Sunday, 27 January 2019

Rcub gold medalist Bairappa Halappagol poem written about bhavya bharatha

Rcub gold medalist Bairappa Halappagol poem written about bhavya bharatha  Republic day
                      ಭವ್ಯ ಭಾರತ -  
ಭರತಖಂಡ, ಭರತಭೂಮಿ, ಹಿಂದೂಸ್ತಾನ ನಾಮ ಹಲವು ನಿನ್ನದು
ಭಾರತಾಂಬೆ ನೀನು ಇಂಡಿಯಾ, ಭಾರತ ಎಂದೆ ಇರುವೆ ಪ್ರಖ್ಯಾತವು...

ಸಿಂಧು ಬಯಲಿನ ನಾಗರಿಕತೆಯಿಂದ ನಿನ್ನ  ಗೌರವ ಎಲ್ಲೆಡೆ
  ವೇದ , ಮಹಾಕಾವ್ಯ ದಿಂದ  ಭಾರತದ ಶ್ರೇಷ್ಠತೆ ಹೆಚ್ಚಿತು ವಿಶ್ವದೆಲ್ಲೆಡೆ...

ಗಂಗಾ ಯಮುನಾ ಗೋದಾವರಿ ಕಾವೇರಿಗಳಾದವು ಭಾರತದ ಜೀವನದಿ
ನರ್ಮದಾ ಕೃಷ್ಣ ತುಂಗಾ ಸಿಂದು ಬ್ರಹ್ಮಪುತ್ರರು ಆದರು ಭಾರತದ ಪವಿತ್ರ ನದಿ...

ಜೈನ  ಭೌದ್ದ ಧರ್ಮದಿಂದ ಮೊಳಗಿತು ಎಲ್ಲೆಡೆ ವಿಶ್ವ ಶಾಂತಿ , ಸಹೋದರತೆ
ಮಹಾವೀರ ಗೌತಮ ಬುದ್ದರು ವಿಶ್ವಕ್ಕೆ ಆದರು ಆದರ್ಶ ಪ್ರಾಯತೆ....

ಮೌರ್ಯ ಗುಪ್ತ ವಿಜಯನಗರ ಅರಸರು ಕೂಟ್ಟರು ವಿಶ್ವ ಮಾನ್ಯತೆ
ಗಂಗ ಕದಂಬ ಚಾಲುಕ್ಯ ಪಲ್ಲವ ರಾಷ್ಟ್ರಕೂಟರು ಕೂಟ್ಟರು ಅದ್ಭುತ ಕಲೆ ಸಂಸ್ಕೃತಿ.....

ಕಾಳಿದಾಸ, ಆರ್ಯಭಟ ರನ್ನ ಪೊನ್ನರಿಂದ ರಚಿತವಾದವು ಸಾಹಿತ್ಯ ವಿಜ್ಞಾನವು
ಅಲಹಾಬಾದ ಮಸ್ಕಿ  ಹಲ್ಮಿಡಿ ಬಾದಾಮಿಯಲ್ಲಿ ರಚಿತವಾದವು ಭವ್ಯ ಶಿಲಾ ಶಾಸನಗಳು....

ಘಜ್ನಿ, ಘೊರಿ, ಮಂಗೊಲಿಯನ್ನರುಸೇರಿ ಹಲವರು ಬಂದರು ದಂಡೆತ್ತಿ
ಖಿಲ್ಜಿ, ತುಘಲಕ್  ಬಾಬರ್ ಮುನ್ನುಗ್ಗಿ ನುಸುಳಿದರು ಹಿಂದೂಸ್ತಾನಕ್ಕೆ ತಲೆಯೆತ್ತಿ.....

ಬಸವ ಶಂಕರ ಮದ್ವ ರಮನುಜರು ಕೂಟ್ಟರು ಸಮಾಜಕ್ಕೆ ಸುಧಾರಣೆಯನ್ನು
ರಮಾನಂದ ಕಬೀರ್ ಚೈತನ್ಯ ನಾನಕ್ ದಾಸರೂ ಕೂಟ್ಟರು ಸಮಾಜಕ್ಕೆ ಕೀರ್ತನೆಯನ್ನು...

ಆಡಳಿತ ಆಸೆಗೆ ಮನಸೋತು ನುಗ್ಗಿದರೂ ತಾ ಮುಂದು ನಾ ಮುಂದೆಂದು
ಪೋರ್ಚುಗೀಸ್ಸ ಬ್ರಿಟಿಷ ಪ್ರೇಂಚ ಡಚ್ಚರು ಕಚ್ಚಾಡಿದರು ತಮ್ಮಲ್ಲೇ ಮೊದಮೊದಲು....

ಪ್ಲಾಸಿ ಬಕ್ಸಾರ ಕದನಗಳು ಭಾರತೀಯರಿಗೆ ಕೂಟ್ಟಿತು ಬಹು ದೊಡ್ಡ ಸೋಲು
ಬ್ರಿಟಿಷರ ಸಾಮ್ರಾಜ್ಯ ದ ಶೋಷಣೆಗೆ ಒಳಗಾಯಿತು ಭರತಖಂಡ ಬಹುಪಾಲು.....

ದೇಶಿಯ ಅರಸರನ್ನು ಮುಗಿಸಲು ನಡೆದವು ಒಳಗೊಳಗೆ ಕುತಂತ್ರ ರಣನೀತಿಗಳು
ಒಂದೊಮ್ಮೆ ಪಾಲಾದವು ಮೈಸೂರು ಮರಾಠಾ ಸೇರಿ ದೇಶಿ ರಾಜಸಂಸ್ಥಾನಗಳು.....

ಬಂಡೆದ್ದರೂ ಕಿತ್ತೂರು ಚೆನ್ನಮ್ಮ, ಲಕ್ಷ್ಮಿಭಾಯಿ  ರಾಯಣ್ಣ ಹಲಗಲಿ ಬಂಟರು ಸೇರಿ ಹಲವರು
ಮಂದ, ಕ್ರಾಂತಿಕಾರಿ, ಗಾಂಧಿವಾದಿಗಳೂ  ಸೇರಿ ಹೋರಾಡಿದರು ಸ್ವಾತಂತ್ರ್ಯದವರೆಗೂ....

ಮೋಹನರಾಯ್, ಸರಸ್ವತಿ, ಪಾಂಡುರಂಗ ವಿವೇಕಾನಂದರು ತಮ್ಮನ್ನು ಮುಡಿಪಿಟ್ಟರು ಸಮಾಜೊದ್ದಾರಕ್ಕೆ
ಅಂತು ಇಂತು ಕೊನೆಗೆ ಬಂದಿತು  ಹೆಮ್ಮೆಯ ಭಾರತ ದೇಶವು  1947-ಅಗಸ್ಟ 15 ರಂದು ಸ್ವಾತಂತ್ರ್ಯಕ್ಕೆ....

ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಸಿಖ್ಖ ಭೌದ್ದ  ಸೇರಿ ಇರವೆವು ನಾವಿಲ್ಲಿ ಐಕ್ಯತೆ ಹೊಂದಿ
ಹಿಂದಿ ಕನ್ನಡ ತಮಿಳು ತೆಲುಗು ಸಂಸ್ಕೃತ ಮರಾಠಿ ಹೀಗೆ  ಇರುವೆವು ವೈವಿಧ್ಯತೆಯಲ್ಲಿ ಏಕತೆ ಹೊಂದಿ..

ಭಾರತೀಯ ಜನರ ಸ್ವತಂತ್ರ ಹೋರಾಟಕ್ಕೆ ಸಿಪಾಯಿ ದಂಗೆ ಎಂದರು ಬಿಳಿ ಮಂಗಗಳು
ಭಾರತಾಂಬೆಯ ಮಕ್ಕಳ ಕೆಚ್ಚದೆಯ ಹೋರಾಟ ತ್ಯಾಗ ಬಲಿದಾನಕ್ಕೆ  ಒಲಿಯಿತು  ಗಣರಾಜ್ಯ ನಾಡು...

ಭಾರತರತ್ನ, ಜ್ಞಾನಪೀಠ ಒಲಂಪಿಕ್  ಆಟ ಪಾಠ ಸೇರಿ ಉಕ್ಕಿತು ಭಾರತದ ಶ್ರೀಮಂತಿಕೆ
ನನ್ನನ್ನು  ಭಾರತಾಂಬೆಯ ಮಡಿಲಲ್ಲಿ ಹುಟ್ಟುವಂತೆ ಮಾಡಿತು ನನ್ನ ಪುಣ್ಯವಂತಿಕೆ....

                                  
ರಚನೆ - ಭೈರಪ್ಪ ಹಾಲಪ್ಪಗೋಳ

1 comment: