ಕರಗಾಂವದ ಜಡಿಸಿಧ್ಧಾಶ್ರಮ ಮಠದ ಪರಿಚಯ ಮತ್ತು ಹಿನ್ನೆಲೆ-
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕರಗಾಂವ ಗ್ರಾಮದ ಜಡಿಸಿದ್ದಾಶ್ರಮ ಮಠ ಪವಾಡಗಳಿಗೆ ಪ್ರಸಿದ್ಧವಾದ ಮಠ . ಕರಗಾಂವದ ಜಡಿಸಿದ್ದಾಶ್ರಮ ಹಲವಾರು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಪ್ರಸಿದ್ಧ. ಕರಗಾಂವ ಗ್ರಾಮದ ಪ್ರಮುಖ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸೇವಾ ಕೇಂದ್ರ ಇದಾಗಿದೆ. ಈ ಮಠವು 1954 ರಲ್ಲಿ ಸ್ಥಾಪನೆಯಾಗಿದೆ ಇದಕ್ಕಿಂತ ಮೊದಲು ಕರಗಾಂವದಲ್ಲಿ ಜಡಿಸಿದ್ದೇಶ್ವರರ ಆರಾಧನೆ ನಡೆಯುತ್ತಿತ್ತು. ಈಗೀನ ಮಠದ ಸ್ಥಳದಲ್ಲಿ ಮೊದಲು ಚಿಕ್ಕದಾದ ಅಗ್ನಿಕುಂಡ ಮಾತ್ರ ವಿತ್ತು ಎಲ್ಲರೂ ಇದಕ್ಕೆ ನಮಸ್ಕರಿಸಿ ಹೋಗುತ್ತಿದ್ದರು. ಆಗ ಕಿರಿದಾದ ಜಾಗದಲ್ಲಿ ಪಡುಗಳ್ಳಿಗಳ ಮದ್ಯೆ ಈ ಅಗ್ನಿಕುಂಡ ಇತ್ತು ನಂತರ 1954 ರ ಹೊತ್ತಿಗೆ ಹ ಮಠದ ಈಗೀನ ಕಟ್ಟಡ ಕಟ್ಟಲು ಆರಂಭಿಸಿದರು . ಆಗ ಅದರ ಪ್ರಮುಖ ಶಿಲ್ಪಗಳೆಂದರೆ ಕರಿಂಸಾಬ್ ನದಾಫ್ ಅವರೊಂದಿಗೆ ವಡ್ಡರ ಸಮುದಾಯ ಹಾಗೂ ಇಡೀ ಗ್ರಾಮಸ್ಥರು ಈ ಮಠದ ಕಟ್ಟಡ ಕಟ್ಟಲು ಮುಂದೆ ಬಂದರು. ಮಠಕ್ಕೆ ಸಾಟಾ ಮಾಡಲು ಅಂಕಲಿ ಬಡಿಗರು ಕಾರ್ಯ ನಿರ್ವಹಿಸಿದ್ದರ. ಈ ಮಠವನ್ನು ಸ್ವತಃ ಶಂಕರಾನಂದ ಪರಮಹಂಸರು ನೇತೃತ್ವ ವಹಿಸಿ ಕಟ್ಟಿಸಿದ್ದು, ಅವರು ಮೇಲಿಂದ ಮೇಲೆ ಕರಗಾಂವ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು.
ಮಠದ ಪ್ರಾರಂಬಿಕ ಪ್ರಮುಖ ಉಸ್ತುವಾರಿಗಳು -
ಶ್ರೀ ಡಿ ಟಿ ಪಾಟೀಲ ಕರಗಾಂವ, ಎಸ್ ಆರ್ ಪಾಟೀಲ, ಬಾಪುಗೌಡ ಕಲಗೌಡ ಪಾಟೀಲ್, ಹರಿಬಲವಂತ ಕುಲಕರ್ಣಿ, ಅಪ್ಪಣ್ಣ ಕುಲಕರ್ಣಿ ಡೋಣವಾಡ, ಸಿದಗೌಡಾ ಗುರುಸಿದ್ದಗೌಡ ಪಾಟೀಲ, ಸಂತ ಮಹಾರಾಜ ಮಲ್ಲಪ್ಪ ಕೊಟ್ರೆ, ಬಾಬಾಜಿ ಸನದಿ, ಸಿದ್ದಪ್ಪ ಧರೆಪ್ಪಾ ಉಪ್ಪಾರ (ಹಾಲಪ್ಪಗೋಳ), ರಾವಸಾಹೇಬ ಖೋತ, ಗಣಪತಿ ಘೋರ್ಪಡೆ, ಚನ್ನಮಲ್ಲ ಕಮತೆ, ಅಪ್ಪಣ್ಣ ಬಡಿಗೇರ, ಬೀಮು ಬಡಿಗೇರ, ಬಸಪ್ಪ ಅಮ್ಮೀನಬಾಂವಿ ಪ್ರಮುಖರು. ಅಂದಿನಿಂದ ಇಂದಿನವರೆಗೆ ಹಲವಾರು ಮುಖಂಡರು, ಸಂತರು ಗ್ರಾಮಸ್ಥರು ದುಡಿಯುತ್ತಿದ್ದಾರೆ.
ಪವಾಡಗಳಿಗೆ ಪ್ರಸಿದ್ಧವಾಗಿದೆ ಈ ಜಡಿಸಿದ್ದಾಶ್ರಮ ಮಠ
ಮೊದಲಿನಿಂದಲೂ ಆಧ್ಯಾತ್ಮಿಕ, ಧಾರ್ಮಿಕ, ಸೇವಾ ಕಾರ್ಯಗಳಿಗೆ ಈ ಕರಗಾಂವದ ಜಡಿಸಿದ್ದಾಶ್ರಮ ಹೆಸರುವಾಸಿ. ಇಲ್ಲಿ ಹಲವಾರು ಪವಾಡಗು ನಡೆದು ಹೋಗಿವೆ. ಅವು ಸಾಕುಪ್ರಾಣಿಗಳಿಗೆ ಹಾವು ಕಚ್ಚುವುದು, ಜನರಿಗೆ ಹಾವು ಕಚ್ಚುವುದು ನಡೆದರೆ ಕರಗಾಂವ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾವು ಕಚ್ಚಿದ ವ್ಯಕ್ತಿ ಹಾಗೂ ಸಾಕುಪ್ರಾಣಿಗಳನ್ನು ತಂದು ಮಠದ ಐದು ಸುತ್ತು ಹಾಕಿ ಮಂತ್ರ, ಭಜನೆ ಮೂಲಕ ಆರಾಧನೆ ಮಾಡಿದರೆ ಹಾವಿನ ವಿಷ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಇಂತಹ ಅದೆಷ್ಟೋ ಘಟನೆಗಳಿಗೆ ಈ ಜಡಿಸಿದ್ದಾಶ್ರಮ ಹೆಸರುವಾಸಿಯಾಗಿದೆ. ಹಾವು, ಚೇಳು ಸೇರಿ ವಿಷಜಂತುಗಳು ಕಡಿದರೂ ಈ ಭಾಗದ ಜನ ಈ ಮಠಕ್ಕೆ ನಡೆದುಕೊಂಡರೆ ಎಲ್ಲವೂ ಪರಿಹಾರ ಆಗುತ್ತದೆ ಎಂಬ ನಂಬಿಕೆ ಈ ಗ್ರಾಮಸ್ಥರದ್ದು. ಹಿಂದೆ ಸ್ವಾಮೀಜಿಗಳು ಮಠದ ಮಂತ್ರದ ಕಟ್ಟೆಗೆ ಹಾವು ಸುತ್ತಿಸಿ ಮಂತ್ರ ಹಾಕಿ, ಎರಡು ಬಾವಿಗೆ ಮಂತ್ರಹಾಕಿ ಹೋಗಿದ್ದರು ಅಂದಿನಿಂದ ಇಲ್ಲಿಯವರೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಈ ಮಠದ ದೇವರಿಗೆ ಭಕ್ತಿ ಪೂರ್ವಕವಾಗಿ ನಡೆದುಕೊಳ್ಳುತ್ತಿದ್ದಾರೆ. ಮಠ ಕಟ್ಟಿಸುವ ಸಮಯದಲ್ಲಿ ಕಾರಣಾಂತರಗಳಿಂದ ಶಂಕರಾನಂದ ಶ್ರೀಗಳ ಬೆರಳು ಕತ್ತರಿಸಿತ್ತು ಆಗ ಮುಪ್ಪಾದ ಮುದುಕ ಪರಮಹಂಸ ಬಿರುದು ನಿನಗೇಕೆ ಎಂದು ಕೇಳಿದ? ಹಿರಿಯ ಮುದುಕ ಮಾತನ್ನು ಮುಂದು ವರೆಸಿ ನಿನಗೆ ಬೆರಳು ಬೇಕಾದರೆ ದೇವರಿಗೆ ಕಠಿಣ ತಪಸ್ಸಿನ ಮೂಲಕ ನಡೆದುಕೊ ಎಂದನು ಆಗ ಚಿಂತಿತರಾದ ಶಂಕರಾನಂದ ಶ್ರೀಗಳು ಕಠಿಣ ಮೂರು ತಿಂಗಳ ತಪಸ್ಸಿನ ಮೂಲಕ ತಮ್ಮ ಮೊದಲಿನ ಸ್ಥಿತಿಗೆ ತಮ್ಮ ಬೆರಳು ಚಿಗರೂಡೆದ ಘಟನೆ ಜಗತ್ತಿನಲ್ಲಿ ಒಂದು ಸಂಚಲನವನ್ನು ಮೂಡಿಸಿದ ಘಟನೆಯಾಗಿತ್ತು. ಆಗ ಇಂತಹ ಮಹಾನ್ ಪವಾಡ ದಿಂದ ಇವರಿಗೆ ಪರಮಹಂಸ ಎಂಬ ಬಿರುದು ಲಭಿಸಿತು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ -
ಜಡಿಸಿದ್ದಾಶ್ರಮ ಮಠದ ಮುಖ್ಯ ಮಠ ಜಡಿಸಿದ್ದಾಶ್ರಮ ಹುಬ್ಬಳ್ಳಿಯಲ್ಲಿ ಇದೆ. ಈ ಮಠವು ಅದ್ವೈತ ಸಿದ್ಧಾಂತದ ತತ್ವಗಳನ್ನು ಪ್ರತಿಪಾದನೆ ಮಾಡುತ್ತಾ ಬರುತ್ತಿದೆ. ಶಂಕರಾನಂದ ಪರಮಹಂಸರು ಕೊಡಾ ಈ ಮಠದ ಬೆಳವಣಿಗೆಗೆ ಪ್ರಮುಖರು . ಗ್ರಾಮದಲ್ಲಿ ಯಾವುದೇ ಜಾತಿ, ಧರ್ಮ ಬೇದ ಬಾವ ವಿಲ್ಲದೆ ಮಠಕ್ಕೆ ನಡೆದುಕೊಳ್ಳುತ್ತಾರೆ. 1960 ರ ಸಮಯದಲ್ಲಿ ಖಾತೆದಾರ ಮತ್ತು ಕುಲಕರ್ಣಿ ಕುಟುಂಬಗಳ ಮೂಲಕ ಕೃಷಿ ಶಿಬಿರ ನಡೆಸಲಾಗಿತ್ತು ಎಂದು ಗ್ರಾಮದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾದ ಬಾಬು ಕೊಟ್ರೆ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. 1993 ರವರೆಗೆ ಮಾತ್ರ ಜಡಿಸಿದ್ದೇಶ್ವರ ಮಹಾರಾಜರ ಪುಣ್ಯತಿಥಿ ಆಚರಣೆ ನಡೆಸಲಾಗುತ್ತಿತ್ತು ಕಾರಣಾಂತರಗಳಿಂದ ಈ ಪುಣ್ಯತಿಥಿ ಸಮಾರಂಭ ನಿಂತು ತದನಂತರ 1994ರಿಂದ. ಈ ಮಠದಲ್ಲಿ ವರ್ಷಕ್ಕೊಮ್ಮೆ ಇಂಚಲದ ಶ್ರೀ ಶ್ರೀ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು, ಪಿ ಜಿ ಹುಣಶ್ಯಾಳದ ಕೈವಲ್ಯಾಶ್ರಮದ ನಿಜಗುಣ ಶ್ರೀಗಳು, ಹುಕ್ಕೇರಿಯ ಹೀರೇಮಠದ ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು , ವಿಜಯಪುರದ ಶಿವಪುತ್ರಪ್ಪ ಸ್ವಾಮೀಜಿ, ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯ ಮುಕ್ತಿಮಠದ ಶ್ರೀಗಳು ಸೇರಿ ಹಲವಾರು ಆಧ್ಯಾತ್ಮಿಕ ಚಿಂತಕರನ್ನು ಒಳಗೊಂಡ ಬೃಹತ್ ಜ್ಞಾನಯಜ್ಞ ಹಾಗೂ ಸತ್ಸಂಗ ಸಮಾವೇಶ ನಡೆಸಲಾಗುತ್ತಿದೆ , ಸ್ಥಗಿತಗೊಂಡಿದ್ದ ಜಡಿಸಿದ್ದೇಶ್ವರ ಮಹಾರಾಜರ ಪುಣ್ಯತಿಥಿ ಆಚರಣೆ ಯನ್ನು 2019 ಮೇ 15 ರಂದು ಗ್ರಾಮಸ್ಥರ ಒತ್ತಾಯದ ಮೇರೆಗೆ ಆಚರಿಸಲು ಆರಂಭಿಸಲಾಗಿದೆ , ಶಂಕರಾನಂದ ಪರಮಹಂಸರು ಪುಣ್ಯತಿಥಿ ಆಚರಣೆ ಯನ್ನು ಶ್ರಾವಣ ಮಾಸದಲ್ಲಿ ನೆರವೆರಿಸಲಾಗುತ್ತದೆ. ಜಡಿಸಿದ್ದೇಶ್ವರ ಮಹಾರಾಜರ ಪುಣ್ಯತಿಥಿ ಯಲ್ಲಿ ಜಡಿಸಿದ್ದೇಶ್ವರ ಮಹಾರಾಜರ ಪಲ್ಲಕ್ಕಿ ಮೆರವಣಿಗೆಯನ್ನು ಭಜನಾ ವಾದ್ಯಗಳ ಮೂಲಕ ಮನೆಮನೆಗೆ ನೈವೇದ್ಯ ಪಡೆಯುತ್ತಾ ಗ್ರಾಮದಲ್ಲಿ ಪ್ರದಕ್ಷಿಣೆ ಹಾಕುತ್ತದೆ. ಅಂಬಲಿ ಕೊಡಗಳ ಮೂಲಕ ಮಹಿಳೆಯರು ನೈವೇದ್ಯ ತರುತ್ತಾರೆ. ಹೀಗೆ ಈ ಜಡಿಸಿದ್ದಾಶ್ರಮ ಆಶ್ರಮ ಹಲವಾರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತದೆ.
ಏಕತೆಯ ಸಂಕೇತ ಮತ್ತು ಕಲಾವಿದರಿಗೆ ಪ್ರೋತ್ಸಾಹ -
ಜಡಿಸಿದ್ದೇಶ್ವರ ನಾಟ್ಯ ಸಂಘ ಕೊಡಾ ಮಠ ಸ್ಥಾಪನೆಯಾದಾಗಿನಿಂದ ಇಂದಿನವರೆಗೆ ಪ್ರತಿ ವರ್ಷ ಬೀರದೇವರ ಜಾತ್ರೆ ಸಮಯದಲ್ಲಿ ನಾಟಕ ಪ್ರದರ್ಶನ ನೀಡುತ್ತಾ ಬರುತ್ತಿದೆ. ಈ ನಾಟಕ ಕಂಪನಿು ಗ್ರಾಮಸ್ಥರಲ್ಲಿ ಕಲೆಯ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದೆ. ಈಗಲೂ ಕೂಡಾ ಗ್ರಾಮದ ಮುಖಂಡರಾದ ಡಿ ಟಿ ಪಾಟೀಲ ಕರಗಾಂವ, ಎಸ್ ಆರ್ ಪಾಟೀಲ ಕುಟುಂಬಗಳು ಉಸ್ತುವಾರಿ ಹೊಂದಿ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೆರಿಸುತ್ತಾರೆ. ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸೇರಿ ಹಲವಾರು ಧಾರ್ಮಿಕ, ಜಾತಿ ಸಮುದಾಯಗಳು ಇದ್ದರೂ ಇಲ್ಲಿ ನಾವೆಲ್ಲರೂ ಒಂದು ಎಂಬ ತತ್ವದಡಿ ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಜಗತ್ತಿಗೆ ಒಂದಾಗಿ ಬಾಳಿರಿ ವಿಶ್ವ ಶಾಂತಿ ನೆಲೆಸಿರಿ ಎಂಬ ತತ್ವವನ್ನು ಈ ಕರಗಾಂವದ ಜಡಿಸಿದ್ದಾಶ್ರಮ ಸಾರುತ್ತಾ ಬರುತ್ತಿದೆ.
"ಒಂದಾಗಿ ಬಾಳಿರಿ ವಿಶ್ವ ಶಾಂತಿ ನೆಲೆಸಿರಿ "
ಭೈರಪ್ಪ ಹಾಲಪ್ಪಗೋಳ ಕರಗಾಂವ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು
ಚಿನ್ನದ ಪದಕ ವಿಜೇತರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ಬೆಳಗಾವಿ

ಕರಗಾಂವದ ಜಡಿಸಿಧ್ಧಾಶ್ರಮ ಪವಾಡಗಳಿಗೆ ಪ್ರಸಿದ್ಧ
ReplyDeleteಜಡಿಸಿಧ್ಧಾಶ್ರಮ ಶಾಖಾ ಮಠ ಕರಗಾಂವ
ReplyDeleteನಮ್ಮ ಹೆಮ್ಮೆ
ReplyDeleteಜೈ ಜಡಿಸಿದ್ದೇಶ್ವರ ಮಹಾರಾಜ
ReplyDeleteಕರಗಾಂವದ ಖ್ಯಾತಿ ಜಡಿಸಿದ್ದಾಶ್ರಮ ಮಠ
ReplyDelete