ವಿಶ್ವ ಸಮಾಜ ಕಾರ್ಯ ದಿನಾಚರಣೆ-2019
ವಿಶ್ವ ಸಮಾಜ ಕಾರ್ಯ ದಿನಾಚರಣೆಯನ್ನು ವಿಶ್ವದಾದ್ಯಂತ ವೃತ್ತಿಪರ ಸಮಾಜಕಾರ್ಯಕರ್ತರು, ಸಮಾಜ ಕಾರ್ಯ ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು ಸಂಭ್ರಮದಿಂದ ಆಚರಿಸುತ್ತವೆ. ವಿಶ್ವ ಸಮಾಜ ಕಾರ್ಯ ದಿನಾಚರಣೆ ಯನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಮಂಗಳವಾರದಂದು ಆಚರಿಸಲಾಗುತ್ತದೆ. 2019 ನೇ ಸಾಲಿನ ವಿಶ್ವ ಸಮಾಜ ಕಾರ್ಯ ದಿನಾಚರಣೆಯ ಧ್ಯೇಯ ವಾಕ್ಯ" Promoting The Importance of Human relationships" . ಹೀಗೆ ಪ್ರತಿ ವರ್ಷ ಒಂದೊಂದು ಧ್ಯೇಯವನ್ನು ಇಟ್ಟುಕೊಂಡು ವಿಶ್ವ ಸಮಾಜ ಕಾರ್ಯ ದಿನಾಚರಣೆ ಯನ್ನು ಆಚರಿಸುತ್ತಾ ಬರಲಾಗುತ್ತಿದೆ.
The International Federation of social workers (IFSW), ಅಂತರರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳು, ವಿವಿಧ ಸಮಾಜ ಕಾರ್ಯ ಸಂಘಟನೆಗಳು, ವೃತ್ತಿಪರ ಸಮಾಜಕಾರ್ಯಕರ್ತರ ಸಹಕಾರ ಮೂಲಕ ಮೊದಲ ಬಾರಿಗೆ 1983 ರಲ್ಲಿ ವಿಶ್ವ ಸಮಾಜ ಕಾರ್ಯ ದಿನಾಚರಣೆ ಯನ್ನು ಆಚರಿಸಲು ಪ್ರಾರಂಬಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಸಮಾಜಕಾರ್ಯಕರ್ತರು ಸಮಾಜ ಕಾರ್ಯ ಕ್ಷೇತ್ರದಲ್ಲಿ ಆದ ಬೆಳವಣಿಗೆ ತಿಳಿಸಲು, ಸಮಾಜ ಕಾರ್ಯ ದಲ್ಲಿ ಬದಲಾವಣೆ ತರಲು ವಿಶ್ವ ಸಮಾಜ ಕಾರ್ಯ ದಿನಾಚರಣೆ ಯನ್ನು ಆಚರಿಸಲಾಗುತ್ತಿದೆ.
2018 ಹಾಗೂ 2017 ರಲ್ಲಿ Promoting community and Environmental sustainability, 2016 ಹಾಗೂ 2015 ರಲ್ಲಿ promoting the dignity and worth of people's ಎಂಬ ವಿಷಯದ ಮೇಲೆ ವಿಶ್ವ ಸಮಾಜ ಕಾರ್ಯ ದಿನಾಚರಣೆಯನ್ನು ಆಚರಿಸಲಾಗಿತ್ತು. ಇಂದು ಭಾರತ ಸೇರಿ ವಿಶ್ವದಾದ್ಯಂತ ವಿಶ್ವ ಸಮಾಜ ಕಾರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಭೈರಪ್ಪ ಹಾಲಪ್ಪಗೋಳ, ಚಿಕ್ಕೋಡಿ
ಬಿ ಎಸ್ ಡಬ್ಯೂ, ಎಮ್ ಎಸ್ ಡಬ್ಲ್ಯು
ಚಿನ್ನದ ಪದಕ ವಿಜೇತರು,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ


