Friday, 30 December 2022

ವೃತ್ತಿಯಾಗಿ ಸಮಾಜ ಕಾರ್ಯ

Foundation of Social Work 
Unit-III-ಒಂದು ವೃತ್ತಿಯಾಗಿ ಸಮಾಜ ಕಾರ್ಯ

ವೃತ್ತಿಯ ಅರ್ಥ - ವೃತ್ತಿ ಎಂಬ ಶಬ್ದವು ಲ್ಯಾಟಿನ್ ಭಾಷೆಯ 'professio' ಎಂಬ ಪದದಿಂದ ಉತ್ಪತ್ತಿಯಾಗಿದೆ. Professio. ಎಂದರೆ ಸಾರ್ವಜನಿಕರು ನೀಡಿದ ಬಹುಮುಖ್ಯ ಒಪ್ಪಿಗೆ ಎಂದರ್ಥ. ವೃತ್ತಿಯು ಸಮಾಜ ಒಪ್ಪಿತ ಕಾರ್ಯವಾಗಿದೆ. 

ವೃತ್ತಿಯ ವ್ಯಾಖ್ಯೆಗಳು 
ಟಾಲ್ಕೋಟ್ ಪಾರ್ಸನ್ಸ್ - ವೃತ್ತಿ ಎನ್ನುವುದು ಅತ್ಯಂತ ನುರಿತ, ಕಲಿತ, ಕೌಶಲ್ಯದ ಹಾಗೂ ಸಮರ್ಥ ವ್ಯಕ್ತಿಯಿಂದ ಕೈಗೊಳ್ಳಬಹುದಾದ ಒಂದು ವಿಶಿಷ್ಟ ಕಾರ್ಯಚಟುವಟಿಕೆಯಾಗಿದೆ. 

ಸುರೇಂದ್ರ ಸಿಂಗ್ - ನಿರ್ದಿಷ್ಟ ಶಿಕ್ಷಣ, ತರಬೇತಿ ಹಾಗೂ ತಂತ್ರ ಹಾಗೂ ಕೌಶಲ್ಯಗಳುಳ್ಳ ಒಂದು ಕಾರ್ಯವೇ ವೃತ್ತಿ. 

ವೃತ್ತಿಯ ಲಕ್ಷಣಗಳು -
1)ಶೈಕ್ಷಣಿಕ ಮಟ್ಟ ಹಾಗೂ ತರಬೇತಿ 
2)ವೃತ್ತಿಯ ನೋಂದಣಿ ಹಾಗೂ ಪರವಾನಗಿ. 3)ಕಾರ್ಯಕ್ಷೇತ್ರ 
4)ಸಾಮಾಜಿಕ ಮಾನ್ಯತೆ 
5)ನೀತಿ ಸಂಹಿತೆಗಳು 
6)ವೃತ್ತಿಪರ ಸಂಘಟನೆಗಳು ಹಾಗೂ ಸಂಪರ್ಕ ಜಾಲ 7)ನಿರಂತರ ಕೆಲಸ ಹಾಗೂ ಸಂಬಳ 
8)ಕೌಶಲ್ಯ ಮತ್ತು ತಂತ್ರಗಳು. 

ಸಮಾಜ ಕಾರ್ಯ ವೃತ್ತಿ
 ಅರ್ಥ - "ಸಮಾಜ ಕಾರ್ಯವು  ಅಭ್ಯಾಸ-ಆಧಾರಿತ ವೃತ್ತಿಯಾಗಿದೆ ಮತ್ತು ಇದು ಸಾಮಾಜಿಕ ಬದಲಾವಣೆ ಮತ್ತು ಅಭಿವೃದ್ಧಿ, ಸಾಮಾಜಿಕ ಒಗ್ಗಟ್ಟು ಮತ್ತು ಜನರ ಸಬಲೀಕರಣ ಮತ್ತು ವಿಮೋಚನೆಯನ್ನು ಉತ್ತೇಜಿಸುವ ಶೈಕ್ಷಣಿಕ ಶಿಸ್ತಾಗಿದೆ. ಸಾಮಾಜಿಕ ನ್ಯಾಯದ ತತ್ವಗಳು, ಮಾನವ ಹಕ್ಕುಗಳು, ಸಾಮೂಹಿಕ ಜವಾಬ್ದಾರಿ ಮತ್ತು ವೈವಿಧ್ಯತೆಗಳ ಗೌರವವು ಸಮಾಜ ಕಾರ್ಯದಲ್ಲಿ ಕೇಂದ್ರಿಕೃತವಾಗಿದೆ. ಸಮಾಜ ಕಾರ್ಯ ಸಿದ್ಧಾಂತಗಳು, ಸಾಮಾಜಿಕ ವಿಜ್ಞಾನಗಳು, ಮಾನವಿಕತೆಗಳು ಮತ್ತು ಸ್ಥಳೀಯ ಜ್ಞಾನಗಳ ಸಿದ್ಧಾಂತಗಳ ಆಧಾರದಲ್ಲಿ, ಸಾಮಾಜಿಕ ಕೆಲಸಗಳು ಜೀವನದ ಸವಾಲುಗಳನ್ನು ಎದುರಿಸಲು ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಜನರು ಮತ್ತು ರಚನೆಗಳನ್ನು ತೊಡಗಿಸುತ್ತದೆ.

ಸಮಾಜ ಕಾರ್ಯ ವೃತ್ತಿಯ ಲಕ್ಷಣಗಳು - 
1)ಶೈಕ್ಷಣಿಕ ಮಟ್ಟ ಹಾಗೂ ತರಬೇತಿ
 2)ವೃತ್ತಿಯ ನೋಂದಣಿ ಹಾಗೂ ಪರವಾನಗಿ. 3)ಕಾರ್ಯಕ್ಷೇತ್ರ
 4)ಸಾಮಾಜಿಕ ಮಾನ್ಯತೆ 
5)ನೀತಿ ಸಂಹಿತೆಗಳು 
6)ವೃತ್ತಿಪರ ಸಂಘಟನೆಗಳು ಹಾಗೂ ಸಂಪರ್ಕ ಜಾಲ 7)ನಿರಂತರ ಕೆಲಸ ಹಾಗೂ ಸಂಬಳ
 8)ಕೌಶಲ್ಯ ಮತ್ತು ತಂತ್ರಗಳು. 

ಸಮಾಜ ಕಾರ್ಯ ವೃತ್ತಿಯ ಸವಾಲುಗಳು

ಸಮಾಜ ಕಾರ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸವಾಲುಗಳು-
1)ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ನವೀಕರಣಗೊಳ್ಳದ ಪಠ್ಯಕ್ರಮ. 
2)ಪರಿಣಾಮಕಾರಿ ಬೋಧಕರ ಕೊರತೆ  3)ಪಠ್ಯಪುಸ್ತಕಗಳ ಕೊರತೆ 
4)ಕಠಿಣ ವಿಷಯವಸ್ತು
5)ಕಳಪೆ ಫಲಿತಾಂಶ ಮತ್ತು ಅಸಮರ್ಪಕ ಮೌಲ್ಯಮಾಪನ 
6)ಪ್ರಾಯೋಗಿಕ ಜ್ಞಾನದ ಕೊರತೆ 
7)ಪಠ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಗೊಂದಲ 
8)ಸೂಪ್ತ ಪಠ್ಯಕ್ರಮ 
9) ಸಮಾಜ ಕಾರ್ಯ ಶಿಕ್ಷಣ ಆಯ್ಕೆಯಲ್ಲಿನ ಗೊಂದಲ 10)ಶಿಕ್ಷಣದ ಜಾಗೃತಿ ಕೊರತೆ.

 ಸಮಾಜ ಕಾರ್ಯ ವೃತ್ತಿಗೆ ಸಂಬಂಧಿಸಿದ ಸವಾಲುಗಳು-
1)ಸೂಕ್ತ ಸಾಮಾಜಿಕ ಮಾನ್ಯತೆ ಇಲ್ಲ 
2)ಕಡಿಮೆ ಸಂಬಳ 
3)ಬೆರಳಣಿಕೆಯ ಸರ್ಕಾರಿ ಉದ್ಯೋಗಗಳು 4)ವೃತ್ತಿಪರ ಸಂಘಟನೆಗಳ ಕೊರತೆ ಮತ್ತು ಒಗ್ಗಟ್ಟು ಇಲ್ಲದಿರುವುದು. 
5)ಸೂಕ್ತ ಭದ್ರತೆ ಇಲ್ಲದಿರುವುದು 
6)ವೃತ್ತಿಪರತೆಯ ಕೊರತೆ 
7)ಸೂಕ್ತ ತರಬೇತಿ ಹಾಗೂ ಶಿಕ್ಷಣ ಇಲ್ಲದಿರುವಿಕೆ 8)ಇತರ ವೃತ್ತಿಪರರಲ್ಲಿ ಅಸಡ್ಡೆ ಹಾಗೂ ಹೊಂದಾಣಿಕೆ ಕೊರತೆ 
9)ವೈವಿಧ್ಯಮಯ ಸಮಾಜ 
10)ಸಮಾಜ ಕಾರ್ಯ ವೃತ್ತಿಪರರಲ್ಲಿ ಸೂಕ್ತ ವೃತ್ತಿಪರತೆ ಇಲ್ಲದಿರುವುದು. 

ಭಾರತೀಯ ಸನ್ನಿವೇಶದಲ್ಲಿ ಸಮಾಜಕಾರ್ಯ ವೃತ್ತಿಯ ದೃಷ್ಟಿಕೋನಗಳು

ಭಾರತದಲ್ಲಿ ವೃತ್ತಿಪರ ಸಮಾಜ ಕಾರ್ಯಕರ್ತರ ಶೈಕ್ಷಣಿಕ ಅರ್ಹತೆಗಳು
1) ಸಮಾಜ ಕಾರ್ಯ  ಪದವಿ (BSW),
2) ಸಮಾಜ ಕಾರ್ಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (BA),
 3) ಸಮಾಜ ಕಾರ್ಯದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ (BSc) 
4) ಸಾಮಾನ್ಯ ಅಭ್ಯಾಸಕ್ಕಾಗಿ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ (PGDipSW).
5)ಮಾಸ್ಟರ್ ಆಫ್ ಸೋಶಿಯಲ್ ವರ್ಕ್ (MSW)
6) ಕ್ಲಿನಿಕಲ್ ಅಭ್ಯಾಸಕ್ಕಾಗಿ ಸಮಾಜ ಕಾರ್ಯದಲ್ಲಿ ಮಾಸ್ಟರ್ ಆಫ್ ಸೈನ್ಸ್ (MSSW).
7)ಡಾಕ್ಟರೇಟ್ ಆಫ್ ಸೋಶಿಯಲ್ ವರ್ಕ್ (DSW)8) ವಿಶೇಷ ಅಭ್ಯಾಸಕ್ಕಾಗಿ ವೃತ್ತಿಪರ ಡಾಕ್ಟರೇಟ್ (ProfD ಅಥವಾ DProf) 
09) ಸಮಾಜಕಾರ್ಯದಲ್ಲಿ ಎಂಫಿಲ್ 
10) ಸಮಾಜ ಕಾರ್ಯದಲ್ಲಿ ಡಿಪ್ಲೊಮಾ

ವೃತ್ತಿಪರ ಸಮಾಜ ಸೇವಕರಿಗೆ ಅಗತ್ಯವಿರುವ ಕೌಶಲ್ಯಗಳು-
ಯೋಜನೆಯ ಪ್ರಸ್ತಾವನೆಯನ್ನು ಸಿದ್ಧಪಡಿಸುವುದು
· ನಿರ್ವಹಣಾ ಮಾಹಿತಿ ವ್ಯವಸ್ಥೆಯನ್ನು ಸಿದ್ಧಪಡಿಸುವುದು (MIS)
· ಜಿಲ್ಲೆ/ರಾಜ್ಯ/ರಾಷ್ಟ್ರೀಯ ಮಟ್ಟದಲ್ಲಿ ಯೋಜನೆಯ ನಿರ್ವಹಣೆ ಮತ್ತು ಸಮನ್ವಯ
· ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ
· ವರದಿ ಬರವಣಿಗೆ ಮತ್ತು ಪ್ರಸ್ತುತ ಪಡಿಸುವುದು
· ಮಾಸಿಕ ಯೋಜನೆ ಮತ್ತು ಬಜೆಟ್ ತಯಾರಿಕೆ.
. ಪರಿಣಾಮಕಾರಿ ಸಂವಹನ 

ಭಾರತದಲ್ಲಿ ವೃತ್ತಿಪರ ಸಮಾಜ ಕಾರ್ಯಕರ್ತರಿಗೆ ಅಭ್ಯಾಸದ ಕ್ಷೇತ್ರಗಳು-
ವ್ಯಸನ / ಮಾದಕ ವ್ಯಸನ 
· ಮಕ್ಕಳ ಕಲ್ಯಾಣ
· ತಿದ್ದುಪಡಿ ಸಂಸ್ಥೆಗಳು/ ಕಾರಾಗೃಹಗಳು 
· ಮಕ್ಕಳ ರಕ್ಷಣಾ ಸೇವೆಗಳು 
· ಸಮಾಲೋಚನೆ ಮತ್ತು ಚಿಕಿತ್ಸೆ
· ಸಲಹಾ ಸೇವೆಗಳು
 · ಸಮುದಾಯ ಅಭಿವೃದ್ಧಿ 
· ಹಿರಿಯರ ಆರೈಕೆ
· ಪರಿಸರ 
· ಕುಟುಂಬ ಕಲ್ಯಾಣ ಮತ್ತು ಯೋಜನೆ 
· ಮಾನವ ಸಂಪನ್ಮೂಲ ನಿರ್ವಹಣೆ
· ಕೈಗಾರಿಕಾ ಅಭಿವೃದ್ಧಿ 
· ವೈದ್ಯಕೀಯ ಸಾಮಾಜಿಕ ಕೆಲಸ
 · ಮಾನಸಿಕ ಆರೋಗ್ಯ
·  ಸಾಮಾಜಿಕ ಸೇವೆಗಳ ನಿರ್ವಹಣೆ 
· ತಾಯಿ ಮತ್ತು ಮಕ್ಕಳ ಆರೋಗ್ಯ
· ನೀತಿ ಮತ್ತು ಯೋಜನೆ ಸೇವೆಗಳು 
· ಬಡತನ ನಿರ್ಮೂಲನೆ
· ಅಪರಾಧಿಗಳ ಪುನರ್ವಸತಿ 
· ಗ್ರಾಮೀಣ ಮತ್ತು ನಗರಾಭಿವೃದ್ಧಿ 
· ಸಂಬಂಧದ ಸಮಸ್ಯೆಗಳು
· ಶಾಲಾ ಸಮಾಜ ಕಾರ್ಯ 
· ಸಾಮಾಜಿಕ ಸಂಶೋಧನೆ ಮತ್ತು ಕಾರ್ಯಕ್ರಮ ಮೌಲ್ಯಮಾಪನ ಸೇವೆ
· ಸಮಾಜ ಕಾರ್ಯ ಆಡಳಿತ ಮತ್ತು ನೀತಿ 
· ಸಮಾಜ ಕಾರ್ಯ ಸಂಶೋಧನೆ


Prof. B. L. Halappagol 
Lecturer, Moulana Abul Kalam Azad BSW/MSW College Nanadi, Tq-Chikodi