನಾಗಿಸುವುದು 6)ಸಂಪತ್ತಿನ ಲೂಟಿ 7) ಸಾರ್ವಜನಿಕ ಸ್ಥಳಗಳಿಗೆ ಹಾನಿ ಉಂಟುಮಾಡುವುದು. 8)ರಾಜಕೀಯ ವ್ಯಕ್ತಿಗಳ ಅಪಹರಣ ಮತ್ತು ಕೊಲೆ  ಮುಂತಾದವು

ಭಯೋತ್ಪಾದನೆಯ ಲಕ್ಷಣಗಳು
1)ಇದು ಹಿಂಸಾಚಾರ ಸ್ವರೂಪ ಹೊಂದಿದೆ
2)ಭಯಭೀತ ವಾತಾವರಣ ನಿರ್ಮಾಣ ಉಂಟುಮಾಡುತ್ತದೆ
3)ಜನರಿಗೆ ಶೋಷಣೆ ಉಂಟುಮಾಡುತ್ತದೆ
4)ವಿರೋಧಿಗಳ ವಿರುದ್ಧದ ತಂತ್ರವಾಗಿದೆ
5)ಸಂವಿಧಾನದ ವಿರೋದಿ ಚಟುವಟಿಕೆಯಾಗಿದೆ
6)ಸಾಮಾಜಿಕ ಸಮಸ್ಯೆಯಾಗಿದೆ
7)ಸಮಾಜ ಘಾತಕ ಚಟುವಟಿಕೆಯಾಗಿದೆ
8)ಪ್ರಜಾಪ್ರಭುತ್ವಕ್ಕೆ ವಿರೋಧಿ


ಭಯೋತ್ಪಾದನೆಗೆ ಹಾಗೂ ಭಯೋತ್ಪಾದಕರಾಗಲು ಇರುವ ಕಾರಣಗಳು
1)ನಿರುದ್ಯೋಗ
2)ಮಾನಸಿಕವಾಗಿ ನೆಮ್ಮದಿ ಇಲ್ಲದಿರುವುದು
3)ದುಡ್ಡಿನ ಆಮಿಷ
4)ಸಾಮಾಜಿಕ ಜಾಗೃತಿ ಇಲ್ಲದಿರುವುದು
5)ಕಠಿಣ ಕಾನೂನು ಕ್ರಮ ಇಲ್ಲದಿರುವುದು
6)ಪೋಷಕರ ನಿರ್ಲಕ್ಷ್ಯ
7)ಅತಿಯಾದ ಧಾರ್ಮಿಕ, ಜಾತಿ ನಂಬುಗೆಗಳು
8)ಸುಧಾರಿತ ತಂತ್ರಜ್ಞಾನ
9)ವಿನಾಶಕ ಶಸ್ತ್ರಾಸ್ತ್ರಗಳ ತಯಾರಿಕೆ ಬಗ್ಗೆ ಅರಿವು
10)ಬಡತನ
11)ತಂತ್ರಜ್ಞಾನದ ಅರಿವು ಹೆಚ್ಚಾದಾಗ
12)ದುಷ್ಟಜನರ ಸಹವಾಸ
13)ಅನ್ಯಧರ್ಮದ ಬಗ್ಗೆ ಸಹನೆ ಇಲ್ಲದಿರುವುದು
14) ರಾಜಕೀಯ  ಉದ್ದೇಶ ಈಡೇರಿಕೆ
15) ಮಾನವೀಯ ಮೌಲ್ಯದ ವಿರೋಧ ಭಾವನೆ
16)ಜನರಲ್ಲಿ ಪ್ರಸಿದ್ಧಿ ಪಡೆಯುವ ಬಯಕೆ
17) ತುರ್ತು ಬೇಡಿಕೆ ಈಡೇರಿಸುವಂತೆ ಬೇಡಿಕೆ
ಮುಂತಾದವು

ಭಯೋತ್ಪಾದನೆಯಿಂದಾಗುವ ದುಷ್ಪರಿಣಾಮಗಳು
1)ಆಸ್ತಿ ಹಾನಿ
2)ಭಯದ ಬೀತಿ
3)ಸಮಾಜದಲ್ಲಿ ಆತಂಕ
4)ಹಿಂಸೆ
5)ಜೀವ ಹಾನಿ
6)ಕೋಮುಗಲಭೆ
7)ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು
8)ಸರ್ಕಾರವನ್ನು ದುರ್ಬಲಗೊಳಿಸುವುದು
9)ಸಾಮಾಜಿಕ ವಿಘಟನೆಗೆ ಕಾರಣ
10)ಜಾಗತಿಕ ಅಭದ್ರತೆ
11)ಜಾಗತಿಕ ಯುದ್ದಗಳಿಗೆ ಕಾರಣವಾಗುತ್ತದೆ
13)ರಾಷ್ಟ್ರೀಯ ಭಾವೈಕ್ಯತೆ ಧಕ್ಕೆ
14)ಮನುಕುಲದ ಅಭಿವೃದ್ಧಿಗೆ ಧಕ್ಕೆ
15)ಆರ್ಥಿಕವಾಗಿ ನಷ್ಟ
16)ಅಭಿವೃದ್ಧಿ ಕುಂಠಿತವಾಗುವಿಕೆ
ಮುಂತಾದವು

ಭಯೋತ್ಪಾದನೆಯ ಮೇಲೆ ಪ್ರಭಾವಿತವಾಗುವ ಅಂಶಗಳು
1)ಜಾತಿ 2)ಧರ್ಮ 3)ಜನಾಂಗ 4)ಪ್ರದೇಶ 5)ವೈಚಾರಿಕ ಸಿದ್ಧಾಂತಗಳು 6)ಭಾಷೆ
 7)ರಾಜಕೀಯ 8)ಭೌಗೋಳಿಕ ಪ್ರದೇಶ 9)ಶಿಕ್ಷಣ  ಮುಂತಾದವು

ಕಾನೂನು ಕ್ರಮಗಳು
1)ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967: 1967 ರ ಯುಎಪಿಎ ಕಾನೂನು ಜಾರಿ ಸಂಸ್ಥೆಗಳಿಗೆ ಭಯೋತ್ಪಾದನೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡುತ್ತದೆ.

2)ಭಯೋತ್ಪಾದನೆ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1987: ಟಾಡಾ ಕಾಯ್ದೆಯು ಭಯೋತ್ಪಾದನೆಯನ್ನು ನಿರ್ದಿಷ್ಟವಾಗಿ ಎದುರಿಸಲು ಕಠಿಣ ಕ್ರಮಗಳನ್ನು ಒದಗಿಸುತ್ತದೆ. ಸಾಕಷ್ಟು ವಿವಾದಗಳಿಂದ ಸುತ್ತುವರೆದಿರುವ ಈ ಕಾಯ್ದೆ ಅಂತಿಮವಾಗಿ 1995 ರಲ್ಲಿ ರದ್ದುಗೊಂಡಿತು.

3)ಭಯೋತ್ಪಾದನಾ ತಡೆ ಕಾಯ್ದೆ, ೨೦೦೨: ಭಯೋತ್ಪಾದನೆ ಹೆಚ್ಚಾದಂತೆ, ಪೋಟಾ, ೨೦೦೨ ಎಂಬ ಮತ್ತೊಂದು ಕಾನೂನನ್ನು ಅಂಗೀಕರಿಸಲಾಯಿತು. ಇದು ಕಾನೂನು ಜಾರಿ ಸಂಸ್ಥೆಗಳಿಗೆ ಇನ್ನಷ್ಟು ವ್ಯಾಪಕ ಅಧಿಕಾರಗಳನ್ನು ಒದಗಿಸಿತು. ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಕಳವಳಗಳು ವ್ಯಕ್ತವಾಗಿದ ನಂತರ ಯುಪಿಎ ಇದನ್ನು ೨೦೦೪ ರಲ್ಲಿ ರದ್ದುಗೊಳಿಸಿತು.

4)ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ, 2008: ಭಯೋತ್ಪಾದನಾ ನಿಗ್ರಹ ಚಟುವಟಿಕೆಗಳನ್ನು ನಿಭಾಯಿಸುವ ಕೇಂದ್ರ ಮಟ್ಟದಲ್ಲಿ NIA ಸ್ಥಾಪನೆಗೆ ಅವಕಾಶ ನೀಡಲು 2008 ರಲ್ಲಿ NIA ಅನ್ನು ಸ್ಥಾಪಿಸಲಾಯಿತು.

5)೨೦೧೬ ರ ಅಪಹರಣ ವಿರೋಧಿ ಕಾಯ್ದೆ: ಇತ್ತೀಚೆಗೆ, ವಿಮಾನಗಳ ಅಪಹರಣವನ್ನು ತಡೆಗಟ್ಟಲು ಅಪಹರಣ ವಿರೋಧಿ ಕಾಯ್ದೆಯನ್ನು ಅಂಗೀಕರಿಸಲಾಯಿತು.

ಭಾರತದ ಕಾನೂನು ಜಾರಿ ಸಂಸ್ಥೆಗಳು 

1- ರಾಷ್ಟ್ರೀಯ ತನಿಖಾ ಸಂಸ್ಥೆ : ಭಯೋತ್ಪಾದನೆಯನ್ನು ಎದುರಿಸಲು ಕೇಂದ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೊದಲ ಮತ್ತು ಪ್ರಮುಖ ಸಂಸ್ಥೆ NIA. 2008 ರ NIA ಕಾಯ್ದೆಯ ಪ್ರಕಾರ 2009 ರಲ್ಲಿ ಸ್ಥಾಪನೆಯಾದ ಇದು ರಾಷ್ಟ್ರೀಯ ಪರಿಣಾಮಗಳನ್ನು ಉಂಟುಮಾಡಬಹುದಾದ ಭಯೋತ್ಪಾದನೆಗೆ ಸಂಬಂಧಿಸಿದಂತೆ ತನಿಖೆಗಳನ್ನು ಕೈಗೊಳ್ಳುತ್ತದೆ. NIA ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಇತರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತದೆ.

2- ಗುಪ್ತಚರ ಬ್ಯೂರೋ: ಐಬಿ ಭಾರತದ ಗುಪ್ತಚರ ಸಂಸ್ಥೆಯಾಗಿದೆ. ಕಾನೂನು ಜಾರಿ ಸಂಸ್ಥೆಗಳಿಗೆ ಒದಗಿಸಲಾದ ಭಯೋತ್ಪಾದನೆಗೆ ಸಂಬಂಧಿಸಿದಂತೆ ಯಾವುದೇ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಿಸುವುದು ಐಬಿಯ ಕಾರ್ಯವಾಗಿದೆ. ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಭಯೋತ್ಪಾದನಾ ನಿಗ್ರಹ ಸಂಸ್ಥೆಗಳು ನಿರ್ವಹಿಸುವ ಚಟುವಟಿಕೆಗಳು ಹೆಚ್ಚಾಗಿ ಐಬಿಯ ವಿಶ್ಲೇಷಣೆಯನ್ನು ಆಧರಿಸಿವೆ.

3- ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ : RAW ಕೂಡ ಮತ್ತೊಂದು ಗುಪ್ತಚರ ಸಂಸ್ಥೆಯಾಗಿದೆ. IB ದೇಶದ ಆಂತರಿಕ ವಿಷಯಗಳೊಂದಿಗೆ ವ್ಯವಹರಿಸುತ್ತದೆ, ಆದರೆ ಯಾವುದೇ ಬಾಹ್ಯ ಬೆದರಿಕೆಗಳಿಗೆ ಸಂಬಂಧಿಸಿದಂತೆ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು RAW ನ ಗಮನವಾಗಿದೆ. ಇದಕ್ಕಾಗಿ, RAW ಗಡಿಯಾಚೆಗಿನ ಚಲನೆಗಳ ನಿರಂತರ ಮೇಲ್ವಿಚಾರಣೆ ಅಥವಾ ವಿದೇಶಿ ಏಜೆನ್ಸಿಗಳೊಂದಿಗೆ ಸಹಕಾರದೊಂದಿಗೆ ಕೆಲಸ ಮಾಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಬಳಸುತ್ತದೆ. RAW ಅನ್ನು 1968 ರಲ್ಲಿ ಸ್ಥಾಪಿಸಲಾಯಿತು.

4- ಪೊಲೀಸ್ ಪಡೆಗಳು : ಭಯೋತ್ಪಾದನೆ ನಿಗ್ರಹದಲ್ಲಿ ಪೊಲೀಸರು ಸಕ್ರಿಯ ಮತ್ತು ಪ್ರಮುಖ ಪಾತ್ರ ವಹಿಸುತ್ತಾರೆ. ರಾಜ್ಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಕಾರ್ಯಾಚರಣೆಗಳನ್ನು ನಡೆಸುವ ವಿವಿಧ ವಿಶೇಷ ಕಾರ್ಯಪಡೆಗಳು (STF ಗಳು) ಇವೆ. ಕೇಂದ್ರ ಮಟ್ಟದಲ್ಲಿ, CRPF, BSF ಮತ್ತು CISF ನಂತಹ ವಿವಿಧ ಅರೆಸೈನಿಕ ಪಡೆಗಳು ಭದ್ರತೆಯನ್ನು ಒದಗಿಸಲು ಕೆಲಸ ಮಾಡುತ್ತವೆ. ವಿವಿಧ ಪಡೆಗಳು ಮಾಡುವ ಕೆಲಸವು ಪರಸ್ಪರ ನಿಕಟ ಸಮನ್ವಯದಲ್ಲಿರುತ್ತದೆ.

5- ಹಣಕಾಸು ಗುಪ್ತಚರ ಘಟಕ : FIU-IND ಹಣಕಾಸು ಸಚಿವಾಲಯದ ಅಡಿಯಲ್ಲಿ ಇರಿಸಲಾದ ಕೇಂದ್ರ ಸಂಸ್ಥೆಯಾಗಿದೆ. ಈ ಘಟಕವು ಅನುಮಾನಾಸ್ಪದ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸುವ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ, ಜೊತೆಗೆ ಇದು ಹಣ ವರ್ಗಾವಣೆ ಪ್ರಕರಣಗಳು ಮತ್ತು ಭಯೋತ್ಪಾದಕ ಸಂಘಟನೆಗಳ ಮೂಲಗಳನ್ನು ಸಹ ಪತ್ತೆಹಚ್ಚುತ್ತದೆ.

ಇತರ ಪರಿಹಾರ ಕ್ರಮಗಳು
1)ಭಯೋತ್ಪಾದಕರ ಅಡಗು ತಾಣಗಳನ್ನು ಪತ್ತೆ ಹಚ್ಚುವುದು
2)ಭಯೋತ್ಪಾದಕ ಚಟುವಟಿಕೆಗಳಲ್ಲಿ ಜನ  ತೊಡಗದಂತೆ ಸೂಕ್ತ ಶೈಕ್ಷಣಿಕ ಕ್ರಮ ಕೈಗೊಳ್ಳುವುದು
3)ಜನರಲ್ಲಿ ಐಕ್ಯತೆ ಬಗ್ಗೆ ಜಾಗೃತಿ ಮೂಡಿಸುವುದು
4)ಬೀದಿ ನಾಟಕಗಳ ಮೂಲಕ ಅಂತರರಾಷ್ಟ್ರೀಯ, ರಾಷ್ಟ್ರೀಯ ಬಾವೈಕ್ಯತೆ ಬಗ್ಗೆ ಜಾಗೃತಿ ಮೂಡಿಸುವುದು
5)ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು
6)ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವುದು
7)ಭಯೋತ್ಪಾದನೆ ನಿವಾರಣೆಗೆ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಶ್ರಮಿಸಬೇಕು
8)ಸೂಕ್ತ ತರಬೇತಿ ಪಡೆದ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನೇಮಿಸಿಕೊಳ್ಳುವುದು
9)ಎಲ್ಲಾ ರಾಷ್ಟ್ರಗಳು ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹೊಂದದಂತೆ ಕಾಯ್ದೆ ಜಾರಿಗೆ ತರುವುದು
10)ಭಯೋತ್ಪಾದಕರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಬೇಕು
11)ಸಾರ್ವಜನಿಕ ಸ್ಥಳಗಳಿಗೆ ಹಾಗೂ ಗಣ್ಯವ್ಯಕ್ತಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು
12)ಸಮೂಹ ಮಾಧ್ಯಮಗಳ ಮೂಲಕ ಐಕ್ಯತೆ, ರಾಷ್ಟ್ರೀಯ ಪ್ರಜ್ಞೆ, ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು
13)ನೊಂದ, ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ನೀಡುವುದು
14)ಪುನರ್ವಸತಿ ಸೌಲಭ್ಯ ಕಲ್ಪಿಸುವುದು
15)ಶಾಲಾ ಪಠ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ವಿಷಯ ಅಳವಡಿಸುವುದು
16)ಬೇಡಿಕೆಗಳನ್ನು ಈಡೇರಿಸುವುದು.
17)ಮಕ್ಕಳಿಗೆ ಆರಂಭದಿಂದಲೂ ಜೀವನ ಕೌಶಲ್ಯ ಮತ್ತು ನೈತಿಕ ಶಿಕ್ಷಣ ಒದಗಿಸುವುದು . 

ವಿಶ್ವದ ಅಪಾಯಕಾರಿ ಭಯೋತ್ಪಾದನೆ ಸಂಘಟನೆಗಳು
ದಿ ಇನ್ ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ ಅಂಡ್  ಪೀಸ್  ಬಿಡುಗಡೆ ಮಾಡುವ
ಜಾಗತಿಕ ಭಯೋತ್ಪಾದನಾ ಸೂಚ್ಯಂಕ - 2018 ಪ್ರಕಾರ
1)ಇಸ್ಲಾಮಿಕ್ ಸ್ಟೇಟ್
2)ದಿ ತಾಲಿಬಾನ್
3)ಅಲ್ ಶಬಾಬ್
4)ಬೋಕೋ ಹರಾಮ್

ಜಾಗತಿಕ ಭಯೋತ್ಪಾದನಾ ಸೂಚ್ಯಂಕ 2025 ರ ಪ್ರಕಾರ ಭಯೋತ್ಪಾದನೆ ದಾಳಿಗೆ ತುತ್ತಾದ ಅಗ್ರ ರಾಷ್ಟ್ರಗಳು 
ಬುರ್ಕಿನಾ ಪಾಸೋ-1
ಪಾಕಿಸ್ತಾನ -2
ಸಿರಿಯಾ-3
ಮಾಲಿ -4
ನೈಜರ್ -5
ಭಾರತ-14 ನೇ ಸ್ಥಾನ 
Tehreek-e-Taliban Pakistan ತೆಹರಿಕ್ ಇ ತಾಲಿಬಾನ್ (TTP) ಸಂಘಟನೆಯು ಅತಿ ವೇಗವಾಗಿ ಬೆಳೆಯುತ್ತಿರುವ ಉಗ್ರ ಸಂಘಟನೆಯಾಗಿದೆ. 

ಇಸ್ಲಾಮಿಕ್ ಸ್ಟೇಟ್ (IS) ಇದು ವಿಶ್ವದ ಭಯಾನಕ ಭಯೋತ್ಪಾದನೆ ಸಂಘಟನೆಯಾಗಿದೆ. 

ವಿಶ್ವದಲ್ಲಿನ ಭಯೋತ್ಪಾದನೆ ಘಟನೆಗಳ ಪ್ರಮಾಣ

2023- ರಲ್ಲಿ 21596 ಸಾವು
2022 - ರಲ್ಲಿ 21957 ಸಾವು
2021- ರಲ್ಲಿ 23712 ಸಾವು

ಇನ್ಸ್ಟಿಟ್ಯೂಟ್ ಪಾರ್ ಎಕನಾಮಿಕ್ ಅಂಡ್ ಪೀಸ್
ಸಂಸ್ಥೆಯ  ವರದಿಯಂತೆ
ಭಯೋತ್ಪಾದನೆಯಿಂದ ಸುರಕ್ಷಿತ ದೇಶಗಳು -
ಐಸಲ್ಯಾಂಡ್, ನ್ಯೂಜಿಲ್ಯಾಂಡ್, ಆಸ್ಟ್ರಿಯಾ, ಪೋರ್ಚುಗಲ್, ಡೆನ್ಮಾರ್ಕ್, ಕೆನಡಾ, ಜೆಕ್ ಗಣರಾಜ್ಯ, ಸಿಂಗಾಪುರ, ಜಪಾನ್, ಐರ್ಲೆಂಡ್ ಮುಂತಾದವು

ಭಯೋತ್ಪಾದನೆಯ ಅಸುರಕ್ಷಿತ ದೇಶಗಳು - ಸಿರಿಯಾ, ಯೆಮನ್, ಅಫ್ಘಾನಿಸ್ತಾನ, ಲಿಬಿಯಾ, ದಕ್ಷಿಣ ಸುಡಾನ್, ಸೋಮಾಲಿಯ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಇರಾಕ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ.  ಮುಂತಾದವು


ಶ್ರೀಮಂತ ಭಯೋತ್ಪಾದನೆ ಸಂಘಟನೆಗಳು
2017 ಗ್ಲೋಬಲ್ ಟೆರೆರಿಸಮ್ ಡೆಟಾಬೇಸ್ ಸಮೀಕ್ಷೆ ಪ್ರಕಾರ
1)ಹಿಜ್ ಬಲ್ಲಾಹ
2) ದಿ ತಾಲಿಬಾನ್
3)ಹಮಾಸ್
4)ಅಲ್ ಖೈದಾ
5)ಐ ಎಸ್ ಐ ಎಸ್

ಭಾರತೀಯ ಭಯೋತ್ಪಾದನೆ ಸಂಘಟನೆಗಳ ನಿಷೇಧ
 Unlawful terrorist prevention act 1967 ರ ಪ್ರಕಾರ ಕೇಂದ್ರ ಗೃಹ ಸಚಿವಾಲಯವು ಭಯೋತ್ಪಾದಕ ಸಂಘಟನೆಗಳು ಮತ್ತು ಅಕ್ರಮ ಸಂಘಗಳ ಪಟ್ಟಿಯನ್ನು ನವೀಕರಿಸಿದ್ದು, ಸಚಿವಾಲಯವು ಹೊಸ ಪಟ್ಟಿಯಲ್ಲಿ ಸುಮಾರು 67 ಭಯೋತ್ಪಾದಕ ಗುಂಪುಗಳನ್ನು ಸೇರಿಸಿದೆ. ಇವು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮತ್ತು ದೇಶಕ್ಕೆ ಅಪಾಯಕಾರಿಯಾಗುತ್ತಿರುವ ಸಂಘಟನೆಗಳಾಗಿವೆ ಎಂಬುದು ಗಮನಾರ್ಹ. 
ಪ್ರಮುಖ ಸಂಘಟನೆಗಳು
1)ಅಖಿಲ ಭಾರತ ನೇಪಾಳಿ ಏಕತಾ
2)ಅಲ್ ಬಾದ್ರಾ
3)ಆಲ್ ತ್ರಿಪುರ ಟೈಗರ್ ಫೋರ್ಸ್
4)ಅಲ್ ಖೈದಾ
5)ಅಲ್ ಉಮರ್ ಮುಜಾಹಿದ್ದಿನ್
6)ಮಾವೋಯಿಸ್ಟ
7)ಇಂಡಿಯನ್ ಮುಜಾಹಿದ್ದಿನ್
8) ಜೈಷ್ ಎ ಮೊಹಮ್ಮದ್
9)ಲಷ್ಕರ್ ಎ ತೋಯ್ಬಾ
10)ಜೆ ಕೆ ಎಲ್ ಎಫ್  
11)ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ 
ಮುಂತಾದ ಪ್ರಮುಖ ಸಂಘಟನೆಗಳು

ಭಯೋತ್ಪಾದನೆ ಸಂಘಟನೆಗಳಿಂದ ಇತ್ತಿಚಿನ ಬಾಂಬ್ ಸ್ಫೋಟ ಪ್ರಕರಣಗಳು
ಏಪ್ರಿಲ್ 22, 2025: ಪಹಲ್ಗಾಮ್ ದಾಳಿ.ಸ್ಥಳ ಕಾಶ್ಮೀರ, ಸಾವು- 28  

ಮಾರ್ಚ್ 7 2019 ರ ಜಮ್ಮು ಬಸ್ ನಿಲ್ದಾಣದ ಗ್ರೆನೇಡ್ ಸ್ಫೋಟ- ಸ್ಥಳ ಜಮ್ಮು ಕಾಶ್ಮೀರ, ಸಾವು- 3

2019 ಫೆಬ್ರುವರಿ 14 ಜಮ್ಮು ಕಾಶ್ಮೀರ ರಾಜ್ಯದ ಪುಲ್ವಾಮಾ ಜಿಲ್ಲೆಯ ಆವಂತಿಪುರ ರಸ್ತೆ ಯಲ್ಲಿ ನಡೆದ ಯೋದರ ಮೇಲಿನ ದಾಳಿ. ಇದರಿಂದ 46 ಜನ ಭಾರತೀಯ  ಯೋಧರು ಮೃತಪಟ್ಟಿದ್ದರು. 35 ಜನ ಗಾಯಗೊಂಡಿದ್ದರು. ಈ ದಾಳಿ ಜೈಷ್ ಎ ಮೊಹಮ್ಮದ್  ಸಂಘಟನೆ ದಾಳಿ ಮಾಡಿತ್ತು. 

2018 ಮಾರ್ಚ್ 13 ರಂದು ಛತ್ತೀಸಗಡದ ಸುಕ್ಮಾದಲ್ಲಿ ನಡೆದ ಘಟನೆಯಲ್ಲಿ 09 ಜನ ಮೃತಪಟ್ಟಿದ್ದರು. ಮಾವೋಯಿಸ್ಟ ಭಯೋತ್ಪಾದನೆ ಸಂಘಟನೆ ದಾಳಿ ಮಾಡಿತ್ತು. 

2018 ಫೆಬ್ರುವರಿ 10 ರಂದು  ಜಮ್ಮು ಕಾಶ್ಮೀರ ರಾಜ್ಯದ ಸಂಜುವಾನ್ ದಾಳಿಯಲ್ಲಿ 11 ಜನ ಮೃತಪಟ್ಟಿದ್ದರು, 11ಜನ ಗಾಯಗೊಂಡಿದ್ದರು. ಈ ದಾಳಿಯಲ್ಲಿ  ಜೈಷ್ ಎ ಮೊಹಮ್ಮದ್  ಸಂಘಟನೆ ದಾಳಿ ಮಾಡಿತ್ತು.

2017 ಜುಲೈ  11 ರಂದು ಜಮ್ಮು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯ ಅಮರನಾಥ ಯಾತ್ರಾ ದಾಳಿ ಯಲ್ಲಿ  7 ಜನ ಮರಣ ಹೊಂದಿದ್ದರು,  6 ಜನ ಗಾಯಗೊಂಡಿದ್ದರು. ಈ ದಾಳಿ ಲಷ್ಕರ್ ಎ ತೋಯ್ಬಾ ಸಂಘಟನೆಯಿಂದಾಗಿತ್ತು.


ವಿಶ್ವ ಸಂಸ್ಥೆಯ  ಭದ್ರತಾ ಮಂಡಳಿಯು  ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ  ಎಂದು ಘೋಷಿಸಿದೆ. ಇದು ಒಂದು ಉಗ್ರರ ಸಂಹಾರಕ್ಕೆ  ಅತ್ಯುತ್ತಮ ಹೆಜ್ಜೆಯಾಗಿದೆ. ಶ್ರೀಲಂಕಾದಲ್ಲಿ ಮಹಿಳಾ ಉಗ್ರಗಾಮಿಗಳು ಬುರ್ಖಾ ಧರಿಸಿ  ಬಾಂಬ್ ಸ್ಫೋಟ ಮಾಡಿ ಹಿಂಸಾಚಾರ ಮಾಡಿದ್ದಕ್ಕೆ  ಭಾರತದಲ್ಲಿ ಬುರ್ಖಾ ನಿಷೇಧಕ್ಕೆ  ಚಿಂತನೆನಡೆಯುತ್ತಿದೆ.

2025 ಮೇ ದಲ್ಲಿ ಭಾರತದಲ್ಲಿ ಇತ್ತಿಚಿಗೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರನ್ನು ಸದೆಬಡೆಯುವ ಪ್ರಯತ್ನ ನಡೆಯಿತು. ಭಯೋತ್ಪಾದನೆ ಮಟ್ಟ ಹಾಕಲು ರಾಜತಾಂತ್ರಿಕ ಯುದ್ಧ ಸಾರಲಾಯಿತು. ನಂತರ ಒಪ್ಪಂದದ ಮೂಲಕ ಯುದ್ಧವನ್ನು ನಿಲ್ಲಿಸಲಾಯಿತು. 

ಉಗ್ರರ 9 ಶಿಬಿರ ಧ್ವಂಸ
ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ 9 ಶಿಬಿರಗಳನ್ನು 'ಆಪರೇಷನ್ ಸಿಂಧೂರ' ಧ್ವಂಸಗೊಳಿಸಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ಗಳಿಗೆ ಕಾರಣವಾಗಿರುವ ಉಗ್ರ ಸಂಘಟನೆ ಗಳಾದ ಲಷ್ಕ‌ರ್ ಇ ತೋಯ್ದಾ (ಎಲ್‌ಇಟಿ), ಜೈಷ್ ಇ ಮೊಹಮ್ಮದ್ (ಜೆಇಎಂ) ಮತ್ತು ಹಿಬ್ಬುಲ್ ಮುಜಾಹಿದೀನ್‌ಗಳಿಗೆ ಖಡಕ್‌ ಎಚ್ಚರಿಕೆ ನೀಡಲಾಗಿದೆ. 


ಉಪಸಂಹಾರ -  ಭಯೋತ್ಪಾದನೆ ಎಂಬುದು ಅಳಿಸಲಾಗದ ಕಪ್ಪು ಮಸಿಯಂತಿದ್ದು ಸರ್ಕಾರ ಎಷ್ಟೇ ಕ್ರಮ ಕೈಗೊಂಡರು ಇದರ ನಿವಾರಣೆ ಕಷ್ಟ ಅನಿಸುತ್ತಿದೆ. ಭಯೋತ್ಪಾದನೆ ನಿಗ್ರಹ ದಿನ - ಮೇ 21 ರಂದು ಪ್ರತಿ ವರ್ಷ ಭಾರತದಲ್ಲಿ ಆಚರಿಸಲಾಗುತ್ತದೆ. ಈ ಭಯೋತ್ಪಾದನೆ ವಿರೋಧಿ ದಿನಾಚರಣೆಯನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಪೆರಂಬೂರಿನಲ್ಲಿ ಎಲ್ ಟಿ ಟಿ ಇ ಉಗ್ರರು  ಗುಂಡು ಹಾರಿಸಿ ಕೊಂದಿದ್ದರು  ಅವರ ಪುಣ್ಯತಿಥಿ ನಿಮಿತ್ತ ಈ ಭಯೋತ್ಪಾದನೆ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭಯೋತ್ಪಾದನೆ ನಿಗ್ರಹದ ಕುರಿತು ಚರ್ಚೆ, ವಿಚಾರ ಸಂಕಿರಣ ನಡೆಯುತ್ತಿವೆ.



        

Tuesday, 13 May 2025

ಸಮಾಜ ಕಾರ್ಯದಲ್ಲೂ ಇದೆ ಉನ್ನತ ಶಿಕ್ಷಣ : ಉದ್ಯೋಗಾವಕಾಶಗಳಲ್ಲಿ ಹೆಚ್ಚಳ, ಎಮ್.ಎಸ್.ಡಬ್ಲ್ಯೂ ಕೋರ್ಸಗೆ ಬಹುಬೇಡಿಕೆ



ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ. 

ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕೋರ್ಸ್ ಗಳ ಬಗ್ಗೆ ಎಲ್ಲರಿಗೂ ಗೊತ್ತು.ಆದರೆ ಎಮ್ ಎಸ್ ಡಬ್ಲ್ಯೂ ಕೋರ್ಸ ಬಗ್ಗೆ ಕೆಲವರಿಗೆ ಮಾಹಿತಿ ಅಲ್ಪ ಎನ್ನಬಹುದು. ಕಲಾ ವಿಭಾಗದ ಕೋರ್ಸಗಳಲ್ಲಿಯೇ  ಅತ್ಯಂತ ಬೇಡಿಕೆ ಹೊಂದಿರುವ ಎಮ್ ಎಸ್ ಡಬ್ಲ್ಯೂ (ಸ್ನಾತಕೋತ್ತರ ಸಮಾಜ ಕಾರ್ಯ) ವಿಶಿಷ್ಟ ಅಧ್ಯಯನ ಮತ್ತು ತನ್ನದೇ ಆದ ಕಾರ್ಯಕ್ಷೇತ್ರವನ್ನು ಹೊಂದಿದೆ. ಕೋರ್ಸ ನ ಅವಧಿ ಪೂರ್ಣಗೊಳ್ಳುವವರೆಗೆ ಹಲವಾರು ಸಂಸ್ಥೆಗಳು, ಕಂಪೆನಿಗಳು, ಆಸ್ಪತ್ರೆ, ಕೈಗಾರಿಕೆ ಸೇರಿ ಕ್ಷೇತ್ರಕಾರ್ಯ ಅಭ್ಯಾಸ ಮಾಡುವ ವಿದ್ಯಾರ್ಥಿಗಳು. ತಮ್ಮ ಕಾರ್ಯ ನೈಪುಣ್ಯತೆ ಮತ್ತು ಕೌಶಲ್ಯಗಳಿಂದ ನಾಲ್ಕನೇ ಸೆಮಿಸ್ಟರ್ ಪೂರ್ಣಗೊಳಿಸುವ ಮುಂಚಿತವಾಗಿಯೇ ಉದ್ಯೋಗಾವಕಾಶ ಹೊಂದಿರುತ್ತಾರೆ ಎಂಬುದು ಈ ಕೋರ್ಸ್ ನ ವೈಶಿಷ್ಟ್ಯವಾಗಿದೆ.

ಎಮ್ ಎಸ್ ಡಬ್ಲ್ಯೂ ಕೋರ್ಸ ಬಗ್ಗೆ ಮೊದಲ ಬಾರಿಗೆ ಕೇಳಿರುವವರಲ್ಲಿ ಗೊಂದಲ ಇರಬಹುದು . ಆದರೆ ಒಮ್ಮೆ ಈ ಕೋರ್ಸ್ ಸೇರುವವರ ಭವಿಷ್ಯ ಮಾತ್ರ ಉಜ್ವಲವಾಗಿದೆ.  ಸಮಾಜ ಕಾರ್ಯವು ಒಂದು ವೃತ್ತಿಪರ ಕೋರ್ಸ್ ಆಗಿದ್ದು, ಇದು ಸಂತೋಷದಾಯಕ, ಆಸಕ್ತಿದಾಯಕ ಕಲಿಕೆಗೆ, ನಾಯಕತ್ವ, ವ್ಯಕ್ತಿತ್ವ  ಬೆಳವಣಿಗೆಗೆ, ಮಾದರಿ ಪ್ರಜೆಯಾಗಿ ರೂಪುಗೊಳ್ಳಲು ಈ ಕೋರ್ಸ್ ಸಹಾಯಕವಾಗಿದೆ. ವಿಜ್ಞಾನ ವಿಷಯಗಳಲ್ಲಿ  ಪ್ರಯೋಗಾಲಯದಲ್ಲಿ  ಪ್ರಯೋಗದ  ಮೂಲಕ ಅನುಭವ ಪಡೆದರೆ ಇಲ್ಲಿ ಇಡಿ ಸಮಾಜಕಾರ್ಯಕರ್ತರಿಗೆ ಇಡಿ ಸಮುದಾಯವೇ ಪ್ರಯೋಗಾಲಯವಾಗಿದೆ.ವರ್ಗದಲ್ಲಿ ಕಲಿತ ಥಿಯರಿ ವಿಷಯಗಳನ್ನು ಸಮುದಾಯದಲ್ಲಿ ಆಚರಣೆಗೆ ತರಲಾಗುತ್ತದೆ. 

ಏನಿದು ಎಮ್ ಎಸ್ ಡಬ್ಲ್ಯೂ ಕೋರ್ಸ್?
ಎಮ್ ಎಸ್ ಡಬ್ಲ್ಯೂ (ಸ್ನಾತಕೋತ್ತರ ಸಮಾಜ ಕಾರ್ಯ Master of Social Work ) ಇದು ಎರಡು ವರ್ಷಗಳ ನಾಲ್ಕು ಸೆಮಿಸ್ಟರ್ ಕೋರ್ಸ್ ಆಗಿದ್ದು, ಥಿಯರಿ ವಿಷಯಗಳೂಂದಿಗೆ ಕಾರ್ಯಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಇರುತ್ತದೆ.

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ  ಈ ಎಮ್ ಎಸ್ ಡಬ್ಲ್ಯೂ ಕೋರ್ಸ ವ್ಯವಸ್ಥಿತವಾಗಿ ನಡೆಯುತ್ತಿದೆ.ಪೂರ್ಣಾವಧಿ ನುರಿತ ಪ್ರಾಧ್ಯಾಪಕರು ಎಮ್ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಗೆ ಬೋಧಿಸುವುದರೊಂದಿಗೆ ಸಮಾಜ ಕಾರ್ಯ ವಿಭಾಗದಡಿಯಲ್ಲಿ ಸಮಾಜಮುಖಿ, ಜ್ಞಾನಮುಖಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾರೆ. ಸಾಮಾಜಿಕ ನ್ಯಾಯ, ಮಾನವೀಯ ನೆಲೆಯಲ್ಲಿ ತತ್ವಗಳನ್ನು ಪಾಲಿಸುತ್ತಾ. ಅಗತ್ಯತೆವುಳ್ಳವರಿಗೆ ಸ್ಪಂದಿಸುತ್ತಾ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಈ ಸಮಾಜ ಕಾರ್ಯ ವಿಭಾಗವು ಬೆಳಗಾವಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. 

ಎಮ್ ಎಸ್ ಡಬ್ಲ್ಯೂ ಕೋರ್ಸ ಪಡೆಯಲು ಯಾರು ಅರ್ಹರು? 
ಎಮ್ ಎಸ್ ಡಬ್ಲ್ಯೂ ಕೋರ್ಸ ಪಡೆಯಲು ಇಚ್ಛಿಸುವವರು ಯಾವುದೇ ಪದವಿ ಪಡೆದಿದ್ದರೂ ಕೂಡಾ ಅರ್ಹರಾಗಿರುತ್ತಾರೆ.ಇದೊಂದು ವೃತ್ತಿಪರ ಕೋರ್ಸ್ ಆಗಿದ್ದು, BSW, BA, Bcom, BBA, BSc, BCA, BE, LLB ಹೀಗೆ ಯಾವುದೇ ಪದವಿ ಪಡೆದವರು ಕೂಡ ಈ ಕೋರ್ಸ್ ಸೇರಿಕೊಳ್ಳಬಹುದು. 

ಎಮ್ ಎಸ್ ಡಬ್ಲ್ಯೂ ಕೋರ್ಸ ಮಾಧ್ಯಮ  - ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ 

ಶುಲ್ಕ - ಎಮ್. ಎ ಕೋರ್ಸ್ ಗೆ ಇರುವ ಶುಲ್ಕ ಈ ಎಮ್ ಎಸ್ ಡಬ್ಲ್ಯೂ ಕೋರ್ಸಿ ಗೆ ಇರುತ್ತದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಕಡಿಮೆ ಶುಲ್ಕದಲ್ಲಿ ಓದಿ ಉತ್ತಮ ಅವಕಾಶಗಳನ್ನು ಪಡೆಯಬಹುದಾಗಿದೆ. 

ವಿಶೇಷಿಕರಣದೊಂದಿಗೆ(Specilization) ಎಮ್ ಎಸ್ ಡಬ್ಲ್ಯೂ ಅಧ್ಯಯನ
ಎಮ್ ಎಸ್ ಡಬ್ಲ್ಯೂ ಕೋರ್ಸಿನಲ್ಲಿ ಒಟ್ಟು ಮೂರು Specilization ಅವಕಾಶಗಳಿವೆ. ಒಂದೊಂದು Specilizationಗಳು ತನ್ನದೇ ಆದ ವಿಶಿಷ್ಟ ಅವಕಾಶಗಳನ್ನು ಹೊಂದಿವೆ.
ಅವುಗಳೆಂದರೆ
1)ಮಾನವ ಸಂಪನ್ಮೂಲ ನಿರ್ವಹಣೆ (Human Resource Management) 
2)ಸಮುದಾಯ ಅಭಿವೃದ್ಧಿ (Community Development) 
3)ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಮಾಜ ಕಾರ್ಯ (Medical and Psychiatric Social Work)

ಸಮಾಜ ಕಾರ್ಯಕ್ಕೆ ಕ್ಷೇತ್ರಕಾರ್ಯವೇ ಆಧಾರ ಸ್ಥಂಭ, ಉದ್ಯೋಗಾವಕಾಶಗಳಿಗೆ ಆಸರೆ

ಎಮ್ ಎಸ್ ಡಬ್ಲ್ಯೂ ಕೋರ್ಸನ ಪ್ರಾಯೋಗಿಕ/ಕ್ಷೇತ್ರಕಾರ್ಯ ಘಟಕಾಂಶಗಳು

1)ಪ್ರಥಮ ಸೆಮಿಸ್ಟರ್ ನಲ್ಲಿ Skill Lab ಮೂಲಕ ಮೂಲಭೂತ ಜೀವನ ಕೌಶಲ್ಯ/ಔದ್ಯೋಗಿಕ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಯುವ ಅವಕಾಶ,ಸಮಾಜ ಕಾರ್ಯ ಆಚರಣೆಯಲ್ಲಿರುವ ಪ್ರತಿಷ್ಠಿತ ಸಂಸ್ಥೆಗಳು, ಕಂಪನಿ/ಕೈಗಾರಿಕೆಗಳು, ಆಸ್ಪತ್ರೆಗಳಿಗೆ ಅಧ್ಯಯನ ಭೇಟಿ ನೀಡಿ ನೈಜ ಕಲಿಕೆಗೆ ಅವಕಾಶ ದೊರೆಯುತ್ತದೆ. ನಂತರ ಒಂದು ಸಂಸ್ಥೆಯಲ್ಲಿ ವಾರದಲ್ಲಿ ಎರಡು ದಿನ ಕ್ಷೇತ್ರ ಕಾರ್ಯ ಮೂಲಕ ಸಂಸ್ಥೆಯೊಂದಿಗೆ ಸಹಭಾಗಿತ್ವ ಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ಪ್ರಾಯೋಗಿಕ ಕಲಿಕೆ ಬೋಧಕ ಸಿಬ್ಬಂದಿಯಿಂದ Mentorship ಅಡಿಯಲ್ಲಿ ನಡೆಯುತ್ತದೆ ಮತ್ತು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗುಣಮಟ್ಟದ ವರದಿ ತಯಾರಿಕೆ ಬಗ್ಗೆ ಕಲಿಯುತ್ತಾರೆ. 


2)ಎರಡನೇ ಸೆಮಿಸ್ಟರ್ ನಲ್ಲಿ ವಾರದಲ್ಲಿ ಎರಡು ದಿನ ಕ್ಷೇತ್ರಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಥಿಯರಿ ವಿಷಯಗಳ ಪರಿಕಲ್ಪನೆಯನ್ನು ಕಾರ್ಯ ಕ್ಷೇತ್ರದಲ್ಲಿ ಕಲಿಯುತ್ತಾರೆ. ಕಾರ್ಯಕ್ರಮ ಯೋಜನೆ ಮತ್ತು ನಿರ್ವಹಣೆ , ಕೇಸ್ ಸ್ಟಡಿ, ಗುಂಪು ಅಧ್ಯಯನ ಸಮುದಾಯ ಸಂಘಟನೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. 
ಅಷ್ಟೇ ಅಲ್ಲದೆ 8-10 ದಿನಗಳ ಸಮಾಜ ಕಾರ್ಯ ಶಿಬಿರವನ್ನು ಗ್ರಾಮೀಣ ಅಥವಾ ಆದಿವಾಸಿ ಸಮುದಾಯಗಳಲ್ಲಿ ಆಚರಿಸಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ಒಂದು ಸಮುದಾಯದಲ್ಲಿ ಇದ್ದುಕೊಂಡು ಜನರ ಸಹಭಾಗಿತ್ವದಲ್ಲಿ ಜನರ ಸ್ಥಿತಿಗತಿ ಅರ್ಥೈಸಿಕೊಂಡು ಸಮುದಾಯ ಸಂಘಟನೆಯಲ್ಲಿ ನಿರತರಾಗುತ್ತಾರೆ. ಈ ಸೆಮಿಸ್ಟರ್ ಅಂತ್ಯಕ್ಕೆ ಥಿಯರಿ ಪರೀಕ್ಷೆ ನಂತರ Summer Placement ಎಂಬ ಕ್ಷೇತ್ರಕಾರ್ಯದಲ್ಲಿ ತಮ್ಮ ಸ್ವ ಗ್ರಾಮ, ಪಟ್ಟಣಗಳಲ್ಲಿ ಸಮುದಾಯ ಸಂಘಟನೆ, ಸಾಮಾಜಿಕ ಕ್ರಿಯೆಯಂತಹ ನಾವೀನ್ಯತೆಯ ಚಟುವಟಿಕೆಗಳಲ್ಲಿ ತೊಡುಗುವ ಅವಕಾಶ ದೊರೆಯುತ್ತದೆ.


3)ಮೂರನೇ ಸೆಮಿಸ್ಟರ್ ನಲ್ಲಿ ತಮಗೆ ಆಸಕ್ತಿ ಇರುವ ಯಾವುದಾದರೂ ಒಂದು ವಿಶೇಷಿಕರಣ(Specilization) ಆಯ್ದುಕೊಂಡು ಅಧ್ಯಯನದಲ್ಲಿ ನಿರತರಾಗುತ್ತಾರೆ. ಈ Specilization ದಂತೆ ರಾಜ್ಯ ಮತ್ತು ಹೊರ ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳು, ಕಂಪೆನಿಗಳು ಮತ್ತು ಆಸ್ಪತ್ರೆಗಳು, ಅಂತರರಾಷ್ಟ್ರೀಯ ಸರ್ಕಾರೇತರ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಅಧ್ಯಯನ ಪ್ರವಾಸ(Exposure Visits) ಕೈಗೊಂಡು ಕಲಿಯುತ್ತಾರೆ. ಅಷ್ಟೇ ಅಲ್ಲದೆ ಸ್ಥಳೀಯವಾಗಿ Specilization ಅನುಗುಣವಾಗಿ ಕ್ಷೇತ್ರ ಕಾರ್ಯದಲ್ಲಿ ನಿರತರಾಗುತ್ತಾರೆ. ಇಷ್ಟರಲ್ಲಿಯೇ ಸಮಾಜ ಕಾರ್ಯದ ಆಚರಣೆ ಮತ್ತು ಜ್ಞಾನದ ಪಾಂಡಿತ್ಯ, ಕೌಶಲ್ಯಭಿವೃದ್ಧಿಯನ್ನು ವಿದ್ಯಾರ್ಥಿಗಳು ಹೊಂದುತ್ತಾರೆ.


4)ನಾಲ್ಕನೇ ಸೆಮಿಸ್ಟರ್ ನಲ್ಲಿ ಕೂಡಾ ವಾರದಲ್ಲಿ ಒಂದು ದಿನ ಕ್ಷೇತ್ರ ಕಾರ್ಯ ಹಾಗೂ ಒಂದು ದಿನ ಸಮಾಜ ಕಾರ್ಯ ಸಂಶೋಧನೆಯಲ್ಲಿ(Research Project) ತೊಡಗುತ್ತಾರೆ. ಒಂದು ಸಮಸ್ಯೆ ಅಥವಾ ವಿಷಯ ತೆಗೆದುಕೊಂಡು ವೈಜ್ಞಾನಿಕವಾಗಿ ಅಭ್ಯಸಿಸಿ ಪರಿಹಾರಕ್ಕೆ ಸೂಕ್ತ ಸಲಹೆಗಳನ್ನು ಒದಗಿಸುತ್ತಾರೆ. ಅಷ್ಟೇ ಅಲ್ಲದೆ ನಾಲ್ಕನೇ ಸೆಮಿಸ್ಟರ್ ನ ಥಿಯರಿ ಪರೀಕ್ಷೆ ಮುಗಿಸಿ ಒಂದು ತಿಂಗಳು Block Placement ಗೆ ದೊರದ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಾರೆ. ವಿದ್ಯಾರ್ಥಿಗಳ ಪರಿಪೂರ್ಣತೆಯನ್ನು ಗಮನಿಸಿ ಕಂಪನಿ, ಸಂಸ್ಥೆಗಳು, NGO, ಆಸ್ಪತ್ರೆಗಳು ಅವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಒಟ್ಟಿನಲ್ಲಿ ಎಮ್ ಎಸ್ ಡಬ್ಲ್ಯೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯದ ಅವಕಾಶದಿಂದ ಕೋರ್ಸ್ ಪೂರ್ಣಗೊಳ್ಳುವ ಮುಂಚಿತವಾಗಿಯೇ ಉದ್ಯೋಗಾವಕಾಶ ಪಡೆಯುವ ಬೇಡಿಕೆ ಹೊಂದುತ್ತಾರೆ.

ಥಿಯರಿ (Theory) ಅಧ್ಯಯನ ವಿಷಯಗಳು
ಸಮಾಜ ಕಾರ್ಯ ಮತ್ತು ಅದರ ವಿಧಾನಗಳು ಮತ್ತು ಆಚರಣೆಗಳು, ತತ್ವಶಾಸ್ತ್ರ ಮತ್ತು ಮನೋವಿಜ್ಞಾನ, ಸಮಾಜ ವಿಜ್ಞಾನಗಳು(ಸಮಾಜಶಾಸ್ತ್ರ, ಮಾನವಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಇತ್ಯಾದಿ) 
ಕಾನೂನು ಮತ್ತು ಅಪರಾಧಶಾಸ್ತ್ರ 
ವಿಪತ್ತು ನಿರ್ವಹಣೆ, ಪ್ರಾಜೆಕ್ಟ್ ನಿರ್ವಹಣೆ NGO ನಿರ್ವಹಣೆ. 
ಜೀವನ ಕೌಶಲ್ಯಗಳು, ಡಿಜಿಟಲ್ ಮತ್ತು ಮಾಧ್ಯಮ ಕೌಶಲ್ಯಗಳು , ಸಮಾಜಕಾರ್ಯದ ವೃತ್ತಿಪರ ಸಾಮರ್ಥ್ಯಗಳು, 
ದುರ್ಬಲ ಸಮುದಾಯದೊಂದಿಗೆ ಸಮಾಜಕಾರ್ಯ (ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು) 

ಮಾನವ ಸಂಪನ್ಮೂಲ ನಿರ್ವಹಣೆ :ಕಾರ್ಮಿಕ ಕಾನೂನುಗಳು, ಔದ್ಯೋಗಿಕ ಸಮಾಜ ಕಾರ್ಯ, ಕಾರ್ಮಿಕ ಸಂಬಂಧಗಳು, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ, ಸಾಂಸ್ಥಿಕ ವರ್ತನೆ ಮತ್ತು ಅಭಿವೃದ್ಧಿ ಇತ್ಯಾದಿ. 

ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಮಾಜ ಕಾರ್ಯ - ಆರೋಗ್ಯ ಮತ್ತು ಮಾನಸಿಕ ಆರೋಗ್ಯ, ಆಪ್ತಸಮಾಲೋಚನೆ, ಆರೋಗ್ಯ ಆಡಳಿತ ಮತ್ತು ಸಮುದಾಯ ಆರೋಗ್ಯ, ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಮಾಜ ಕಾರ್ಯ, ವೃದ್ಧಾಪ್ಯ ಸಮಾಜ ಕಾರ್ಯ, ಶಾಲಾ ಸಮಾಜ ಕಾರ್ಯ, ಸಾಮಾಜಿಕ ರಕ್ಷಣೆ ಇತ್ಯಾದಿ. 
ಸಮುದಾಯ ಅಭಿವೃದ್ಧಿ - ಗ್ರಾಮೀಣ ಆಡಳಿತ, ನಗರ ಆಡಳಿತ, ಆದಿವಾಸಿ ಅಭಿವೃದ್ಧಿ, ಪರಿಸರಾತ್ಮಕ ಸಮಾಜ ಕಾರ್ಯ, ಮಹಿಳೆ, ಮಕ್ಕಳು ಹಾಗೂ ವಿಶೇಷಚೇತನರೊಂದಿಗೆ ಸಮಾಜ ಕಾರ್ಯ. 

ಇತ್ಯಾದಿ. 

ಉದ್ಯೋಗಾವಕಾಶಗಳು
1)Human Resource Manager ಮಾನವ ಸಂಪನ್ಮೂಲ ವ್ಯವಸ್ಥಾಪಕರು 
2)Employee Welfare Officer ಉದ್ಯೋಗಿ ಕಲ್ಯಾಣ ಅಧಿಕಾರಿ 
3)Labour Welfare officer ಕಾರ್ಮಿಕ ಕಲ್ಯಾಣ ಅಧಿಕಾರಿ 
4)CSR Manager ಕಾರ್ಪೊರೇಟ್ ಸಾಂಸ್ಥಿಕ ಅಧಿಕಾರಿ 
5)Project Officer and Coordinators in various State and Central Governments Projects. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಲ್ಲಿ ಸಂಯೋಜಕರು ಮತ್ತು ಯೋಜನಾ ಅಧಿಕಾರಿ. ಉದಾ-ಸ್ವಚ್ಛ ಭಾರತ ಅಭಿಯಾನ, ಜಲ ಜೀವನ ಮಶಿನ್, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಪೋಷಾನ್ ಅಭಿಯಾನ ಇತ್ಯಾದಿ. 
6)Social Workers and Counselors in Various Settings ವಿವಿಧ ಕ್ಷೇತ್ರಗಳಲ್ಲಿ ಆಪ್ತಸಮಾಲೋಚಕರಾಗಿ ಮತ್ತು ಸಮಾಜ ಕಾರ್ಯಕರ್ತರು: ಸಾಂತ್ವನ ಮಹಿಳಾ ಸಹಾಯವಾಣಿ, ಕೌಟುಂಬಿಕ ಸಲಹಾ ಕೇಂದ್ರ, ಕೌಟುಂಬಿಕ ನ್ಯಾಯಾಲಯ, ರಾಜ್ಯ ಮಹಿಳಾ ಆಯೋಗ, ಸಖಿ ಒನ್ ಸ್ಟಾಪ್ ಸೆಂಟರ್, ಮಕ್ಕಳ ಸಹಾಯವಾಣಿ, ನಿರ್ಭಯ ಆಪ್ತಸಮಾಲೋಚನೆ ಕೇಂದ್ರ, ವೃದ್ಧಾಶ್ರಮ,ದತ್ತು ಕೇಂದ್ರಗಳು, ಅನಾಥಾಶ್ರಮ, ಡೇ ಕೇರ್ ಸೆಂಟರ್, ಎಲ್ಲ ಹಂತದ ಆರೋಗ್ಯ ಕೇಂದ್ರಗಳಲ್ಲಿನ ಎನ್ ಸಿ. ಡಿ, ಐ. ಸಿ. ಟಿ. ಸಿ ಹಾಗೂ ಎ. ಆರ್.ಟಿ ಕೇಂದ್ರಗಳು, ತೆರೆದ ತಂಗುದಾಣಗಳು ಇತ್ಯಾದಿ . 
7)Medical Social Workers in Hospitals ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಮಾಜ ಕಾರ್ಯಕರ್ತರು
8)Psychiatric Social Workers in Mental Hospitals ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು 
9)Public Relation Officer ಸಾರ್ವಜನಿಕ ಸಂಪರ್ಕ ಅಧಿಕಾರಿ 
10)School Social Workers, Life Skills Trainers, and  School Counselors ಶಾಲಾ ಸಮಾಜ ಕಾರ್ಯಕರ್ತರು, ಜೀವನ ಕೌಶಲ್ಯ ತರಬೇತಿದಾರರು ಮತ್ತು ಶಾಲಾ ಆಪ್ತಸಮಾಲೋಚಕರು
11)Child Development Project Officer ಶಿಶು ಅಭಿವೃದ್ಧಿ ಯೋಜನಾಧಿಕಾರಿ 
12)Child Protection officer ಮಕ್ಕಳ ರಕ್ಷಣಾ ಅಧಿಕಾರಿ 
13)Clinical Social Worker ಚಿಕಿತ್ಸಾತ್ಮಕ ಸಮಾಜಕಾರ್ಯಕರ್ತರು
14)Jobs in Social Medicine and Community Medicine. ಸಾಮಾಜಿಕ ಔಷಧಿ ಮತ್ತು ಸಮುದಾಯ ಔಷಧಿ ವಿಭಾಗಗಳಲ್ಲಿ ಉದ್ಯೋಗಾವಕಾಶ 
15)Research officer ಸಂಶೋಧನಾ ಅಧಿಕಾರಿ
16)Jobs in International Organisation and UNICEF and WHO Projects. ಅಂತರರಾಷ್ಟ್ರೀಯ ಸಂಘಟನೆಗಳಲ್ಲಿ ಉದ್ಯೋಗಾವಕಾಶ ಮತ್ತು ಯುನಿಸೆಫ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾಜೆಕ್ಟ್ ಗಳಲ್ಲಿ ಉದ್ಯೋಗಾವಕಾಶ 
17)ಬಾಲ ನ್ಯಾಯ ಮಂಡಳಿ, ಮಕ್ಕಳ ಪರೀಕ್ಷಣಾಲಯಗಳು, ಜೈಲುಗಳಲ್ಲಿ ಆಪ್ತಸಮಾಲೋಚಕರು ಮತ್ತು ಸಮಾಜ ಕಾರ್ಯಕರ್ತರು 
18)Lecturer in Colleges and Professors in Universities. ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ 
ಇತ್ಯಾದಿ ಉದ್ಯೋಗಾವಕಾಶಗಳು. 


ಕೋರ್ಸಿನ ಅವಕಾಶಗಳು ಮತ್ತು ಸಾಮರ್ಥ್ಯ 
ಸ್ವ ಸಹಾಯ ಸಂಘಗಳ ನಿರ್ವಹಣೆ, ಸ್ವ ಸ್ವಯಂ ಸೇವಾ  ಸಂಸ್ಥೆಗಳು, ಟ್ರಸ್ಟ್, ಕಂಪನಿ, ಸಹಕಾರಿ ಸಂಘಗಳ ನೋಂದಣಿ ಮತ್ತು ನಿರ್ವಹಣೆಗೆ ಸಹಾಯಕ. 
ಉತ್ತಮ ನಾಯಕತ್ವ ಮತ್ತು ಮಾತುಗಾರಿಕೆ ಹೊಂದಲು ಸಹಾಯಕ. 
ಉನ್ನತ ಶಿಕ್ಷಣಕ್ಕೂ ಸಹಾಯ 
ಈ ಕೋರ್ಸ್ ಮುಗಿಸಿದ ನಂತರ ಬಿ. ಈಡಿ, ಎಲ್. ಎಲ್. ಬಿ, ಪಿ.ಹೆಚ್. ಡಿ ಮತ್ತು ಎಮ್. ಫಿಲ್ ದಂತಹ ಕೋರ್ಸಗಳನ್ನು ಕೈಗೊಳ್ಳಬಹುದು. 


ಉನ್ನತ ಶಿಕ್ಷಣದೊಂದಿಗೆ ಶಿಷ್ಯವೇತನವೂ ಲಭ್ಯ 
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಇಲಾಖೆಯಿಂದ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನವೂ ಲಭಿಸುತ್ತದೆ. 

ಟ್ಟಿನಲ್ಲಿ ಎಮ್ ಎಸ್ ಡಬ್ಲ್ಯೂ ಕೋರ್ಸ ಒಂದು ವೃತ್ತಿಪರ ಕೋರ್ಸ್ ಆಗಿದ್ದು. ನಂಬಿ ಬಂದವರನ್ನು ಕೈ ಬಿಡಲಾರದು ಏನಾದರೂ ಕೊಟ್ಟೆ ಕೊಡುತ್ತದೆ ಎಂದು ಹೇಳಬಹುದು. 


ಬೈರಪ್ಪ ಎಲ್ ಹಾಲಪ್ಪಗೋಳ 
ಸಮಾಜ ಕಾರ್ಯ ವಿಭಾಗ 
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ 
9901034679 

ಎಮ್ ಎಸ್ ಡಬ್ಲ್ಯೂ ಕೋರ್ಸ ಪ್ರವೇಶಾತಿ ಮಾಹಿತಿಗಾಗಿ ಈ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ 
https://chat.whatsapp.com/KX5oIhK3zaYBkBhzs1N4mw