Tuesday, 5 February 2019

Sankranti hadu by Bairappa Halappagol ಸಂಕ್ರಾಂತಿ ಸಡಗರ ಸುಗ್ಗಿ ಸಂಭ್ರಮ (ಸಂಕ್ರಾಂತಿ ಹಾಡು) ಭೈರಪ್ಪ ಹಾಲಪ್ಪಗೋಳ

 ಸಂಕ್ರಾಂತಿ ಸಡಗರ  ಸುಗ್ಗಿ ಸಂಭ್ರಮ
ಸಂಕ್ರಾಂತಿ ಹಬ್ಬಕ್ಕ ಹೇಳ್ತೀನಿ ಕೇಳ್ರವ್ವ ನಮ್ಮೂರ ಸುಗ್ಗಿ ಸಂಭ್ರಮನಾ
ಕುಣಿಯುತ್ತ ನಲಿಯುತ್ತ ಸಿಹಿಯನ್ನು ಹಂಚುತ್ತಾ ಹೇಳ್ತೀನಿ ಕೇಳು  ನಮ್ಮಣ್ಣಾ ll

ಭೂತಾಯಿಯ ಕೃಪೆ ಯಿಂದ ನಮ್ಮ ಊರೆಲ್ಲಾ ಸಿರಿಧಾನ್ಯ
ಮನೆಮನೆಗೂ ಬಂದೈತೆ ಸುಗ್ಗಿಯ ಸಡಗರ ಸಂಭ್ರಮ ಅನನ್ಯ

ಮಳೆ ಬರಲಿ ಬರ ಬರಲಿ  ಸುಖ ಬರಲಿ ದುಖ ಬರಲಿ
ಹಿರಿಯರು ನಂಬಿದ ಕೃಷಿ ಕೆಲಸ  ಎಂದೆಂದೂ ನಾವು ಬಿಡೊದಿಲ್ಲ

ಎಂಥೆಂಥ  ಸಾಲಿ ಬರಲಿ ಎಂಥೆಂಥ ಕೆಟ್ಟ ಬರ  ಬರಲಿ
ಕೋಟಿ ವಿಧ್ಯಗಿಂಥ ಮೇಟಿ  ವಿದ್ಯೆ ಮೇಲಂತ ಜಂಬದಿಂದ ನಾ ಹೇಳ್ತೀನಿ

ರಾಮ ಲಕ್ಷ್ಮಣ ಎತ್ತು  ಗೌರಿ ಗಂಗೆ ಹಸು ದೇವರಂತೆ ಸಿಗುವಾಗ
ಮತ್ತ್ಯಾರು ಬೇಕ ನನ್ನ  ಸಾಟಿ  ಮತ್ತೇನ ಬೇಕ ಸರ್ಕಾರ

ನಮ್ಮೂರ ನಮಗ ಪಾಡ ನಮ್ಮ ಕೃಷಿನ ನಮಗ ಪಾಡ
ಶಹರ, ಪಟ್ಟಣದ ಹಾದಿ ಹಿಡಿದರ ಮೆಚ್ಚನೂ ನಮ್ಮ ಬಸವಣ್ಣ

ಮಲ್ಲಪ್ಪನ ಜಾತ್ರೆಗೆ ಸಿಂಗಾರ ಮಾಡಿಕೊಂಡು ಜೋಡೆತ್ತಿನ ಬಂಡಿ ಹೂಡ್ತೀನಿ
ಹೊಸ ಬಟ್ಟೆ ಹಾಕೊಂಡ ಹಾಡುತ್ತಾ ನಲಿಯುತ್ತ ರೈತ ಸಾಹುಕಾರನಂಗ ಮೆರಿತಿನಿ

ಮಲ್ಲಪ್ಪನ ಜಾತ್ರೆಗೆ ಹೋಗುಣು ಬಾರಕ್ಕ ಬುತ್ತಿಯ  ತಗೊಂದು ತವರಿಗೆ
 ಬಸವಣ್ಣ ರಿಗೆ  ಗಂಟೆ  ಹಣೆಪಟ್ಟಿ ಯ ತಗೊಂಡು  ಬರೋಣ ನಗನಗುತ ಊರಿಗೆ


ಮನೆಯಲ್ಲಿ ಶೇಂಗಾ ಹೋಳಿಗೆ ಮಾಡಿಕೊಂಡು ಊರಿನ ದೇವರಿಗೆ ನೈವೇದ್ಯ ಕೂಟ್ಟು
ಅಕ್ಕನ ಮಕ್ಕಳಿಗೆ,  ಮನೆಮಂದಿಗೆಲ್ಲ ಜಾತ್ರೆಯ ಉಡುಗೊರೆ ಕೂಡುವೆನು

ಬಿಳಿಜೋಳ ಕಟಕ್ ರೂಟ್ಟಿ  ಮೊಸರು ಶೇಂಗಾ ಚಟ್ನಿ ತಿನ್ನುವ ಹೊತ್ನಾಗ
ಬರಗಾಲದ  ಕಷ್ಟ ಮರೆತು ಎಳ್ಳು ಬೆಲ್ಲ ತಿಂದು ಸಂಕ್ರಾಂತಿ ಹಬ್ಬ ಮಾಡೇನ

ಯಾವದೇ  ಸರ್ಕಾರ ಬರಲಿ ಯಾವದೇ ದೂರೆ ಆಳಲಿ ನಮ್ಮ ಸಾಮ್ರಾಜ್ಯದಾಗ
ರಾಮ ಲಕ್ಷ್ಮಣ ಗಂಗೆ ಗೌರಿ ನೇ ನನ್ನ ದೂರೆಗಳು  ನನ್ನ ಹೊಲವೇ ನನ್ನ ಸಾಮ್ರಾಜ್ಯ ಅಂತಿನಿ ಆಗಾಗ

ಇಡಿ ಜಗತ್ತು ಅನ್ನ  ಬೇಡುವಾಗ ಹಸಿಯದಂಗ ಆಹಾರ ಬೆಳೆದು ಕೂಡ್ತೀನಿ
ಹೀಗೆ ನಗು ನಗುತಾ ಸಂಕ್ರಾಂತಿ ಹಬ್ಬನ ಕಷ್ಟದಾಗೂ ಸಡಗರದಿಂದ ಮಾಡ್ತಿನಿ

ಕೃಷಿ ಕೆಲಸದಾಗ ನನ್ನ ಮಗ ಭಾರಿ ಅಂಥ ಮೇಲಮೇಲೆ ಸಾಧಿಸಿ ತೋರಿಸ್ತಿನಿ
ಅಪ್ಪ ಅಮ್ಮಗ ಮುದ್ದಿನ ಮಗನಾಗಿ ಭೂತಾಯಿಗೆ ಮಣ್ಣಿನ ಮಗನಾಗಿ  ಸದಾ ಇರ್ತಿನಿ

 ಸಂಕ್ರಾಂತಿ ಹಬ್ಬಕ್ಕ ಹೇಳ್ತೀನಿ ಕೇಳ್ರವ್ವ ನಮ್ಮೂರ ಸುಗ್ಗಿ ಸಂಭ್ರಮನಾ
ಕುಣಿಯುತ್ತ ನಲಿಯುತ್ತ ಸಿಹಿಯನ್ನು ಹಂಚುತ್ತಾ ಹೇಳ್ತೀನಿ ಕೇಳು  ನಮ್ಮಣ್ಣಾll

                               ರಚನೆ - ಭೈರಪ್ಪ ಹೆಚ್ ಕೆ

1 comment: