ಈ ಭಾರಿಯಾದರು ಈಡೇರುತ್ತಾ ಚಿಕ್ಕೋಡಿ ದಕ್ಷಿಣ ಹಳ್ಳಿಗಳ ನೀರಾವರಿ ಕನಸ್ಸು?
ರಾಜಕಾರಣಿಗಳ ಮೊಂಡಾಟಕ್ಕೆ ಈಡೇರದ ಅಭಿವೃದ್ಧಿ ||ಬರಗಾಲ, ಬಡತನದಲ್ಲಿಯೇ ಆಯುಷ್ಯ ಕಳೆಯುತ್ತಿರುವ ಜನ
ಚಿಕ್ಕೋಡಿ - ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ದಕ್ಷಿಣ ಹಳ್ಳಿಗಳ ಬಗ್ಗೆ ಯಾರಿಗಾದರೂ ಕೇಳಿದರೆ ಥಟ್ಟನೆ ಅವರ ಬಾಯಿಂದ ಕೇಳಿ ಬರುವುದು ಮಡ್ಡಿ ಪ್ರದೇಶ, ಮಡ್ಡಿ ಜನ, ಒನ ಮಡ್ಡಿ ಎಂಬುದು ಸಾಮಾನ್ಯ ಪದ. ಆದರೆ ಈ ಮಡ್ಡಿ ಪ್ರದೇಶ, ಮಡ್ಡಿ ಜನ, ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ತೆಗೆದುಹಾಕಲು ಇಲ್ಲಿಯವರೆಗೆ ಸ್ವಾತಂತ್ರ್ಯ ದೊರೆತು 7 ದಶಕಗಳೇ ಕಳೆದರೂ ಅಂತಹ ಯಾವೊಬ್ಬ ನಾಯಕ, ರಾಜಕೀಯ ಪಕ್ಷ ಮುಂದೆ ಬಂದಿಲ್ಲ. ಚಿಕ್ಕೋಡಿ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಕರೋಶಿ ಮತ್ತು ನಾಗರಮುನ್ನೊಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಬರುತ್ತದೆ.ಇವೆಲ್ಲ ನಾಗರಮುನ್ನೊಳಿ ಹೋಬಳಿ ವ್ಯಾಪ್ತಿಗೆ ಬರುತ್ತವೆ. ಪ್ರಮುಖವಾಗಿ ಈ ಪ್ರದೇಶದಲ್ಲಿ ಕರಗಾಂವ ಏತನೀರಾವರಿ ಹಾಗೂ ಮಹಾಲಕ್ಷ್ಮಿ ಏತನೀರಾವರಿ ಯೋಜನೆಗಳು ಪ್ರಮುಖ ಯೋಜನೆಗಳು. ಇದರ ವ್ಯಾಪ್ತಿಗೆ ಕರಗಾಂವ ಡೋಣವಾಡ, ಹಂಚಿನಾಳ ಕೆಕೆ, ನಾಗರಮುನ್ನೋಳ್ಳಿ, ಉಮರಾಣಿ, ಇಟ್ನಾಳ, ಕಮತೇನಟ್ಟಿ, ಬೆಣ್ಣಿಹಳ್ಳಿ, ಬಂಬಲವಾಡ, ಕುಂಗಟೋಳಿ , ಕರೋಶಿ, ಜೈನಾಪುರ, ಮುಗಳಿ, ಮಜಲಟ್ಟಿ ಕಜಗೌಡನಟ್ಟಿ, ವಡ್ರಾಳ, ತೋರನಹಳ್ಳಿ ಮಾಂಗನೂರ, ಬಿದರೊಳ್ಳಿ ಸೇರಿ ಹಲವಾರು ಹಳ್ಳಿಗಳು ಬರುತ್ತವೆ. ಇಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ, ದನಕರುಗಳಿಗೆ ಮೇವು ಸಿಗುತ್ತಿಲ್ಲ,ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಇದೇ ಸ್ಥಿತಿ.
ಸನಿಹದಲ್ಲೆ 3-4 ನದಿಗಳಿದ್ದರೂ ಹನಿ ನೀರಿಗೂ ಹಾಹಾಕಾರ
ಕೇವಲ 12 ಕೀ. ಮಿ ದೂರದಲ್ಲಿ ಹಿರಣ್ಯಕೇಶಿ ನದಿ, 15 ಕೀ. ಮೀ ಅಂತರದಲ್ಲಿ ಘಟಪ್ರಭಾ ನದಿ, 20 ಕಿ. ಮೀ ಅಂತರದಲ್ಲಿ ಕೃಷ್ಣಾನದಿ ಮತ್ತು ಅದರ ಉಪನದಿಗಳು ಹರಿಯುತ್ತವೆ. ಕೊಟಬಾಗಿ ಏತನೀರಾವರಿ ಯೋಜನೆ ಈ ಹಳ್ಳಿಗಳ ಪಕ್ಕದಲ್ಲಿಯೇ ಇದೆ. ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆ 150 ಕೀ ಮಿ ದೂರದ ಜಮಖಂಡಿ, ಮುಧೋಳ ಬೀಳಗಿ, ರಾಯಭಾಗ, ಗೋಕಾಕ ತಾಲ್ಲೂಕಿನ ಪ್ರದೇಶಗಳು ನೀರಾವರಿಗೆ ಒಳಪಟ್ಟಿದೆ ಆದರೆ ಸಮೀಪದಲ್ಲಿಯೇ ಇರುವ ಈ ಹಳ್ಳಿಗಳಿಗೆ ನೀರು ಭಾಗ್ಯ ಬಂದಿಲ್ಲ.
ರಾಜಕೀಯ ಮೊಂಡಾಟವೇ ಮೇಲು?
ಈ ಭಾಗದ ಹಳ್ಳಿಗಳು ಚಿಕ್ಕೋಡಿ ಪಟ್ಟಣಕ್ಕೆ ಕೇವಲ 1,2 ಕೀ ಮಿ ಅಂತರದಲ್ಲಿ ಇದ್ದರೂ ಹತ್ತು ವರ್ಷಗಳ ಹಿಂದೆ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದವು, ಇಂದೂ ದೂರದ ರಾಯಭಾಗ ವಿಧಾನ ಸಭಾ ಕ್ಷೇತ್ರದಲ್ಲಿ ಈ ಭಾಗದ ಹಳ್ಳಿಗಳು ವಿಲೀನವಾಗಿವೆ. ಅಂದಿನಿಂದ ಇಂದಿನವರೆಗೆ ಈ ಭಾಗದ ಹಳ್ಳಿಗಳನ್ನು ಎಲ್ಲಾ ರಾಜಕೀಯ ನಾಯಕರು ನಿರ್ಲಕ್ಷ್ಯದಿಂದ ನೋಡುತ್ತಿದ್ದಾರೆ. ಈ ಭಾಗದ ಪ್ರಭಾವಿ ವ್ಯಕ್ತಿಗಳನ್ನು ಮನ್ನಿಸಲು ಕ್ಷೇತ್ರವನ್ನು ಪರಿಶಿಷ್ಟ ಜಾತಿ ಮೀಸಲು ನೀಡುತ್ತಿದ್ದಾರೆ.
ಇಲ್ಲಿ ಬರೀ ಭರವಸೆಗಳ ಮಹಾಪೂರ, ಸುಳ್ಳು ಆಶ್ವಾಸನೆಗಳೆ ಎಲ್ಲಾ -
ಈ ಭಾಗದಲ್ಲಿ ನಾಯಕರಲ್ಲಿ ಒಗ್ಗಟ್ಟು ಇಲ್ಲದಿರುವುದು ಈ ಅಭಿವೃದ್ಧಿಗೆ ಕಾರಣ ಎಂಬುದು ಗೊತ್ತಾಗುತ್ತದೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು ಚುನಾವಣೆಲಿ ಆರಿಸಿ ಬರುತ್ತಾರೆ ಅವರಿಗೆ ನೀರಾವರಿ ಯೋಜನೆ, ಅಭಿವೃದ್ಧಿ ಯೋಜನೆ ಬಗ್ಗೆ ಒಂದಿಷ್ಟು ಕೂಡಾ ಮಾಹಿತಿ ಇಲ್ಲ ಇವರೆಲ್ಲರೂ ಕೇವಲ ಹೆಸರಿಗಷ್ಟೆ ಜನಪ್ರತಿನಿಧಿಗಳು ಆಗಿದ್ದಾರೆ. ಜನರ ಸಮಸ್ಯೆಗಳಿಗೆ ಒಂದು ಬಾರಿಯೂ ಸ್ಪಂದಿಸಿಲ್ಲ.
ಇನ್ನೂ ವಿಧಾನಸಭಾ ಸದಸ್ಯರು ಮೂರು ಭಾರಿ ಚುನಾವಣೆಯಲ್ಲಿ ಆಯ್ಕೆ ಆದರೂ ಕೂಡಾ ಒಂದು ಭಾರಿಯೂ ಅದರ ಬಗ್ಗೆ ಮಾತೆತ್ತಿಲ್ಲ. ಸಂಸದರು ದೇವರ ಮೇಲೆ ಆಣೆ ಮಾಡಿ ಮತ ಪಡೆದು ಜನರಿಗೆ ಮೋಸ ಮಾಡಿ ಹೋಗುತ್ತಾರೆ ಆದರೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒಂದು ಭಾರಿಯೂ ಶ್ರಮಿಸಿಲ್ಲ. ಹಾಗೇಯೇ ಪ್ರಸ್ತುತ ಸಂಸದರು ಕೂಡಾ ನೀರಾವರಿ ವಿಷಯದ ಮೇಲೆ ಚುನಾವಣೆಯಲ್ಲಿ ಗೆದ್ದುಬಂದಿದ್ದು ಎಂದಿನಂತೆ ಇವರು ಕೂಡ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಾರೆ ಎಂಬುದು ಜನರ ನಂಬಿಕೆಯಾಗಿದೆ. ಇದನ್ನೇಲ್ಲ ಮೀರಿ ಸಂಸದರು ಬರದ ನಾಡಿನ ಭಗೀರಥರಾಗುವವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ಜನರ ವಲಸೆ ನಿರಂತರ -
ಚಿಕ್ಕೋಡಿ ದಕ್ಷಿಣ ಹಳ್ಳಿಗಳ ಜನರು ಕುಡಿಯಲು ನೀರು, ಆಹಾರ, ದನಕರುಗಳಿಗೆ ಮೇವಿಲ್ಲದೆ ಇದ್ದ ದನಕರುಗಳನ್ನು ಕಟುಕರಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ, ಇದ್ದ ಅಲ್ಪ ಸ್ವಲ್ಪ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡಲು ಬಡತನ, ನೀರು ತುಂಬಲು ಕೂಡಾ ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಲಹರಣ ಮಾಡುವ ಪರಿಸ್ಥಿತಿ ಇದ್ದರೂ ಒಂದು ಕೊಡ ನೀರು ಸಿಗುತ್ತಿಲ್ಲ.ಹೀಗಾಗಿ ಜನ ಬೆಂಗಳೂರು, ಗೋವಾ, ಮಹಾರಾಷ್ಟ್ರ ದತ್ತ ವಲಸೆ ಹೋಗುತ್ತಿದ್ದಾರೆ. ಕೆಲವರು ನೀರಾವರಿ ಪ್ರದೇಶಕ್ಕೆ ಗುಳೆ ಹೋಗುತ್ತಿದ್ದಾರೆ.
ಮಕ್ಕಳಿಗೆ ಮದುವೆ ಭಾಗ್ಯ ಸಿಗುತ್ತಿಲ್ಲ -
ಈ ಮಡ್ಡಿ ಭಾಗದ ಗಂಡು ಮಕ್ಕಳಿಗೆ, ಬರಗಾಲ, ಬಡತನ, ಕಾರಣದಿಂದ ಮಡ್ಡಿ ಭಾಗ ಎನ್ನುವ ಕಾರಣಕ್ಕೆ ವೈವಾಹಿಕ ಸಂಬಂಧ ಕೂಡಿ ಬರುತ್ತಿಲ್ಲ. ಎಲ್ಲ ತಂದೆ ತಾಯಿಯರ ಕೊರಗು ಒಂದೆ ಅದೇ ಮಕ್ಕಳಿಗೆ ಮದುವೆ ಆಗ್ತಿಲ್ಲ ಎನ್ನುವುದು.
ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ, ನಿರುದ್ಯೋಗವೇ ಎಲ್ಲಾ?
ಈ ಭಾಗದಲ್ಲಿ ಎಲ್ಲಾ ಮಕ್ಕಳಿಗೆ ಪ್ರೌಢಶಾಲೆಯೇ ಕೊನೆಯ ಶಿಕ್ಷಣ, ಕೆಲವು ಗ್ರಾಮಗಳಲ್ಲಿ ಪ್ರೌಡಶಿಕ್ಷಣ ಕೊಡಾ ಮರಿಚೀಕೆ ಎನ್ನುವಂತಿದೆ ಇನ್ನೂ ಪದವಿ, ಸ್ನಾತಕೋತ್ತರ ಶಿಕ್ಷಣ ವಂತೂ ಕನಸಿನ ಮಾತು ಯಾವುದೇ ಸರ್ಕಾರಿ, ಖಾಸಗಿ ಪದವಿ ಕಾಲೇಜುಗಳು ಈ ಭಾಗದಲ್ಲಿ ಇಲ್ಲ.
ಹಲವು ಭಾರಿ ಮನವಿ, ಪ್ರತಿಭಟನೆ ನಡೆದರೂ ಕೇಳದ ಜನಪ್ರತಿನಿಧಿಗಳು, ಅಧಿಕಾರಿಗಳು -
ಈ ಭಾಗದ ಡಿ ಟಿ ಪಾಟೀಲ, ಬಿ ಆರ್ ಸಂಗಪ್ಪ ಗೋಳ, ರೈತ ಸಂಘದ ಮುಖಂಡರು, ರಾಜಕೀಯ ನಾಯಕರು ಈ ಭಾಗದ ಹಲವಾರು ನಾಯಕರು ದಶಕಗಳಿಂದ ಹೋರಾಟ ತೀವ್ರ ಸ್ವರೂಪ ನಡೆದರೂ ಯಾವುದೇ ರಾಜಕೀಯ ಪಕ್ಷಗಳು, ನಾಯಕರು, ಅಧಿಕಾರಿಗಳು ಈ ನೀರಾವರಿ ಬೇಡಿಕೆಗೆ ಸ್ಪಂದಿಸಿಲ್ಲ.
ಈ ಭಾಗದಲ್ಲಿ ಸಂಘಟಿತ ಹೋರಾಟ ಇರದಿರುವ ಕಾರಣ ಅಷ್ಟೊಂದು ಯಶಸ್ಸು ದೊರೆತಿಲ್ಲ . ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳು ನೀರಾವರಿ ಮಾಡಿಸಿಯೇ ತೀರುತ್ತೇವೆ ಎಂದು ಹೇಳುತ್ತಾರೆ. ಆದ್ರೇ ಅಂತಹ ಇಲ್ಲಿಯವರೆಗೆ ಎಷ್ಟು ಚುನಾವಣೆಗಳಾದವೋ ಆದರೆ ನೀರು ಮಾತ್ರ ಬರುತ್ತಿಲ್ಲ. ಚುನಾವಣೆ ಭಹಿಷ್ಕಾರದ ಮಾತು ಕೇಳಿ ಬಂದರೂ ಮುಖಂಡರು ಚುನಾವಣೆ ಭಹಿಷ್ಕಾರಕ್ಕೆ ಮುಂದಾಗುತ್ತಿಲ್ಲ.
ಬೇಡಿಕೆ ಹಲವು ಈಡೇರಿಕೆ ಮಾತ್ರ ಶೂನ್ಯ
ಪ್ರತ್ಯೇಕ ವಿಧಾನ ಸಭಾ ಕ್ಷೇತ್ರ ರಚಿಸಿ ಚಿಕ್ಕೋಡಿ ದಕ್ಷಿಣ ಹಳ್ಳಿಗಳು ಮತ್ತು ಚಿಕ್ಕೋಡಿ ಪಟ್ಟಣ ಸೇರಿ ಒಂದು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚಿಸಬೇಕು. ಇಗೀರುವ ಚಿಕ್ಕೋಡಿ ಸದಲಗಾ ವಿಧಾನಸಭಾ ಕ್ಷೇತ್ರವನ್ನು ಚಿಕ್ಕೋಡಿಯಿಂದ ಪ್ರತ್ಯೇಕಿಸಬೇಕು, ಕೇವಲ ರಾಯಭಾಗ ತಾಲ್ಲೂಕಿನ ಹಳ್ಳಿಗಳನ್ನು ಸೇರಿಸಿ ರಾಯಬಾಗ ವಿಧಾನಸಭಾ ಕ್ಷೇತ್ರ ರಚಿಸಬೇಕು ಎಂಬುದು ಈ ಭಾಗದ ಜನರ ಬೇಡಿಕೆ ಆಗಿದೆ.
ಹಾಗೆಯೇ ಈ ಭಾಗದ ಜನ ಉದ್ಯೋಗಕ್ಕಾಗಿ ಬೃಹತ್ ಸಾರ್ವಜನಿಕ ಉದ್ದಿಮೆಯ ನಿರೀಕ್ಷೆಯಲ್ಲಿದ್ದಾರೆ., ಕರೋಶಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹಳ್ಳಿಗಳನ್ನು ಸೇರಿಸಿ ಕರೋಶಿ ಹೋಬಳಿ ರಚಿಸಿ ಎಂಬ ಬೇಡಿಕೆ ಕೂಡಾ ಇದೇ. ಕರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಈ ಭಾಗದ ಜನರ ಬೇಡಿಕೆ ಆಗಿದೆ.
ಇನ್ನಾದರೂ ಈಡೇರುತ್ತಾ ನೀರಾವರಿ ಕನಸು? ಯಾರಾಗ್ತಾರೆ ಬರದ ನಾಡಿನ ಭಗೀರಥ? ಇನ್ನಾದರೂ ಸ್ಪಂದಿಸುತ್ತಾರಾ ಸರ್ಕಾರ?
ಚಿಕ್ಕೋಡಿ ದಕ್ಷಿಣ ಹಳ್ಳಿಗಳ ಜನರನ್ನು ಕೇವಲ ಮತಗಳಿಗೆ ಮಾತ್ರ ಉಪಯೋಗಿಸಿ ಅವರಿಗೆ ಎಲ್ಲ ರಾಜಕೀಯ ವ್ಯಕ್ತಿಗಳು ಮೋಸಮಾಡುತ್ತಾ ಬಂದಿದ್ದು ಇನ್ನಾದರೂ ರಾಜ್ಯ, ಕೇಂದ್ರ ಸರ್ಕಾರಗಳು, ರಾಜಕೀಯ ನಾಯಕರು ಸ್ಪಂದಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ, ರಾಜಕೀಯ, ಸ್ವಾರ್ಥತೆ ಮರೆತು ಜನಪ್ರತಿನಿಧಿಗಳು, ಸರ್ಕಾರ ಮಾನವೀಯ ದೃಷ್ಟಿಯಿಂದ ನೀರುತಂದು ಪುಣ್ಯಕಟ್ಟಿಕೊಳ್ಳಲಿ ಎನ್ನುವುದು ಈ ಭಾಗದ ಜನರ ಆಶಯವಾಗಿದೆ. ಜನರಲ್ಲಿ ಜಾಗೃತಿ, ಒಗ್ಗಟ್ಟು, ರಾಜಕೀಯ ರಹಿತ ಬೆಂಬಲದ ಅವಶ್ಯಕತೆ ಇದೆ.
author
Bhairappa Halappagol karagaon

ಕರಗಾಂವ ಹಾಗೂ ಮಹಾಲಕ್ಷ್ಮಿ ಏತ ನೀರಾವರಿ ಅನುಷ್ಠಾನ ಯಾವಾಗ?
ReplyDeleteಈ ಭಾರಿಯಾದರೂ ಈಡೇರುತ್ತಾ ಕರಗಾಂವ ಏತ ನೀರಾವರಿ ಯೋಜನೆ ಅನುಷ್ಠಾನ
ReplyDeleteKaragaon lift irrigation
ReplyDeleteChikkodi south area Dry land of chikkodi taluka
ReplyDeleteಬರದ ನಾಡಿಗೆ ಯಾರಾಗ್ತಾರೆ ಭಗೀರಥ
ReplyDeleteಬರದ ನಾಡಿದ್ದರೂ ಈ ಭಾಗ ಚಿನ್ನದ ಬೆಳೆ ಬೆಳೆಯುತ್ತದೆ
ReplyDelete