ಭಯೋತ್ಪಾದನೆ
ಭಯೋತ್ಪಾದನೆ - ಅರ್ಥ, ವ್ಯಾಖ್ಯೆ, ಸ್ವರೂಪ, ಲಕ್ಷಣಗಳು, ಕಾರಣಗಳು ದುಷ್ಪರಿಣಾಮ, ಪರಿಹಾರ ಕ್ರಮಗಳು, ಕಾನೂನಾತ್ಮಕ ಕ್ರಮಗಳು, ಕಾನೂನು ಜಾರಿ ಸಂಸ್ಥೆಗಳು, ಭಯೋತ್ಪಾದನೆ ಮೇಲೆ ಪ್ರಭಾವ ಬೀರುವ ಅಂಶಗಳು, ಪ್ರಮುಖ ದಾಳಿಗಳು, ಪ್ರಮುಖ ಉದಾಹರಣೆಗಳ ಪ್ರಚಲಿತ ಅಂಕಿ ಅಂಶಗಳೊಂದಿಗೆ ಮಾಹಿತಿ
ರಚನೆ - ಭೈರಪ್ಪ ಹಾಲಪ್ಪಗೋಳ, ಸಂಶೋಧನಾ ವಿದ್ಯಾರ್ಥಿ , ಸಮಾಜಕಾರ್ಯ ವಿಭಾಗ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
ಪೀಠಿಕೆ - ಭಯೋತ್ಪಾದನೆ ಎಂಬುದು ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ಪದವಾಗಿದೆ. ಭಯೋತ್ಪಾದನೆ ಎಂಬ ಪದವನ್ನೆ ಕೇಳಿದರೆ ಭಯ ಹುಟ್ಟುತ್ತದೆ. ಭಯೋತ್ಪಾದನೆ ಎಂಬ ಪದದಲ್ಲಿಯೇ ಅರ್ಥವಿದೆ ಭಯದ ಉತ್ಪಾದನೆ ಎಂದರ್ಥವಾಗುತ್ತದೆ. ಅಂದರೆ ಭಯವನ್ನು ಹುಟ್ಟಿಸುವ ಸನ್ನಿವೇಶ ವಾಗಿದೆ.
ಭಯೋತ್ಪಾದನೆ ಎಂಬುದು ಮೊದಮೊದಲು ಕೇವಲ ರಾಜಕೀಯ ಉದ್ದೇಶದಿಂದ ನಡೆಯುತ್ತಿತ್ತು ಆದರೆ ಕಾಲ ಗತಿಸಿದಂತೆ ಇಂದು ಅದರ ಸ್ವರೂಪದಲ್ಲಿ ಬದಲಾಗುತ್ತಾ ಹೋಗುತ್ತದೆ ಇಂದು ಧಾರ್ಮಿಕ ಸ್ವರೂಪದಲ್ಲಿ, ಆರ್ಥಿಕ ಸ್ವರೂಪದಲ್ಲಿ ಅದೇ ರೀತಿ ವಯಕ್ತಿಕ ಸ್ವರೂಪದಲ್ಲಿ ಕೂಡಾ ನಡೆಯುತ್ತಿದೆ.
ಭಯೋತ್ಪಾದನೆ ಎಂಬ ಪದವನ್ನು ಕೇಳಿರದ ವ್ಯಕ್ತಿಗಳು ಭೂಮಿಯ ಮೇಲೆ ಯಾರು ಇಲ್ಲ ಎಂದು ತಿಳಿಯುತ್ತದೆ. ಭಯದಿಂದ, ಒತ್ತಾಯಪೂರ್ವಕವಾಗಿ ಈ ಒಂದು ಪದವನ್ನು ಕೇಳುವ ಸನ್ನಿವೇಶವಾಗಿದೆ. ಭಯೋತ್ಪಾದನೆ ಇದು ಒಂದು ಹಿಂಸಾಚಾರದ ಪ್ರಕಾರಗಳಲ್ಲಿ ಒಂದಾಗಿದ್ದು, ಜಾಗತಿಕ ಸ್ವರೂಪವನ್ನು ಪಡೆದಿರುವ ರಾಜಕೀಯ, ಸಾಮಾಜಿಕ ಸಮಸ್ಯೆಯಾಗಿದೆ.
ಕೆಲವು ವ್ಯಕ್ತಿಗಳು ತಮ್ಮ ವಯಕ್ತಿಕ , ರಾಜಕೀಯ, ಧಾರ್ಮಿಕ, ಜನಾಂಗೀಯ ಉದ್ದೇಶಕ್ಕಾಗಿ ಸಮಾಜದಲ್ಲಿ ಮುಗ್ದ ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಾರೆ. ಇದರಿಂದ ಆಸ್ತಿ ಪಾಸ್ತಿ ಹಾನಿ , ಸಾವು ನೋವು ಉದ್ಬವಿಸಿ ವಿಪರೀತ ನಷ್ಟ ಸಂಬವಿಸುವ ಲಕ್ಷಣವಿರುತ್ತದೆ. ಈಗ ಹಂತ ಹಂತವಾಗಿ ಭಯೋತ್ಪಾದನೆ ಅರ್ಥ ಅದರ ಸ್ವರೂಪ ಅದಕ್ಕೆ ಇರುವ ಕಾರಣಗಳು ಅದರಿಂದ ಆಗುವ ಪರಿಣಾಮಗಳು ಅದಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಇತರ ಕ್ರಮಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸೋಣ
ಭಯೋತ್ಪಾದನೆ ಅರ್ಥ -
ಭಯೋತ್ಪಾದನೆ ಇಂಗ್ಲಿಷ್ ಭಾಷೆಯ" ಟೆರೆರಿಸಮ್ " ಎಂಬ ಪದಕ್ಕೆ ಸಮಾನವಾದದ್ದು. ಇಂಗ್ಲಿಷ್ ಭಾಷೆಯ ಟೆರೆರಿಸಮ್ ಎಂಬ ಪದವು ಲ್ಯಾಟಿನ್ ಭಾಷೆಯ" ಟೆರೆರೆ" ಎಂಬ ಪದದಿಂದ ಬಂದಿದೆ ಟೆರೆರೆ ಎಂದರೆ ಭಯಹುಟ್ಟಿಸು ಎಂದರ್ಥ. ಟೆರರ್ ಎಂಬ ಪದವು ಮೊಟ್ಟಮೊದಲ ಬಾರಿಗೆ ಫ್ರೆಂಚ್ ಕ್ರಾಂತಿ ಸಂದರ್ಭದಲ್ಲಿ ಬಳಕೆಗೊಂಡಿತು.
ಭಯೋತ್ಪಾದನೆಯ ವ್ಯಾಖ್ಯೆ
1)ಆ್ಯಂಡರ್ಸನ್ - ರವರ ಪ್ರಕಾರ - "ಭಯೋತ್ಪಾದನೆ ಎಂದರೆ ರಾಜಕೀಯ ಉದ್ದೇಶದಿಂದ ಕೂಡಿರುವ ಸಾಮೂಹಿಕ ಸ್ವರೂಪದ ಹಿಂಸಾಚಾರವಾಗಿದೆ. "
2)ಮಿಚೆಲ್ ವಾಲ್ಜರ್ 2002 -"ಭಯೋತ್ಪಾದನೆ ಎಂಬುದು ಉದ್ದೇಶಪೂರಿತ ಚಟುವಟಿಕೆಯಾಗಿದ್ದು. ಮುಗ್ಧ ಜನರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಇಡಿ ಜನಸಮುದಾಯದಲ್ಲಿ ಭಯವನ್ನು ಹುಟ್ಟಿಸುವುದಾಗಿದೆ ಹಾಗೂ ಇದು ರಾಜಕೀಯ ಪ್ರೇರಿತವಾಗಿರುತ್ತದೆ. "
3)ಎನ್ ಸೈಕ್ಲೋಪಿಡಿಯಾ ಸಮಾಜ ವಿಜ್ಞಾನ ಶಬ್ದಕೋಶ -
"ಸಂಘಟಿತ ಸಮೂಹವು ಘೋಷಿತ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಹಿಂಸಾಚಾರದ ಕ್ರಮಬದ್ಧ ಚಟುವಟಿಕೆಯೇ ಭಯೋತ್ಪಾದನೆ "
4)ಸಾಮಾನ್ಯ ವ್ಯಾಖ್ಯೆ -
ರಾಜಕೀಯ ಹಾಗೂ ವಯಕ್ತಿಕ ಉದ್ದೇಶ ಈಡೇರಿಸಿಕೊಳ್ಳಲು ಸಾಮಾನ್ಯ ಜನಜೀವನದಲ್ಲಿ ಶಾಂತಿ ಕದಡುವುದು ಮತ್ತು ಜನರಲ್ಲಿ ಭಯಭೀತ ವಾತಾವರಣ ಮೂಡಿಸುವುದು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಹಾಗೂ ಸಾವು ನೋವುಗಳಿಗೆ ಕಾರಣವಾಗುವ ಒಂದು ಸಾರ್ವತ್ರಿಕ, ಸಾಮಾಜಿಕ ಚಟುವಟಿಕೆಯಾಗಿದೆ.
ಭಯೋತ್ಪಾದನೆಯ ಘಟನೆಗಳ ಸ್ವರೂಪ -
1)ಬಾಂಬ್ ಸ್ಪೋಟಿಸುವುದು 2)ಅಪಹರಣ ಮಾಡುವುದು 3)ಸಾಮೂಹಿಕ ಹತ್ಯೆ ನಡೆಸುವುದು 4)ಲೈಂಗಿಕ ಶೋಷಣೆ ಮತ್ತು ಕೊಲೆ ನಡೆಸುವುದು 5)ಗುಲಾಮರನ್ನಾಗಿಸುವುದು 6)ಸಂಪತ್ತಿನ ಲೂಟಿ 7) ಸಾರ್ವಜನಿಕ ಸ್ಥಳಗಳಿಗೆ ಹಾನಿ ಉಂಟುಮಾಡುವುದು. 8)ರಾಜಕೀಯ ವ್ಯಕ್ತಿಗಳ ಅಪಹರಣ ಮತ್ತು ಕೊಲೆ ಮುಂತಾದವು
ಭಯೋತ್ಪಾದನೆಯ ಲಕ್ಷಣಗಳು
1)ಇದು ಹಿಂಸಾಚಾರ ಸ್ವರೂಪ ಹೊಂದಿದೆ
2)ಭಯಭೀತ ವಾತಾವರಣ ನಿರ್ಮಾಣ ಉಂಟುಮಾಡುತ್ತದೆ
3)ಜನರಿಗೆ ಶೋಷಣೆ ಉಂಟುಮಾಡುತ್ತದೆ
4)ವಿರೋಧಿಗಳ ವಿರುದ್ಧದ ತಂತ್ರವಾಗಿದೆ
5)ಸಂವಿಧಾನದ ವಿರೋದಿ ಚಟುವಟಿಕೆಯಾಗಿದೆ
6)ಸಾಮಾಜಿಕ ಸಮಸ್ಯೆಯಾಗಿದೆ
7)ಸಮಾಜ ಘಾತಕ ಚಟುವಟಿಕೆಯಾಗಿದೆ
8)ಪ್ರಜಾಪ್ರಭುತ್ವಕ್ಕೆ ವಿರೋಧಿ
ಭಯೋತ್ಪಾದನೆಗೆ ಹಾಗೂ ಭಯೋತ್ಪಾದಕರಾಗಲು ಇರುವ ಕಾರಣಗಳು
1)ನಿರುದ್ಯೋಗ
2)ಮಾನಸಿಕವಾಗಿ ನೆಮ್ಮದಿ ಇಲ್ಲದಿರುವುದು
3)ದುಡ್ಡಿನ ಆಮಿಷ
4)ಸಾಮಾಜಿಕ ಜಾಗೃತಿ ಇಲ್ಲದಿರುವುದು
5)ಕಠಿಣ ಕಾನೂನು ಕ್ರಮ ಇಲ್ಲದಿರುವುದು
6)ಪೋಷಕರ ನಿರ್ಲಕ್ಷ್ಯ
7)ಅತಿಯಾದ ಧಾರ್ಮಿಕ, ಜಾತಿ ನಂಬುಗೆಗಳು
8)ಸುಧಾರಿತ ತಂತ್ರಜ್ಞಾನ
9)ವಿನಾಶಕ ಶಸ್ತ್ರಾಸ್ತ್ರಗಳ ತಯಾರಿಕೆ ಬಗ್ಗೆ ಅರಿವು
10)ಬಡತನ
11)ತಂತ್ರಜ್ಞಾನದ ಅರಿವು ಹೆಚ್ಚಾದಾಗ
12)ದುಷ್ಟಜನರ ಸಹವಾಸ
13)ಅನ್ಯಧರ್ಮದ ಬಗ್ಗೆ ಸಹನೆ ಇಲ್ಲದಿರುವುದು
14) ರಾಜಕೀಯ ಉದ್ದೇಶ ಈಡೇರಿಕೆ
15) ಮಾನವೀಯ ಮೌಲ್ಯದ ವಿರೋಧ ಭಾವನೆ
16)ಜನರಲ್ಲಿ ಪ್ರಸಿದ್ಧಿ ಪಡೆಯುವ ಬಯಕೆ
17) ತುರ್ತು ಬೇಡಿಕೆ ಈಡೇರಿಸುವಂತೆ ಬೇಡಿಕೆ
ಮುಂತಾದವು
ಭಯೋತ್ಪಾದನೆಯಿಂದಾಗುವ ದುಷ್ಪರಿಣಾಮಗಳು
1)ಆಸ್ತಿ ಹಾನಿ
2)ಭಯದ ಬೀತಿ
3)ಸಮಾಜದಲ್ಲಿ ಆತಂಕ
4)ಹಿಂಸೆ
5)ಜೀವ ಹಾನಿ
6)ಕೋಮುಗಲಭೆ
7)ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು
8)ಸರ್ಕಾರವನ್ನು ದುರ್ಬಲಗೊಳಿಸುವುದು
9)ಸಾಮಾಜಿಕ ವಿಘಟನೆಗೆ ಕಾರಣ
10)ಜಾಗತಿಕ ಅಭದ್ರತೆ
11)ಜಾಗತಿಕ ಯುದ್ದಗಳಿಗೆ ಕಾರಣವಾಗುತ್ತದೆ
13)ರಾಷ್ಟ್ರೀಯ ಭಾವೈಕ್ಯತೆ ಧಕ್ಕೆ
14)ಮನುಕುಲದ ಅಭಿವೃದ್ಧಿಗೆ ಧಕ್ಕೆ
15)ಆರ್ಥಿಕವಾಗಿ ನಷ್ಟ
16)ಅಭಿವೃದ್ಧಿ ಕುಂಠಿತವಾಗುವಿಕೆ
ಮುಂತಾದವು
ಭಯೋತ್ಪಾದನೆಯ ಮೇಲೆ ಪ್ರಭಾವಿತವಾಗುವ ಅಂಶಗಳು
1)ಜಾತಿ 2)ಧರ್ಮ 3)ಜನಾಂಗ 4)ಪ್ರದೇಶ 5)ವೈಚಾರಿಕ ಸಿದ್ಧಾಂತಗಳು 6)ಭಾಷೆ
7)ರಾಜಕೀಯ 8)ಭೌಗೋಳಿಕ ಪ್ರದೇಶ 9)ಶಿಕ್ಷಣ ಮುಂತಾದವು
ಕಾನೂನು ಕ್ರಮಗಳು
1)ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967: 1967 ರ ಯುಎಪಿಎ ಕಾನೂನು ಜಾರಿ ಸಂಸ್ಥೆಗಳಿಗೆ ಭಯೋತ್ಪಾದನೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡುತ್ತದೆ.

2)ಭಯೋತ್ಪಾದನೆ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1987: ಟಾಡಾ ಕಾಯ್ದೆಯು ಭಯೋತ್ಪಾದನೆಯನ್ನು ನಿರ್ದಿಷ್ಟವಾಗಿ ಎದುರಿಸಲು ಕಠಿಣ ಕ್ರಮಗಳನ್ನು ಒದಗಿಸುತ್ತದೆ. ಸಾಕಷ್ಟು ವಿವಾದಗಳಿಂದ ಸುತ್ತುವರೆದಿರುವ ಈ ಕಾಯ್ದೆ ಅಂತಿಮವಾಗಿ 1995 ರಲ್ಲಿ ರದ್ದುಗೊಂಡಿತು.
3)ಭಯೋತ್ಪಾದನಾ ತಡೆ ಕಾಯ್ದೆ, ೨೦೦೨: ಭಯೋತ್ಪಾದನೆ ಹೆಚ್ಚಾದಂತೆ, ಪೋಟಾ, ೨೦೦೨ ಎಂಬ ಮತ್ತೊಂದು ಕಾನೂನನ್ನು ಅಂಗೀಕರಿಸಲಾಯಿತು. ಇದು ಕಾನೂನು ಜಾರಿ ಸಂಸ್ಥೆಗಳಿಗೆ ಇನ್ನಷ್ಟು ವ್ಯಾಪಕ ಅಧಿಕಾರಗಳನ್ನು ಒದಗಿಸಿತು. ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಕಳವಳಗಳು ವ್ಯಕ್ತವಾಗಿದ ನಂತರ ಯುಪಿಎ ಇದನ್ನು ೨೦೦೪ ರಲ್ಲಿ ರದ್ದುಗೊಳಿಸಿತು.
4)ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ, 2008: ಭಯೋತ್ಪಾದನಾ ನಿಗ್ರಹ ಚಟುವಟಿಕೆಗಳನ್ನು ನಿಭಾಯಿಸುವ ಕೇಂದ್ರ ಮಟ್ಟದಲ್ಲಿ NIA ಸ್ಥಾಪನೆಗೆ ಅವಕಾಶ ನೀಡಲು 2008 ರಲ್ಲಿ NIA ಅನ್ನು ಸ್ಥಾಪಿಸಲಾಯಿತು.
5)೨೦೧೬ ರ ಅಪಹರಣ ವಿರೋಧಿ ಕಾಯ್ದೆ: ಇತ್ತೀಚೆಗೆ, ವಿಮಾನಗಳ ಅಪಹರಣವನ್ನು ತಡೆಗಟ್ಟಲು ಅಪಹರಣ ವಿರೋಧಿ ಕಾಯ್ದೆಯನ್ನು ಅಂಗೀಕರಿಸಲಾಯಿತು.
ಭಾರತದ ಕಾನೂನು ಜಾರಿ ಸಂಸ್ಥೆಗಳು
1- ರಾಷ್ಟ್ರೀಯ ತನಿಖಾ ಸಂಸ್ಥೆ : ಭಯೋತ್ಪಾದನೆಯನ್ನು ಎದುರಿಸಲು ಕೇಂದ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೊದಲ ಮತ್ತು ಪ್ರಮುಖ ಸಂಸ್ಥೆ NIA. 2008 ರ NIA ಕಾಯ್ದೆಯ ಪ್ರಕಾರ 2009 ರಲ್ಲಿ ಸ್ಥಾಪನೆಯಾದ ಇದು ರಾಷ್ಟ್ರೀಯ ಪರಿಣಾಮಗಳನ್ನು ಉಂಟುಮಾಡಬಹುದಾದ ಭಯೋತ್ಪಾದನೆಗೆ ಸಂಬಂಧಿಸಿದಂತೆ ತನಿಖೆಗಳನ್ನು ಕೈಗೊಳ್ಳುತ್ತದೆ. NIA ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಇತರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತದೆ.
2- ಗುಪ್ತಚರ ಬ್ಯೂರೋ: ಐಬಿ ಭಾರತದ ಗುಪ್ತಚರ ಸಂಸ್ಥೆಯಾಗಿದೆ. ಕಾನೂನು ಜಾರಿ ಸಂಸ್ಥೆಗಳಿಗೆ ಒದಗಿಸಲಾದ ಭಯೋತ್ಪಾದನೆಗೆ ಸಂಬಂಧಿಸಿದಂತೆ ಯಾವುದೇ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಿಸುವುದು ಐಬಿಯ ಕಾರ್ಯವಾಗಿದೆ. ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಭಯೋತ್ಪಾದನಾ ನಿಗ್ರಹ ಸಂಸ್ಥೆಗಳು ನಿರ್ವಹಿಸುವ ಚಟುವಟಿಕೆಗಳು ಹೆಚ್ಚಾಗಿ ಐಬಿಯ ವಿಶ್ಲೇಷಣೆಯನ್ನು ಆಧರಿಸಿವೆ.
3- ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ : RAW ಕೂಡ ಮತ್ತೊಂದು ಗುಪ್ತಚರ ಸಂಸ್ಥೆಯಾಗಿದೆ. IB ದೇಶದ ಆಂತರಿಕ ವಿಷಯಗಳೊಂದಿಗೆ ವ್ಯವಹರಿಸುತ್ತದೆ, ಆದರೆ ಯಾವುದೇ ಬಾಹ್ಯ ಬೆದರಿಕೆಗಳಿಗೆ ಸಂಬಂಧಿಸಿದಂತೆ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು RAW ನ ಗಮನವಾಗಿದೆ. ಇದಕ್ಕಾಗಿ, RAW ಗಡಿಯಾಚೆಗಿನ ಚಲನೆಗಳ ನಿರಂತರ ಮೇಲ್ವಿಚಾರಣೆ ಅಥವಾ ವಿದೇಶಿ ಏಜೆನ್ಸಿಗಳೊಂದಿಗೆ ಸಹಕಾರದೊಂದಿಗೆ ಕೆಲಸ ಮಾಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಬಳಸುತ್ತದೆ. RAW ಅನ್ನು 1968 ರಲ್ಲಿ ಸ್ಥಾಪಿಸಲಾಯಿತು.
4- ಪೊಲೀಸ್ ಪಡೆಗಳು : ಭಯೋತ್ಪಾದನೆ ನಿಗ್ರಹದಲ್ಲಿ ಪೊಲೀಸರು ಸಕ್ರಿಯ ಮತ್ತು ಪ್ರಮುಖ ಪಾತ್ರ ವಹಿಸುತ್ತಾರೆ. ರಾಜ್ಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಕಾರ್ಯಾಚರಣೆಗಳನ್ನು ನಡೆಸುವ ವಿವಿಧ ವಿಶೇಷ ಕಾರ್ಯಪಡೆಗಳು (STF ಗಳು) ಇವೆ. ಕೇಂದ್ರ ಮಟ್ಟದಲ್ಲಿ, CRPF, BSF ಮತ್ತು CISF ನಂತಹ ವಿವಿಧ ಅರೆಸೈನಿಕ ಪಡೆಗಳು ಭದ್ರತೆಯನ್ನು ಒದಗಿಸಲು ಕೆಲಸ ಮಾಡುತ್ತವೆ. ವಿವಿಧ ಪಡೆಗಳು ಮಾಡುವ ಕೆಲಸವು ಪರಸ್ಪರ ನಿಕಟ ಸಮನ್ವಯದಲ್ಲಿರುತ್ತದೆ.
5- ಹಣಕಾಸು ಗುಪ್ತಚರ ಘಟಕ : FIU-IND ಹಣಕಾಸು ಸಚಿವಾಲಯದ ಅಡಿಯಲ್ಲಿ ಇರಿಸಲಾದ ಕೇಂದ್ರ ಸಂಸ್ಥೆಯಾಗಿದೆ. ಈ ಘಟಕವು ಅನುಮಾನಾಸ್ಪದ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸುವ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ, ಜೊತೆಗೆ ಇದು ಹಣ ವರ್ಗಾವಣೆ ಪ್ರಕರಣಗಳು ಮತ್ತು ಭಯೋತ್ಪಾದಕ ಸಂಘಟನೆಗಳ ಮೂಲಗಳನ್ನು ಸಹ ಪತ್ತೆಹಚ್ಚುತ್ತದೆ.
ಇತರ ಪರಿಹಾರ ಕ್ರಮಗಳು
1)ಭಯೋತ್ಪಾದಕರ ಅಡಗು ತಾಣಗಳನ್ನು ಪತ್ತೆ ಹಚ್ಚುವುದು
2)ಭಯೋತ್ಪಾದಕ ಚಟುವಟಿಕೆಗಳಲ್ಲಿ ಜನ ತೊಡಗದಂತೆ ಸೂಕ್ತ ಶೈಕ್ಷಣಿಕ ಕ್ರಮ ಕೈಗೊಳ್ಳುವುದು
3)ಜನರಲ್ಲಿ ಐಕ್ಯತೆ ಬಗ್ಗೆ ಜಾಗೃತಿ ಮೂಡಿಸುವುದು
4)ಬೀದಿ ನಾಟಕಗಳ ಮೂಲಕ ಅಂತರರಾಷ್ಟ್ರೀಯ, ರಾಷ್ಟ್ರೀಯ ಬಾವೈಕ್ಯತೆ ಬಗ್ಗೆ ಜಾಗೃತಿ ಮೂಡಿಸುವುದು
5)ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು
6)ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವುದು
7)ಭಯೋತ್ಪಾದನೆ ನಿವಾರಣೆಗೆ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಶ್ರಮಿಸಬೇಕು
8)ಸೂಕ್ತ ತರಬೇತಿ ಪಡೆದ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನೇಮಿಸಿಕೊಳ್ಳುವುದು
9)ಎಲ್ಲಾ ರಾಷ್ಟ್ರಗಳು ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹೊಂದದಂತೆ ಕಾಯ್ದೆ ಜಾರಿಗೆ ತರುವುದು
10)ಭಯೋತ್ಪಾದಕರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಬೇಕು
11)ಸಾರ್ವಜನಿಕ ಸ್ಥಳಗಳಿಗೆ ಹಾಗೂ ಗಣ್ಯವ್ಯಕ್ತಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು
12)ಸಮೂಹ ಮಾಧ್ಯಮಗಳ ಮೂಲಕ ಐಕ್ಯತೆ, ರಾಷ್ಟ್ರೀಯ ಪ್ರಜ್ಞೆ, ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು
13)ನೊಂದ, ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ನೀಡುವುದು
14)ಪುನರ್ವಸತಿ ಸೌಲಭ್ಯ ಕಲ್ಪಿಸುವುದು
15)ಶಾಲಾ ಪಠ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ವಿಷಯ ಅಳವಡಿಸುವುದು
16)ಬೇಡಿಕೆಗಳನ್ನು ಈಡೇರಿಸುವುದು.
17)ಮಕ್ಕಳಿಗೆ ಆರಂಭದಿಂದಲೂ ಜೀವನ ಕೌಶಲ್ಯ ಮತ್ತು ನೈತಿಕ ಶಿಕ್ಷಣ ಒದಗಿಸುವುದು .
ವಿಶ್ವದ ಅಪಾಯಕಾರಿ ಭಯೋತ್ಪಾದನೆ ಸಂಘಟನೆಗಳು
ದಿ ಇನ್ ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ ಅಂಡ್ ಪೀಸ್ ಬಿಡುಗಡೆ ಮಾಡುವ
ಜಾಗತಿಕ ಭಯೋತ್ಪಾದನಾ ಸೂಚ್ಯಂಕ - 2018 ಪ್ರಕಾರ
1)ಇಸ್ಲಾಮಿಕ್ ಸ್ಟೇಟ್
2)ದಿ ತಾಲಿಬಾನ್
3)ಅಲ್ ಶಬಾಬ್
4)ಬೋಕೋ ಹರಾಮ್
ಜಾಗತಿಕ ಭಯೋತ್ಪಾದನಾ ಸೂಚ್ಯಂಕ 2025 ರ ಪ್ರಕಾರ ಭಯೋತ್ಪಾದನೆ ದಾಳಿಗೆ ತುತ್ತಾದ ಅಗ್ರ ರಾಷ್ಟ್ರಗಳು
ಬುರ್ಕಿನಾ ಪಾಸೋ-1
ಪಾಕಿಸ್ತಾನ -2
ಸಿರಿಯಾ-3
ಮಾಲಿ -4
ನೈಜರ್ -5
ಭಾರತ-14 ನೇ ಸ್ಥಾನ
Tehreek-e-Taliban Pakistan ತೆಹರಿಕ್ ಇ ತಾಲಿಬಾನ್ (TTP) ಸಂಘಟನೆಯು ಅತಿ ವೇಗವಾಗಿ ಬೆಳೆಯುತ್ತಿರುವ ಉಗ್ರ ಸಂಘಟನೆಯಾಗಿದೆ.
ಇಸ್ಲಾಮಿಕ್ ಸ್ಟೇಟ್ (IS) ಇದು ವಿಶ್ವದ ಭಯಾನಕ ಭಯೋತ್ಪಾದನೆ ಸಂಘಟನೆಯಾಗಿದೆ.
ವಿಶ್ವದಲ್ಲಿನ ಭಯೋತ್ಪಾದನೆ ಘಟನೆಗಳ ಪ್ರಮಾಣ
2023- ರಲ್ಲಿ 21596 ಸಾವು
2022 - ರಲ್ಲಿ 21957 ಸಾವು
2021- ರಲ್ಲಿ 23712 ಸಾವು
ಇನ್ಸ್ಟಿಟ್ಯೂಟ್ ಪಾರ್ ಎಕನಾಮಿಕ್ ಅಂಡ್ ಪೀಸ್
ಸಂಸ್ಥೆಯ ವರದಿಯಂತೆ
ಭಯೋತ್ಪಾದನೆಯಿಂದ ಸುರಕ್ಷಿತ ದೇಶಗಳು - ಐಸಲ್ಯಾಂಡ್, ನ್ಯೂಜಿಲ್ಯಾಂಡ್, ಆಸ್ಟ್ರಿಯಾ, ಪೋರ್ಚುಗಲ್, ಡೆನ್ಮಾರ್ಕ್, ಕೆನಡಾ, ಜೆಕ್ ಗಣರಾಜ್ಯ, ಸಿಂಗಾಪುರ, ಜಪಾನ್, ಐರ್ಲೆಂಡ್ ಮುಂತಾದವು
ಭಯೋತ್ಪಾದನೆಯ ಅಸುರಕ್ಷಿತ ದೇಶಗಳು - ಸಿರಿಯಾ, ಯೆಮನ್, ಅಫ್ಘಾನಿಸ್ತಾನ, ಲಿಬಿಯಾ, ದಕ್ಷಿಣ ಸುಡಾನ್, ಸೋಮಾಲಿಯ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಇರಾಕ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ. ಮುಂತಾದವು
ಶ್ರೀಮಂತ ಭಯೋತ್ಪಾದನೆ ಸಂಘಟನೆಗಳು
2017 ಗ್ಲೋಬಲ್ ಟೆರೆರಿಸಮ್ ಡೆಟಾಬೇಸ್ ಸಮೀಕ್ಷೆ ಪ್ರಕಾರ
1)ಹಿಜ್ ಬಲ್ಲಾಹ
2) ದಿ ತಾಲಿಬಾನ್
3)ಹಮಾಸ್
4)ಅಲ್ ಖೈದಾ
5)ಐ ಎಸ್ ಐ ಎಸ್
ಭಾರತೀಯ ಭಯೋತ್ಪಾದನೆ ಸಂಘಟನೆಗಳ ನಿಷೇಧ
Unlawful terrorist prevention act 1967 ರ ಪ್ರಕಾರ ಕೇಂದ್ರ ಗೃಹ ಸಚಿವಾಲಯವು ಭಯೋತ್ಪಾದಕ ಸಂಘಟನೆಗಳು ಮತ್ತು ಅಕ್ರಮ ಸಂಘಗಳ ಪಟ್ಟಿಯನ್ನು ನವೀಕರಿಸಿದ್ದು, ಸಚಿವಾಲಯವು ಹೊಸ ಪಟ್ಟಿಯಲ್ಲಿ ಸುಮಾರು 67 ಭಯೋತ್ಪಾದಕ ಗುಂಪುಗಳನ್ನು ಸೇರಿಸಿದೆ. ಇವು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮತ್ತು ದೇಶಕ್ಕೆ ಅಪಾಯಕಾರಿಯಾಗುತ್ತಿರುವ ಸಂಘಟನೆಗಳಾಗಿವೆ ಎಂಬುದು ಗಮನಾರ್ಹ.
ಪ್ರಮುಖ ಸಂಘಟನೆಗಳು
1)ಅಖಿಲ ಭಾರತ ನೇಪಾಳಿ ಏಕತಾ
2)ಅಲ್ ಬಾದ್ರಾ
3)ಆಲ್ ತ್ರಿಪುರ ಟೈಗರ್ ಫೋರ್ಸ್
4)ಅಲ್ ಖೈದಾ
5)ಅಲ್ ಉಮರ್ ಮುಜಾಹಿದ್ದಿನ್
6)ಮಾವೋಯಿಸ್ಟ
7)ಇಂಡಿಯನ್ ಮುಜಾಹಿದ್ದಿನ್
8) ಜೈಷ್ ಎ ಮೊಹಮ್ಮದ್
9)ಲಷ್ಕರ್ ಎ ತೋಯ್ಬಾ
10)ಜೆ ಕೆ ಎಲ್ ಎಫ್

11)ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಮುಂತಾದ ಪ್ರಮುಖ ಸಂಘಟನೆಗಳು
ಭಯೋತ್ಪಾದನೆ ಸಂಘಟನೆಗಳಿಂದ ಇತ್ತಿಚಿನ ಬಾಂಬ್ ಸ್ಫೋಟ ಪ್ರಕರಣಗಳು
ಭಯೋತ್ಪಾದನೆ ಸಂಘಟನೆಗಳಿಂದ ಇತ್ತಿಚಿನ ಬಾಂಬ್ ಸ್ಫೋಟ ಪ್ರಕರಣಗಳು
ಏಪ್ರಿಲ್ 22, 2025: ಪಹಲ್ಗಾಮ್ ದಾಳಿ.ಸ್ಥಳ ಕಾಶ್ಮೀರ, ಸಾವು- 28
ಮಾರ್ಚ್ 7 2019 ರ ಜಮ್ಮು ಬಸ್ ನಿಲ್ದಾಣದ ಗ್ರೆನೇಡ್ ಸ್ಫೋಟ- ಸ್ಥಳ ಜಮ್ಮು ಕಾಶ್ಮೀರ, ಸಾವು- 3
2019 ಫೆಬ್ರುವರಿ 14 ಜಮ್ಮು ಕಾಶ್ಮೀರ ರಾಜ್ಯದ ಪುಲ್ವಾಮಾ ಜಿಲ್ಲೆಯ ಆವಂತಿಪುರ ರಸ್ತೆ ಯಲ್ಲಿ ನಡೆದ ಯೋದರ ಮೇಲಿನ ದಾಳಿ. ಇದರಿಂದ 46 ಜನ ಭಾರತೀಯ ಯೋಧರು ಮೃತಪಟ್ಟಿದ್ದರು. 35 ಜನ ಗಾಯಗೊಂಡಿದ್ದರು. ಈ ದಾಳಿ ಜೈಷ್ ಎ ಮೊಹಮ್ಮದ್ ಸಂಘಟನೆ ದಾಳಿ ಮಾಡಿತ್ತು.
2018 ಮಾರ್ಚ್ 13 ರಂದು ಛತ್ತೀಸಗಡದ ಸುಕ್ಮಾದಲ್ಲಿ ನಡೆದ ಘಟನೆಯಲ್ಲಿ 09 ಜನ ಮೃತಪಟ್ಟಿದ್ದರು. ಮಾವೋಯಿಸ್ಟ ಭಯೋತ್ಪಾದನೆ ಸಂಘಟನೆ ದಾಳಿ ಮಾಡಿತ್ತು.
2018 ಫೆಬ್ರುವರಿ 10 ರಂದು ಜಮ್ಮು ಕಾಶ್ಮೀರ ರಾಜ್ಯದ ಸಂಜುವಾನ್ ದಾಳಿಯಲ್ಲಿ 11 ಜನ ಮೃತಪಟ್ಟಿದ್ದರು, 11ಜನ ಗಾಯಗೊಂಡಿದ್ದರು. ಈ ದಾಳಿಯಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆ ದಾಳಿ ಮಾಡಿತ್ತು.
2017 ಜುಲೈ 11 ರಂದು ಜಮ್ಮು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯ ಅಮರನಾಥ ಯಾತ್ರಾ ದಾಳಿ ಯಲ್ಲಿ 7 ಜನ ಮರಣ ಹೊಂದಿದ್ದರು, 6 ಜನ ಗಾಯಗೊಂಡಿದ್ದರು. ಈ ದಾಳಿ ಲಷ್ಕರ್ ಎ ತೋಯ್ಬಾ ಸಂಘಟನೆಯಿಂದಾಗಿತ್ತು.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದೆ. ಇದು ಒಂದು ಉಗ್ರರ ಸಂಹಾರಕ್ಕೆ ಅತ್ಯುತ್ತಮ ಹೆಜ್ಜೆಯಾಗಿದೆ. ಶ್ರೀಲಂಕಾದಲ್ಲಿ ಮಹಿಳಾ ಉಗ್ರಗಾಮಿಗಳು ಬುರ್ಖಾ ಧರಿಸಿ ಬಾಂಬ್ ಸ್ಫೋಟ ಮಾಡಿ ಹಿಂಸಾಚಾರ ಮಾಡಿದ್ದಕ್ಕೆ ಭಾರತದಲ್ಲಿ ಬುರ್ಖಾ ನಿಷೇಧಕ್ಕೆ ಚಿಂತನೆನಡೆಯುತ್ತಿದೆ.
2025 ಮೇ ದಲ್ಲಿ ಭಾರತದಲ್ಲಿ ಇತ್ತಿಚಿಗೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರನ್ನು ಸದೆಬಡೆಯುವ ಪ್ರಯತ್ನ ನಡೆಯಿತು. ಭಯೋತ್ಪಾದನೆ ಮಟ್ಟ ಹಾಕಲು ರಾಜತಾಂತ್ರಿಕ ಯುದ್ಧ ಸಾರಲಾಯಿತು. ನಂತರ ಒಪ್ಪಂದದ ಮೂಲಕ ಯುದ್ಧವನ್ನು ನಿಲ್ಲಿಸಲಾಯಿತು.
ಉಗ್ರರ 9 ಶಿಬಿರ ಧ್ವಂಸ
ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ 9 ಶಿಬಿರಗಳನ್ನು 'ಆಪರೇಷನ್ ಸಿಂಧೂರ' ಧ್ವಂಸಗೊಳಿಸಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ಗಳಿಗೆ ಕಾರಣವಾಗಿರುವ ಉಗ್ರ ಸಂಘಟನೆ ಗಳಾದ ಲಷ್ಕರ್ ಇ ತೋಯ್ದಾ (ಎಲ್ಇಟಿ), ಜೈಷ್ ಇ ಮೊಹಮ್ಮದ್ (ಜೆಇಎಂ) ಮತ್ತು ಹಿಬ್ಬುಲ್ ಮುಜಾಹಿದೀನ್ಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಉಪಸಂಹಾರ - ಭಯೋತ್ಪಾದನೆ ಎಂಬುದು ಅಳಿಸಲಾಗದ ಕಪ್ಪು ಮಸಿಯಂತಿದ್ದು ಸರ್ಕಾರ ಎಷ್ಟೇ ಕ್ರಮ ಕೈಗೊಂಡರು ಇದರ ನಿವಾರಣೆ ಕಷ್ಟ ಅನಿಸುತ್ತಿದೆ. ಭಯೋತ್ಪಾದನೆ ನಿಗ್ರಹ ದಿನ - ಮೇ 21 ರಂದು ಪ್ರತಿ ವರ್ಷ ಭಾರತದಲ್ಲಿ ಆಚರಿಸಲಾಗುತ್ತದೆ. ಈ ಭಯೋತ್ಪಾದನೆ ವಿರೋಧಿ ದಿನಾಚರಣೆಯನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಪೆರಂಬೂರಿನಲ್ಲಿ ಎಲ್ ಟಿ ಟಿ ಇ ಉಗ್ರರು ಗುಂಡು ಹಾರಿಸಿ ಕೊಂದಿದ್ದರು ಅವರ ಪುಣ್ಯತಿಥಿ ನಿಮಿತ್ತ ಈ ಭಯೋತ್ಪಾದನೆ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭಯೋತ್ಪಾದನೆ ನಿಗ್ರಹದ ಕುರಿತು ಚರ್ಚೆ, ವಿಚಾರ ಸಂಕಿರಣ ನಡೆಯುತ್ತಿವೆ.
terrorism concept complete explanation
ReplyDeleteGood
ReplyDeletethanku frnd
ReplyDeleteVery good information.. Thank u sir
ReplyDeleteಧನ್ಯವಾದಗಳು
DeleteSir i need some more information about international relationship and good governance. Pls Can put these articles if possible ..
ReplyDeleteಓಕೆ ಪ್ರಯತ್ನಿಸುವೆ
Deleteಎಲ್ಲರಿಗೂ ಧನ್ಯವಾದಗಳು ಒಟ್ಟು 150 ಜನ ಇಲ್ಲಿಯವರೆಗೆ ಈ ಭಯೋತ್ಪಾದನೆ ಅರ್ಥ ವಾಖ್ಯೆ ಕಾರಣ ಪರಿಣಾಮಗಳ ಬಗ್ಗೆ ವಿಕ್ಷಿಸಿದ್ದಾರೆ
ReplyDeleteಇಲ್ಲಿಯವರೆಗೆ 150 ಜನ ಈ ಭಯೋತ್ಪಾದನೆ ಅರ್ಟಿಕಲ್ ವಿಕ್ಷಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು
ReplyDeleteThank u so much sir
ReplyDeletethanku all
ReplyDeleteThank you sir
ReplyDeleteಇಲ್ಲಿಯವರೆಗೆ 400 ಜನ ವಿಕ್ಷಿಸಿದ್ದಾರೆ. ಧನ್ಯವಾದಗಳು
ReplyDeleteperfect Explanation...Sir please share article about Corruption and Population
ReplyDeleteAmazing explination sirrrrr..👌👌
ReplyDeletethank you so much sir give the information 💐
ReplyDeleteThank you so much sir
ReplyDeleteWc
ReplyDeleteಭಯೋತ್ಪಾದನೆಯ ಲಕ್ಷಣಗಳಿಗೆ ವಿವರಣೆ ತಿಳಿಸಿ
ReplyDeleteThank you, sir, for collecting and sharing complete information about terrorism in this article.
ReplyDelete