ಕರಗಾಂವದ ಬೀರದೇವರ ದೇವಸ್ಥಾನ :ಪರಿಚಯ ಮತ್ತು ಹಿನ್ನೆಲೆ
ಕರಗಾಂವ ಎಂದರೆ ತಟ್ಟನೆ ಹೊಳೆಯುವುದು ಕರಗಾಂವದ ಬೀರದೇವರು. ಕರಗಾಂವ ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಒಂದು ಗ್ರಾಮ. ಇದು ಚಿಕ್ಕೋಡಿ ಪಟ್ಟಣದಿಂದ 18 ಕಿ. ಮೀ ಅಂತರದಲ್ಲಿದೆ. ಕರಗಾಂವ ಗ್ರಾಮದ ಬೀರದೇವರ ದೇವಸ್ಥಾನ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರ ಭಾಗಗಳಲ್ಲಿ ಭಕ್ತ ಸಮೂಹ ಹೊಂದಿದೆ. ಈಗ ಇರುವ ಕರಗಾಂವ ಗ್ರಾಮ ಕ್ಕಿಂತ ಮೈದಲು ಇಲ್ಲಿಂದ ಸುಮಾರು 2 ಮೈಲಿ ಅಂತರದಲ್ಲಿ "ಚೆನ್ನವೀರಹಟ್ಟಿ" ಎಂಬ ಒಂದು ಪ್ರದೇಶವಿತ್ತು. ಆ ಚೆನ್ನವೀರಹಟ್ಟಿಯನ್ನು ಒಬ್ಬ ಗೌಡ ಆಳುತ್ತಿದ್ದ, ಆ ಗೌಡನ ಮನೆಯಲ್ಲಿ ದೊಡ್ಡ ಆಕಳುಗಳ ಹಿಂಡು ಇತ್ತು. ಈ ಆಕಳುಗಳ ಹಿಂಡು ದಿನನಿತ್ಯ ಮೇಯಲು ಈಗಿರುವ ಕರಗಾಂವ ಗ್ರಾಮದ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿತ್ತು. ಆ ಕಾಲದಲ್ಲಿ ಕರಗಾಂವ ಗ್ರಾಮದ ಪ್ರದೇಶದಲ್ಲಿ ಅತಿಯಾದ ಪಡುಗಳ್ಳಿ ಇತ್ತು.ಇಲ್ಲಿ ಮೇಯಲು ಎಲ್ಲ ಜನರ ದನಕರುಗಳು ಬರುತ್ತಿದ್ದವು. ಅಲ್ಲಿಯೇ ಗೌಡನ ಆಕಳುಗಳು ಕೂಡಾ ಮೇಯಲು ಬರುತ್ತಿದ್ದವು. ಹೀಗೆ ಬರುವ ಆಕಳುಗಳ ಹಿಂಡು ಹೊಟ್ಟೆ ತುಂಬಾ ಮೇಯ್ದು ಸಾಯಂಕಾಲ ಮನೆಗೆ ಹೋಗುತ್ತಿದ್ದವು. ಒಂದು ದಿನ ಗೌಡನು ಎಂದಿನಂತೆ ಆಕಳ ಹಾಲು ಹಿಂಡಲು ಮುಂದಾಗುತ್ತಾನೆ. ಅಲ್ಲಿರುವ ಎಲ್ಲ ಆಕಳುಗಳು ಎಂದಿನಂತೆ ಹಾಲನ್ನು ನೀಡುತ್ತವೆ. ಆದರೆ ಒಂದು ಆಕಳು ಮಾತ್ರ ಹಾಲನ್ನು ಕೊಡಲಿಲ್ಲ. ಹೀಗೆ ಎರಡು ಮೂರು ದಿನಗಳ ಕಾಲ ಆಕಳು ಹಾಲನ್ನು ನೀಡಲಿಲ್ಲ. ಸಂಶಯಗೊಂಡ ಗೌಡನು ಆಕಳುಗಳು ಮೇಯುವ ಸ್ಥಳಕ್ಕೆ ಬಂದ ಆಕಳುಗಳ ಹಿಂಡು ಎಲ್ಲವೂ ಎಂದಿನಂತೆ ಮೇಯಲು ಪ್ರಾರಂಬಿಸಿತು. ಆದರೆ ಒಂದು ಕಪ್ಪು ಆಕಳು ಈಗ ಇರುವ ಬೀರದೇವರ ದೇವಸ್ಥಾನ ಜಾಗದಲ್ಲಿ ಮೊದಲು ದಟ್ಟ ಪಡುಗಳ್ಳಿ ಬೆಳೆಯುತ್ತಿತ್ತು ಈ ಕಳ್ಳಿಯಲ್ಲಿ ಒಂದು ಹಾವಿನ ಗುತ್ತಿ ಇತ್ತು ಅದರ ಮೇಲೆ ಆಕಳು ಹಾಲು ನೀಡುವ ದೃಶ್ಯವನ್ನು ಆ ಗೌಡ ಕಣ್ಣಾರೆ ಕಂಡು ಆಶ್ಚರ್ಯಚಕಿತನಾದನು. ಸಂತೋಷದಿಂದ ಓಡಿ ಹೋಗಿ ಚನ್ನವೀರಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸುದ್ದಿ ತಿಳಿಸಿದ. ಸುದ್ದಿ ಗಾಳಿಸುದ್ದಿಯಂತೆ ಎಲ್ಲಕಡೆ ಹರಡಿತು ಸಾಕಷ್ಟು ಜನರು ಬಂದು ದಿನನಿತ್ಯ ಆಕಳು ಗುತ್ತಿಯ ಮೇಲೆ ಹಾಲು ನೀಡುವ ದೃಶ್ಯ ನೋಡಿದರು. ಎಲ್ಲರೂ ಯೋಚನೆ ಮಾಡಿ ಗುತ್ತಿಯಲ್ಲಿ ಏನಿರಬೇಕೆಂದು ತಿಳಿದುಕೊಳ್ಳಲು ಕುತೂಹಲದಿಂದ ಗುತ್ತಿ ಅಗೆದು ಅಲ್ಲಿ ಹುತ್ತದಲ್ಲಿ ಋಷಿ ರೂಪದ ವ್ಯಕ್ತಿ ಕಾಣಸಿಗುತ್ತಾನೆ. ಆಗ ಎಲ್ಲ ಜನರು ಈ ವ್ಯಕ್ತಿ ಸಾಮಾನ್ಯ ವ್ಯಕ್ತಿಅಲ್ಲ ಅವನು ಮಹಾನ್ ಋಷಿಮುನಿ ಎಂದು ಅವನಿಗೆ ಖರೇಸಿದ್ದ ಎಂದು ನಾಮಕರಣ ಮಾಡಿದರು. ಮುಂದೆ ಅದೇ ಜಾಗದಲ್ಲಿ ದೇವಸ್ಥಾನ ಕಟ್ಟಿಸಿ ಖರೇಸಿದ್ದನ ಪೂಜಾ ಕಾರ್ಯಗಳು ನೆರವೇರುತ್ತವೆ. ಮುಂದೆ ಜನರ ಆಡು ಭಾಷೆಯಲ್ಲಿ ಕರಿಸಿದ್ದ ಎಂದು ಹೆಸರು ಪ್ರಚಲಿತಗೊಳ್ಳುತ್ತದೆ. ಗ್ರಾಮಕ್ಕೆ ಕೂಡಾ ಖರೇಗಾಂವ ಎಂಬ ಹೆಸರು ಬರುತ್ತದೆ ಮುಂದೆ ಕ್ರಮೇಣ ಕರಗಾಂವ ಎಂಬ ಹೆಸರು ರೂಡಿಗೆ ಬರುತ್ತದೆ. ಅಂದಿನಿಂದ ಇಂದಿನವರೆಗೆ ದೇವಸ್ಥಾನದ ಬೆಳವಣಿಗೆ ಕರ್ನಾಟಕದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ ಮತ್ತು ಮಹಾರಾಷ್ಟ್ರದಲ್ಲಿ ಸಾಂಗ್ಲಿ, ಕೊಲ್ಲಾಪುರ, ಪುಣೆ, ಸೊಲ್ಲಾಪುರ ಜಿಲ್ಲೆಗಳಿಂದ ಬಹುಸಂಖ್ಯಾತ ಜನರು ದೇವರ ದರ್ಶನಕ್ಕೆ ಬರುತ್ತಾರೆ.
ಉಸ್ತುವಾರಿ - ಕರಗಾಂವ ಗ್ರಾಮದ ಬೀರದೇವರ ದೇವಸ್ಥಾನದ ಉಸ್ತುವಾರಿ ಕರಗಾಂವದ ಡಿ ಟಿ ಪಾಟೀಲ ಕರಗಾಂವ, ಎಸ್ ಆರ್ ಪಾಟೀಲ ಕುಟುಂಬಗಳು ಹೊತ್ತಿದ್ದು, ಪೂಜಾ ಕಾರ್ಯವನ್ನು ಕುರುಬ ಸಮುದಾಯದ ಜನರು ನಿರ್ವಹಿಸುತ್ತಾರೆ.
ಪವಾಡಗಳಿಗೆ ಪ್ರಸಿದ್ಧವಾದ ಕರಗಾಂವದ ಬೀರಸಿದ್ದೇಶ್ವರ ದೇವಾಲಯ-
ಕರಗಾಂವ ಗ್ರಾಮದ ಐತಿಹಾಸಿಕ ಬೀರದೇವರು ಮೊದಲಿನಿಂದಲೂ ಗಾಂಜಾ ಸೇವಿಸುತ್ತಿರುವುದು ವಿಶೇಷ. ಸರ್ಕಾರದ ಕಾಯ್ದೆ ಕಾನೂನುಗಳ ಪ್ರಕಾರ ಗಾಂಜಾ ಸೇವನೆ ಬಳಕೆ ನಿಷೇಧ ಮಾಡಲಾಗಿದೆ ಕೆಲವು ದಶಕಗಳ ಹಿಂದೆ ಕೆಲವು ಪೋಲಿಸ್ ಅಧಿಕಾರಿಗಳು ಗಾಂಜಾ ತಡೆಯಲು ಬಂದಾಗ ಅವರ ಕಣ್ಣು ಕುರುಡಾಗಿ, ಅನಾರೋಗ್ಯ ಕಾಡಿತು ಆಗತಕ್ಷಣ ಬೇಡಿಕೊಂಡ ಪೋಲಿಸ್ ಅಧಿಕಾರಿ ದೇವರಿಗೆ ಪ್ರತಿ ವರ್ಷ ಗಾಂಜಾ ನೀಡಲು ಮುಂದಾಗುತ್ತಾನೆ ಆಗ ಕರಗಾಂವ ಗ್ರಾಮದ ಬೀರದೇವರ ಮಹಿಮೆಯಿಂದ ಪೋಲಿಸ್ ಅಧಿಕಾರಿಗಳಿಗೆ ಕಣ್ಣು ಬರುತ್ತವೆ ಅಂದಿನಿಂದ ಇಂದಿನವರೆಗೆ ಪೋಲಿಸ್ ಅಧಿಕಾರಿಗಳ ಕುಟುಂಬದವರು ದೇವರಿಗೆ ಗಾಂಜಾ ನೀಡುತ್ತಾರೆ. ಅವರಷ್ಟೆ ಅಲ್ಲ ಹಲವಾರು ಭಕ್ತರು ದೇವರಿಗೆ ಭಕ್ತಿಯಿಂದ ಗಾಂಜಾ ನೀಡುತ್ತಾರೆ.
ಹಲವು ವಿಶೇಷಗಳಿಗೆ ಸಾಕ್ಷಿ -
ಕರಗಾಂವದ ಬೀರದೇವರು ಅಪಾರ ಭಕ್ತ ಸಮೂಹ ಹೊಂದಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳು, ಗಾಳಿಯಾದ ವ್ಯಕ್ತಿಗಳು ದೇವರ ಆರಾಧನೆ ಮಾಡಿದರೆ ಸಂಪೂರ್ಣವಾಗಿ ಎಲ್ಲವೂ ಕಡಿಮೆಯಾಗುತ್ತದೆ. ಇನ್ನೂ ಬೇಡಿಕೊಂಡ ಎಲ್ಲ ಕಾರ್ಯಗಳು ಇಡೇರುತ್ತವೆ. ಪ್ರಮುಖವಾಗಿ ಉದಾಹರಣೆ ಎಂದರೆ ಮಕ್ಕಳಿಲ್ಲದ ದಂಪತಿಗಳು ದೇವರಿಗೆ ಭಕ್ತಿಯಿಂದ ನಡೆದುಕೊಂಡಾಗ ಅವರಿಗೆ ಮಕ್ಕಳಾದ ಅದೆಷ್ಟೋ ಉದಾಹರಣೆ ಈಗಲೂ ಚಾಲ್ತಿಯಲ್ಲಿವೆ. ವಿವಾಹ ಸಂಬಂಧಗಳು ಕೂಡಿ ಬರದ ವದು ವರರು ಬೇಡಿಕೊಂಡಾಗ ಅವರಿಗೆ ವಿವಾಹ ಭಾಗ್ಯ ಒದಗಿಬಂದಿರುವ ಘಟನೆಗಳು ಕೂಡಾ ನೂರಾರು.
ಹೀಗೆ ನೀರಿನ ಭವನೆಯಿಂದ ತತ್ತರಿಸಿರುವ ವ್ಯಕ್ತಿಗಳು ದೇವರ ಬಳಿ ಬಂದು ಬೇಡಿಕೊಂಡು ದೇವರ ನುಡಿ ಕೇಳಿದಾಗ, ಕವಲು ಹಾಕಿದಾಗ ಉತ್ತಮ ನೀರು ಲಭಿಸಿವೆ. ಹೀಗೆ ಜೀವನದ ಹಲವಾರು ಸಮಸ್ಯೆಗಳನ್ನು ಜನರು ದೇವರ ಬಳಿ ಕೇಳಿದಾಗ ದೇವರು ಎಲ್ಲರಿಗೂ ಪರಿಹಾರ ಒದಗಿಸಿದ್ದಾನೆ.
ಬೀರದೇವರ ನಾಯಕತ್ವ - ಕರಗಾಂವದ ಬೀರದೇವರು ಹಾಗೂ ನಾಗರಮುನ್ನೋಳಿಯ ಮತ್ತು ಕಬ್ಬೂರದ ಹಾಲಸಿದ್ದ ದೇವರುಗಳ ಮದ್ಯೆ ಯುದ್ಧ ನಡೆದಾಗ ಕರಗಾಂವ ಬೀರದೇವರು ಗೆಲುವು ಸಾಧಿಸಿದ್ದ ಎನ್ನುವ ಸಂಗತಿಗಳು ನಡೆದುಹೋಗಿದ್ದವು. ಹಾಗೆಯೇ ಯಡೂರ ಹೊಳೆಗೆ ದೇವರು ಹೋದಾಗ ಎಲ್ಲ ದೇವರುಗಳು ಬಂದು ಕರಗಾಂವ ಬೀರದೇವರಿಗೆ ಶರನಾಗುತ್ತವೆ ಎಂಬ ವಿಚಾರ ಇನ್ನು ಜಾರಿಯಲ್ಲಿದೆ. ಕರಗಾಂವದ ಬೀರದೇವರು ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಮುಂದಾಳತ್ವ ವಹಿಸಿದ್ದು ಕೂಡಾ ನೋಡಬಹುದು. ಯಾದಗೂಡದ ಬೀರದೇವರು ಮತ್ತು ಕರಗಾಂವದ ಬೀರದೇವರಿಗೆ ಇನ್ನೂ ಕೊಡಾ ವೈಮನಸ್ಸು ಇದೆ ಯಾದಗೂಡದ ಬೀರದೇವರಿಗೆ ಹೋಗಿ ಕರಗಾಂವದ ಬೀರದೇವರಿಗೆ ಹೋಗಬಾರದು ಎಂಬ ಮಾತು ಚಾಲ್ತಿಯಲ್ಲಿದೆ. ಇನ್ನೂ ಕೂಡಾ ಅಕ್ಕಪಕ್ಕದಲ್ಲಿ ಇರುವ ಯಾದಗೂಡದ ಬೀರದೇವರಿಗೆ ಕರಗಾಂವದ ಜನ ಹೆಚ್ಚಾಗಿ ಹೋಗುವುದಿಲ್ಲ. ಕರಗಾಂವದ ಬೀರದೇವರು ಸತ್ಯಕ್ಕೆ ಹೆಸರಾಗಿದ್ದಾನೆ.
ಅಮಾವಾಸ್ಯೆ, ಗುರುವಾರ, ರವಿವಾರದಂದು ಅಪಾರ ಭಕ್ತಗಣ ಬೇಟಿ-
ಕರಗಾಂವ ಗ್ರಾಮಕ್ಕೆ ದೂರ ದೂರದ ಊರುಗಳಿಂದ ಬರುವ ಭಕ್ತರು ಅಮಾವಾಸ್ಯೆ, ದೇವರ ವಾರ ಗುರುವಾರ ಮತ್ತು ರವಿವಾರದಂದು ಸಹಸ್ರಾರು ಸಂಖ್ಯೆಯಲ್ಲಿ ಬೇಟಿನೀಡುತ್ತಾರೆ. ಆಗ ಭಕ್ತರಿಂದ ಭಕ್ತರಿಗಾಗಿ ಅನ್ನದಾಸೋಹ ಇರುತ್ತದೆ.
ಭಕ್ತರೂ ತಮ್ಮ ಕುಟುಂಬದಲ್ಲಿ ಸಂಪತ್ತು ವೃದ್ದಿಸಿದ್ದಕ್ಕಾಗಿ ದೇವರ ಪಲ್ಲಕ್ಕಿಯನ್ನು ಮನೆಮನೆಗೆ ಕರೆದುಕೊಂಡು ಹೋಗಿ ಅನ್ನದಾಸೋಹ ಮಾಡುತ್ತಾರೆ.
ವರ್ಷಕ್ಕೆ ಎರಡು ಭಾರಿ ಬೃಹತ್ ಜಾತ್ರೆ
ಕರಗಾಂವ ಗ್ರಾಮದಲ್ಲಿ ಒಂದೇ ದೇವರಿಗೆ ವರ್ಷದಲ್ಲಿ ಎರಡು ಭಾರಿ ಬೃಹತ್ ಜಾತ್ರೆ ನಡೆಯುತ್ತದೆ. ಒಮ್ಮೆ ಮೇ ತಿಂಗಳಲ್ಲಿ ಆಗಿ ಹುಣ್ಣಿಮೆಯ ಮುಗಿದು ಮೂರನೇ ದಿನದಂದು ಹುಟ್ಟು ಹಬ್ಬ ಆಚರಣೆ ಮತ್ತು ದೀಪಾವಳಿಯಲ್ಲಿ ಐದು ದಿನಗಳ ಬೃಹತ್ ಜಾತ್ರೆ ನಡೆಯುತ್ತದೆ.
ಹುಟ್ಟು ಹಬ್ಬ ಜಾತ್ರೆ ಆಚರಣೆ - ಪ್ರತಿವರ್ಷ ಆಗಿ ಹುಣ್ಣಿಮೆ ಆದ ಎರಡನೇ ದಿನದಂದು ಸಾಯಂಕಾಲ ಎಲ್ಲ ಗ್ರಾಮಗಳಿಂದ ವಾಲಗ ಕೂಡುವುದು ನಂತರ ದೇವರ ಸಮ್ಮುಖದಲ್ಲಿ ವಾದ್ಯ ಬಾರಿಸುವುದು. ರಾತ್ರಿ 10.00 ಗಂಟೆಗೆ ಡೊಳ್ಳಿನ ಪದ ಗಾಯನ, ಮರುದಿನ ನಸುಕಿನ ಜಾವ 05. 00 ಗಂಟೆಗೆ ಬೀರದೇವರ ಗದ್ದುಗೆಗೆ ಅಭಿಷೇಕ ಕಾರ್ಯ, ತೊಟ್ಟಿಲೋತ್ಸವ, ಹೊವು ಹಾರಿಸುವುದು, ಪಲ್ಲಕ್ಕಿ ಮೆರವಣಿಗೆ, ದೇವರ ನುಡಿ, ಮಹಾಪ್ರಸಾದ ಹೀಗೆ ಹಲವಾರು ಕಾರ್ಯಕ್ರಮಗಳು ಜಾರಿಗೆ ಬರುತ್ತವೆ. ಜಾತ್ರೆ ಪ್ರಯುಕ್ತ ಜಾತ್ರಾ ಕಮಿಟಿಯಿಂದ ಸೈಕಲ್ ಶರ್ಯತ್ತು, ಕುದುರೆ ಶರ್ಯತ್ತು, ಎತ್ತಿನ ಬಂಡಿ ಶರ್ಯತ್ತು, ನಡೆಯುತ್ತವೆ. ಈ ದಿನ ರಾತ್ರಿ ಗ್ರಾಮದ ಬಯಲು ರಂಗಮಂದಿರದಲ್ಲಿ ಸಾಮಾಜಿಕ ನಾಟಕ ಪ್ರದರ್ಶನ ಆಗುತ್ತದೆ.
ದೀಪಾವಳಿ ಜಾತ್ರೆ -
ದೀಪಾವಳಿ ಜಾತ್ರೆಯು ಅತಿ ವಿಜ್ರಂಭಣೆಯಿಂದ ಜರುಗುತ್ತದೆ. ಭರಮನ ಹಬ್ಬದ ದಿನದಂದು ದೇವರು ಗ್ರಾಮದ ಹೊರ ವಲಯದ ಬ್ರಹ್ಮ ದೇವರ ಗಿಡಕ್ಕೆ ಬೇಟಿ ನೀಡುತ್ತದೆ. ನಂತರ ಚತುರ್ದೇಶಿ ದಿನ, ಅಮಾವಾಸ್ಯೆ, ಪಾಡ್ಯ ದಂದು ಬೀರದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ನಂತರ ಮರುದಿನ ದೇವರ ಪಲ್ಲಕ್ಕಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಅಂಬಲಿ ನೈವೇದ್ಯ ಪಡೆಯುತ್ತಾ ಸಾಗುತ್ತದೆ ಹೀಗೆ ಮೂರು ದಿನಗಳ ಕಾಲ ಗ್ರಾಮದ ಎಲ್ಲ ಮನೆಗಳಿಗೆ ಸುತ್ತಿ ನೈವೇದ್ಯ ಪಡೆಯುತ್ತಾನೆ. ಗ್ರಾಮಸ್ಥರು ಬೆಳೆದ ಕಬ್ಬಿನ ಬೆಳೆಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಒಯ್ಯಲಾಗುತ್ತದೆ. ಗ್ರಾಮಸ್ಥರಿಂದ ಬಯಲು ರಂಗಮಂದಿರದಲ್ಲಿ ಸಾಮಾಜಿಕ ನಾಟಕ, ಪಾರಿಜಾತ, ಶಾಹಿರಗಾನ, ಡೊಳ್ಳು ಕುಣಿತ, ಡೊಳ್ಳಿನ ಪದಗಳು ಜರಗುತ್ತವೆ. ಭಕ್ತರು ಅಂಬಲಿ ಕೊಡಗಳ ಮೂಲಕ ದೀಡ ನಮಸ್ಕಾರ ಹಾಕುತ್ತಾರೆ. ಜಾತ್ರೆಯ ದಿನದಂದು ದೇವರು ದೇವಸ್ಥಾನ ಸೇರುತ್ತದೆ, ದೇವನುಡಿ, ಮಹಾಪ್ರಸಾದ ಸೇವೆ, ಬೃಹತ್ ಕುಸ್ತಿ ಪಂದ್ಯಾವಳಿ ಹೀಗೆ ಹಲವಾರು ಚಟುವಟಿಕೆಗಳು ಜರುಗುತ್ತವೆ.
ಕಲಾವಿದರಿಗೆ ಪ್ರೋತ್ಸಾಹ
ದೇವಸ್ಥಾನದಲ್ಲಿ ಡೊಳ್ಳು ಕುಣಿತ, ಡೊಳ್ಳಿನ ಪದಗಳು, ಭಜನಾ ಪದಗಳು, ಭಕ್ತಿಗೀತೆಗಳನ್ನೂ ಮಕ್ಕಳಿಗೆ ಕಲಿಸಿಕೊಟ್ಟು ಅವರ ಕಲೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಗ್ರಾಮದ ಪೂಜಾರಿಗಳು, ಕುರುಬ ಸಮುದಾಯದ ಮುಖಂಡರು ಮಾಡುತ್ತಾರೆ.
ಕೊನೆಯ ಮಾತು -
ದೇವರ ದೇವಸ್ಥಾನಕ್ಕೆ ಭಕ್ತರು ತನು ಮನ ಧನದಿಂದ ಭಕ್ತಿ ಸಲ್ಲಿಸಿ ದೇವರ ಏಳಿಗೆಗೆ ಕಾರಣಿಬೂತರಾಗಿದ್ದಾರೆ. ದೇವರ ದೇವಸ್ಥಾನ ಕೊಡಾ ಅತಿ ವೇಗದಿಂದ ಬೆಳವಣಿಗೆ ಹೊಂದುತ್ತಿದೆ. ಬೀರದೇವರ ಕುರಿತು ಚಿಕ್ಕ ಸಾಹಿತ್ಯ ರಚಿಸಿದ್ದಕ್ಕೆ ತುಂಬಾ ಸಂತೋಷ ಅನಿಸುತ್ತದೆ ಬೀರದೇವರ ಕಾರ್ಯಚಟುವಟಿಕೆಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅನಿಸುತ್ತದೆ. ಆದರೂ ಉತ್ತಮ ಮಾಹಿತಿ ಕಲೆ ಹಾಕುವ ಯತ್ನ ಮಾಡಿದ್ದೇನೆ . ಆ ಬೀರದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಮಳೆ ಬೆಳೆ ಉತ್ತಮ ಆಗಲಿ ಅನ್ನೋದೇ ನನ್ನ ಆಶಯ. ಧನ್ಯವಾದಗಳು
ಭೈರಪ್ಪ ಹಾಲಪ್ಪಗೋಳ ಕರಗಾಂವ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು ಚಿನ್ನದ ಪದಕ ವಿಜೇತರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ