ಸಮಾಜ ಕಾರ್ಯ ಬೆಳವಣಿಗೆಗೆ ಸಮಗ್ರ ಸಲಹೆಗಳು -
ರಚನೆ - ಭೈರಪ್ಪ ಹಾಲಪ್ಪಗೋಳ. ಚಿಕ್ಕೋಡಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
ಪೀಠಿಕೆ
ಸಮಾಜ ಕಾರ್ಯವು ಇತ್ತಿಚಿನ ಒಂದು ಜ್ಞಾನದ ಶಾಖೆಯಾಗಿದ್ದು , ಮೊದಮೊದಲು ಸಾಂಪ್ರದಾಯಿಕ ಸ್ವರೂಪದಲ್ಲಿ ಇದ್ದ ಸಮಾಜ ಕಾರ್ಯವು ಜಗತ್ತಿನಲ್ಲಿ ಉದ್ಭವಿಸುವ ಗಂಡಾಂತರ ಸನ್ನಿವೇಶ ನಿವಾರಣೆಗೆ ಕ್ರಮೇಣ ಸಂಘಟಿತಗೊಂಡು ವೃತ್ತಿಪರತೆಯ ಸ್ವರೂಪ ಹೊಂದುತ್ತಿದೆ. ಒಂದು ವೃತ್ತಿಯಾಗಿ ಇರಬೇಕಾದ ಎಲ್ಲಾ ಅರ್ಹತೆ ಹೋಂದಿದ್ದು . 1936 ರಲ್ಲಿ ವೃತ್ತಿಪರತೆಯ ಸ್ವರೂಪ ಪಡೆದುಕೂಂಡು ಕ್ರಮೇಣ ಶ್ರೀಮಂತಿಕೆ ಹೆಚ್ಚಿಸಿಕೂಂಡು ಜನಪ್ರಿಯ ಆಗುವಷ್ಟರಲ್ಲಿಯೆ ಸಾಮಾಜಿಕ ಸಮಸ್ಯೆಗಳ ನಿವಾರಕ ಸಮಾಜ ಕಾರ್ಯಕ್ಕೆ ಈಗ ಅಸ್ತಿತ್ವದ ಪ್ರಶ್ನೆ ಉದ್ಭವಿಸುತ್ತಿದೆ.
ಮಾನವೀಯ ಮೌಲ್ಯಗಳ ನೆಲೆಯಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಾ ಬಂದಿದ್ದ ಸಮಾಜ ಕಾರ್ಯವು 2016/17 ರವರಿಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದು ನಂತರ ಕ್ರಮೇಣ ಅಸ್ತಿತ್ವಕ್ಕೆ ಧಕ್ಕೆ ಉಂಟು ಎಂಬಂತೆ ಕಂಡು ಬಂದಿದೆ. ಹೀಗಾಗಿ ಸಮಾಜ ಕಾರ್ಯ ಬೆಳವಣಿಗೆ ಎಲ್ಲ ಸಮಾಜ ಕಾರ್ಯ ವಿದ್ಯಾರ್ಥಿಗಳು, ವೃತ್ತಿಪರರ, ಉಪನ್ಯಾಸಕರ ಕೂಗು ಸರ್ಕಾರದ ವರೆಗೆ ಯಾವಾಗ ಮುಟ್ಟುವುದೋ ಆಗ ಸಮಾಜ ಕಾರ್ಯ ಶಿಕ್ಷಣದ ಅವಧಿಯನ್ನು ಸುವರ್ಣ ಕಾಲ ಎನ್ನಲು ಸಾಧ್ಯ.
ಸಮಾಜ ಕಾರ್ಯ ಬೆಳವಣಿಗೆ ಕುರಿತು ನನಗೆ ತಿಳಿದ ಹಾಗೆ ಕೆಲವು ಸಮಗ್ರ ಸಲಹೆಗಳನ್ನು ನೀಡಲು ಇಚ್ಛಿಸುತ್ತೇನೆ. ಇವುಗಳ ಅನುಷ್ಠಾನಕ್ಕೆ ಸ್ವಾರ್ಥ ಭಾವನೆ ಮರೆತು ಎಲ್ಲರೂ ಶ್ರಮಿಸಬೇಕು. ಆಗ ಸಮಾಜ ಕಾರ್ಯದ ಶ್ರೀಮಂತಿಕೆ ಕಾಣಲು ಸಾಧ್ಯ. ಈ ವಿಷಯಗಳನ್ನು ನನಗೆ ತಿಳಿದ ಮಟ್ಟಿಗೆ ಪ್ರಕಟಿಸಿದ್ದೆನೆ. ಏನಾದರೂ ತಪ್ಪು ಇದ್ದರೆ ಕ್ಷಮಿಸಿ. ಸಮಾಜ ಕಾರ್ಯ ಬೆಳವಣಿಗೆಗೆ ಸಮಗ್ರ ಸಲಹೆಗಳು ಈ ಕೆಳಕಂಡಂತಿವೆ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
*ಸಲಹೆಗಳು
1)ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಮಾಜ ವಿಜ್ಞಾನ ಪಠ್ಯದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ಪಾಠಗಳಂತೆ ಸಮಾಜಕಾರ್ಯದ ಪಠ್ಯಗಳನ್ನು ಸೇರಿಸಿ ವಿದ್ಯಾರ್ಥಿಗಳಿಗೆ ಸಮಾಜ ಕಾರ್ಯ ವಿಷಯದ ಪರಿಚಯ ಮಾಡಿಕೊಡಬೇಕು. ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣದಲ್ಲಿ ಕ್ಷೇತ್ರ ಕಾರ್ಯ ಅಳವಡಿಸಬೇಕು.
2)ಕನಿಷ್ಠ 1-2 ಪಾಠಗಳನ್ನು ಅಳವಡಿಸಬೇಕು. 01-05ನೇ ತರಗತಿವರಿಗೆ ಮಾನವೀಯ ಮೌಲ್ಯಗಳನ್ನು ಬೋದಿಸುವುದು. ಹಾಗೂ 06 ರಿಂದ 10 ತರಗತಿವರಿಗೆ ಸಮಾಜ ಕಾರ್ಯ ಪರಿಕಲ್ಪನೆ, ಪರಿಚಯ ಹಾಗೂ ವಿಶೇಷಿಕರಣಕ್ಕೆ ಸಂಬಂಧಿಸಿದ ಪಠ್ಯ ಗಳನ್ನು ಸೇರಿಸುವುದು.
3)ಈ ಪಠ್ಯಗಳನ್ನು ಬೋದಿಸಲು ಸಮಾಜ ಕಾರ್ಯ ಶಿಕ್ಷಕರನ್ನು ನೇಮಿಸಿಕೂಳ್ಳಬೇಕು. ಹಾಗೂ ಈ ಶಿಕ್ಷಕರು ಶಾಲಾ ಸಮಾಜ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಬೇಕು.
4)ಸಮಾಜ ಕಾರ್ಯ ಶಿಕ್ಷಕರು ಸಮಾಜ ಕಾರ್ಯ ಪಠ್ಯ ಬೋದಿಸುವುದಲ್ಲದೆ. ಹೆಚ್ಚಾಗಿ ಸಮಾಜ ಕಾರ್ಯಕರ್ತನ ಪಾತ್ರಗಳನ್ನು ನಿರ್ವಹಿಸಬೇಕು.
5) 01-07 ಒಬ್ಬರು, 08-10 ರವರಿಗೆ ಒಬ್ಬರ ಸಮಾಜ ಕಾರ್ಯಕರ್ತರ ನೇಮಕವಾಗಬೇಕು ಹಾಗೂ ಸಮಾಜ ಕಾರ್ಯಕರ್ತನ ಪಾತ್ರಗಳ ಮಹತ್ವದ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪಿಸಬೇಕು.
ಶಾಲಾ ಸಮಾಜ ಕಾರ್ಯಕರ್ತನ /ಸಮಾಜ ಕಾರ್ಯ ಶಿಕ್ಷಕರ ಮಹತ್ವ
1)ವಿದ್ಯಾರ್ಥಿಗಳಲ್ಲಿ ಮಾನಸಿಕ ಬೆಂಬಲ ಒದಗಿಸಲು ಸಹಾಯಕ
2)ವಿದ್ಯಾರ್ಥಿಗಳಿಗೆ ವಯಕ್ತಿಕ ಕಾಳಜಿ ವಹಿಸಿ ಶಾಲೆ ಬಗ್ಗೆ ಉತ್ತಮ ಭಾವನೆ ಬರುವಂತೆ ಮಾಡಲು ಅವಕಾಶ.
3)ವಿದ್ಯಾರ್ಥಿಗಳ ಗೈರು ಹಾಜರಾತಿ ಕಡಿಮೆ ಮಾಡಬಹುದು
4)ವಿದ್ಯಾರ್ಥಿ, ಶಿಕ್ಷಕರು, ಪಾಲಕರಲ್ಲಿ ಹೊಂದಾಣಿಕೆ ಮೂಡಿಸಿ ಆರೋಗ್ಯಕರ ಶಾಲಾ ವಾತಾವರಣ ನಿರ್ಮಿಸಬಹುದು.
5)ಸಮುದಾಯದತ್ತ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಕಲಿಕಾ ಆಸಕ್ತಿ ಹೆಚ್ಚಿಸಬಹುದು.
6)ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ, ನೈತಿಕ ಶಿಕ್ಷಣ, ಒದಗಿಸಿ ಬಾಲಾಪರಾಧ ತಪ್ಪಿಸಬಹುದು
7)ಒತ್ತಡ ನಿವಾರಣೆಗೆ, ಪರೀಕ್ಷಾ ಭಯ ಹೋಗಲಾಡಿಸಲು ಆಪ್ತ ಸಮಾಲೋಚನೆ, ಸಾಂತ್ವನ ಒದಗಿಸಿ ಮಕ್ಕಳಿಗೆ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿಸಬಹುದು.
8)ಕಾರ್ಯಕ್ರಮ ಆಯೋಜನೆ ಸರಳವಾಗುತ್ತದೆ
9) ವಿದ್ಯಾರ್ಥಿಗಳ ವಯಕ್ತಿಕ ಕಾಳಜಿ ವಹಿಸಿ ಸಮಸ್ಯೆ ಗುರುತಿಸಿ ಪರಿಹಾರಕ್ಕೆ ಒತ್ತುಕೊಡಲು ಸಹಾಯಕ
10) ಇತ್ಯಾದಿ
ಜವಾಬ್ದಾರಿ
* ಪಠ್ಯ ಅನುಷ್ಠಾನ ವಿಷಯದ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು, ಪಠ್ಯ ಪುಸ್ತಕ ಪರಿಶೀಲನೆ ಸಮಿತಿಯವರೊಂದಿಗೆ ಸಮಾಜಕಾರ್ಯ ಮಹಾವಿದ್ಯಾಲಯ, ವಿಭಾಗಗಳ ಮುಖ್ಯಸ್ಥರು, ಪ್ರಾಚಾರ್ಯರು ಚರ್ಚಿಸಬೇಕು.
*ಶಾಲಾ ಸಮಾಜ ಕಾರ್ಯಕರ್ತರ ನೇಮಕಕ್ಕೆ ಸಂಬಂಧಿಸಿದಂತೆ ಶಾಲಾ ಕ್ಷೇತ್ರದಲ್ಲಿ ಸಮಾಜ ಕಾರ್ಯಕರ್ತನ ಮಹತ್ವದ ಕುರಿತು ಸಂಶೋಧನೆ ನಡೆಸಿ ವರದಿಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವಾಲಕ್ಕೆ ಸಲ್ಲಿಸುವುದು.
*ಇದರ ಕುರಿತು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರು , ಪದವೀಧರ, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರೂಂದಿಗೆ ವಿದ್ಯಾರ್ಥಿಗಳು, ಮುಖ್ಯಸ್ಥರು ಚರ್ಚಿಸಬೇಕು.
ಅರ್ಹತೆ -
01-07- ಬಿ ಎಸ್ ಡಬ್ಲ್ಯು , 08-10 - ಎಂ ಎಸ್ ಡಬ್ಲ್ಯು.
ಪಿಯುಸಿ ಶಿಕ್ಷಣ
*ಪಿಯುಸಿ ಕಲಾ ವಿಭಾಗದ ಪಠ್ಯದಲ್ಲಿ ಸಮಾಜ ಕಾರ್ಯ ವಿಷಯವನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳಲು ಅವಕಾಶ ನೀಡಬೇಕು.
* ಸಮಾಜ ಕಾರ್ಯ ವಿಷಯವನ್ನು ಪ್ರಥಮ ಪಿಯುಸಿ ಯಲ್ಲಿ ಸಮಾಜ ಕಾರ್ಯ ಪರಿಕಲ್ಪನೆ, ಬೇಸಿಕ್ ವಿಷಯದ ಬಗ್ಗೆ ಪಠ್ಯ ರೂಪಿಸಬೇಕು. ದ್ವಿತೀಯ ಪಿಯುಸಿಯಲ್ಲಿ ಕಾರ್ಯ ವ್ಯಾಪ್ತಿ, ವಿಶೇಷಿಕರಣಕ್ಕೆ ಸಂಬಂಧಿಸಿದ ಪಠ್ಯ ರೂಪಿಸಬೇಕು.
*ಪಿಯುಸಿ ವಿದ್ಯಾರ್ಥಿಗಳಿಗೆ ಕ್ಷೇತ್ರ ಬೇಟಿ ಹಮ್ಮಿಕೊಂಡು, ಅದರ ಅನುಭವ, ಜ್ಞಾನವನ್ನು ಒದಗಿಸಬೇಕು.
*ಕಲಾ ವಿಭಾಗದಲ್ಲಿ ಆಂತರಿಕ ಅಂಕಗಳಿಗೆ ಅವಕಾಶವಿಲ್ಲ ಹೀಗಾಗಿ 80 ಅಂಕಗಳ ಪ್ರಶ್ನೆ ನೇರ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು, 20 ಅಂಕಗಳನ್ನು ಅನ್ವಯಿಕ ಆಧಾರಿತ ಪ್ರಶ್ನೆಗಳಿಗೆ ಅವಕಾಶ ಕಲ್ಪಿಸಿಕೂಡುವುದು. ಉದಾ-ಕ್ಷೇತ್ರ ಕಾರ್ಯ ವರದಿ, ಸಂಭಾಷಣೆ
*ಇದಕ್ಕೆ ಎಮ್ ಎಸ್ ಡಬ್ಲ್ಯು, ಬಿ ಎಡ್ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಬೇಕು.
* ಈ ಸಮಾಜ ಕಾರ್ಯ ಶಿಕ್ಷಕರು ತಮ್ಮ ಕಾಲೇಜುಗಳಲ್ಲಿ ವಿದ್ಯಾರ್ಥಿ ಮಾರ್ಗದರ್ಶನ ಕೇಂದ್ರ ಸ್ಥಾಪಿಸಿ ಆಪ್ತ ಸಮಾಲೋಚನೆ ಒದಗಿಸಬೇಕು.
ಅನುಕೂಲ -
-ವಿದ್ಯಾರ್ಥಿಗಳು ಸಮಾಜ ಕಾರ್ಯ ವಿಷಯ ಆಯ್ದುಕೊಂಡರೆ ಬಿ ಎಸ್ ಡಬ್ಲ್ಯು ಪದವಿ ಪ್ರವೇಶಕ್ಕೆ ಅನುಕೂಲ ಆಗುತ್ತದೆ.
-ಸಮಾಜ ಕಾರ್ಯಕರ್ತರಿಗೆ ಉದ್ಯೋಗಾವಕಾಶ ಹೆಚ್ಚುತ್ತವೆ.
ಜವಾಬ್ದಾರಿ -
-ಪಿ ಯು ಮಂಡಳಿಯೊಂದಿಗೆ ಬಿ ಎಸ್ ಡಬ್ಲ್ಯು, ಎಮ್ ಎಸ್ ಡಬ್ಲ್ಯು ವಿಭಾಗದ ಮುಖ್ಯಸ್ಥರು, ಪ್ರಾಚಾರ್ಯರು ಇದರ ಅನುಷ್ಠಾನಕ್ಕೆ ಚರ್ಚಿಸಬೇಕು.
-ಶಾಲಾ, ಕಾಲೇಜುಗಳ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಜೊತೆ ಚರ್ಚಿಸಬೇಕು.
ಪದವಿ ಶಿಕ್ಷಣ
*ಕೆಲವು ಜನರು ಸಮಾಜ ಕಾರ್ಯ ವಿಷಯವನ್ನು ಪದವಿ ಮಟ್ಟದಲ್ಲಿ ಕಲಾ ಪದವಿ (ಬಿ ಎ )ದಲ್ಲಿ ಒಂದು ಐಚ್ಛಿಕ ವಿಷಯವಾಗಿ ಅಳವಡಿಸಬೆಕೆಂದು ಹೇಳುತ್ತಿದ್ದಾರೆ. ಆದರೆ ಅದು ಉತ್ತಮ ಬೆಳವಣಿಗೆಯಲ್ಲ. ಏಕೆಂದರೆ ಒಂದು ಕಾಲೇಜಿಗೆ ಒಬ್ಬರೆ ಉಪನ್ಯಾಸಕರು ಬೋದಿಸಬೇಕಾಗುತ್ತದೆ. ಅದೇ ಬಿ ಎಸ್ ಡಬ್ಲ್ಯು ಕೋರ್ಸ್ ನಲ್ಲಿ 05- 06 ಜನ ಬೋದಿಸಲು ಅವಕಾಶ ಸಿಗುತ್ತದೆ.
*ಬಿ ಎ ಕೋರ್ಸ್ ಆದರೆ ಸಮಾಜಕಾರ್ಯಕ್ಕೆ ವೃತ್ತಿಪರ ಕೋರ್ಸಿನ ಮಾನ್ಯತೆ ದೊರೆಯುವುದಿಲ್ಲ. ಅದೆ ಬಿ ಎಸ್ ಡಬ್ಲ್ಯು ಕೋರ್ಸ್ ಆದರೆ ವೃತ್ತಿಪರ ಕೋರ್ಸನ ಮಾನ್ಯತೆ ಸಿಗುತ್ತದೆ.
*ಬಿ ಎ ಕೋರ್ಸ್ ನಲ್ಲಿ ಸಮಾಜ ಕಾರ್ಯದ ಬಗ್ಗೆ ಪರಿಪೂರ್ಣ ಅಧ್ಯಯನ ಆಗುವುದಿಲ್ಲ. ಅದೆ ಬಿ ಎಸ್ ಡಬ್ಲ್ಯು ಕೋರ್ಸ್ ನಲ್ಲಿ ಪರಿಪೂರ್ಣ, ಆಳವಾದ ಅಧ್ಯಯನಕ್ಕೆ ಅವಕಾಶ ಸಿಗುತ್ತದೆ. ಮತ್ತು ಕ್ಷೇತ್ರ ಕಾರ್ಯದ ಬಗ್ಗೆ ಹೆಚ್ಚಿನ ಅನುಭವ ದೊರೆಯುತ್ತದೆ.
*ವೃತ್ತಿಪರತೆಯ ಮಾನ್ಯತೆ ಹೊಂದಿ ಬಿ ಎಸ್ ಡಬ್ಲ್ಯು ಕೋರ್ಸ್ ನಡೆಸುವುದು ಉತ್ತಮ. ಬಿ ಎ ದಲ್ಲಿ ಕೇವಲ ಒಂದು ವಿಷಯವಾಗಿ ಬೋದಿಸುವುದು ನಕಾರಾತ್ಮಕ ಪರಿಣಾಮ ಆಗುತ್ತದೆ.
-ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಬಿ ಎಸ್ ಡಬ್ಲ್ಯು ಪಠ್ಯ ಹಾಗೂ ಫಲಿತಾಂಶ ದಲ್ಲಿ ಸಮಪ್ರಮಾನತೆ ಕಾಯ್ದುಕೂಳ್ಳಬೇಕು.
-ಸರ್ಕಾರಿ ಪಠ್ಯಪುಸ್ತಕ ರಚಿಸಬೇಕು.
*ತಾಲೂಕಿಗೆ ಒಂದಾದರೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ ಎಸ್ ಡಬ್ಲ್ಯು ಪದವಿ ಸ್ಥಾಪಿಸಬೇಕು.
*ಈಗಾಗಲೇ ಬಿ ಎಸ್ ಡಬ್ಲ್ಯು ಕೋರ್ಸ್ ಹೊಂದಿರುವ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳು ಆಪ್ತಸಮಾಲೋಚನೆಗಾಗಿ ವಿದ್ಯಾರ್ಥಿ ಮಾರ್ಗದರ್ಶನ ಕೇಂದ್ರ ಪ್ರಾರಂಬಿಸುವುದು.
ಜವಾಬ್ದಾರಿ
- ಬಿ ಎಸ್ ಡಬ್ಲ್ಯು ಕಾಲೇಜಿನ ಪ್ರಾಚಾರ್ಯರು, ಮುಖ್ಯಸ್ಥರು, ವೃತ್ತಿಪರ ಸಂಘಟನೆಗಳ ಮುಖಂಡರು ಉನ್ನತ ಶಿಕ್ಷಣ ಸಚಿವರು, ಪದವೀಧರ, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರೂಂದಿಗೆ ಚರ್ಚಿಸಬೇಕು.
ಸ್ನಾತಕೋತ್ತರ ಶಿಕ್ಷಣ
*ರಾಜ್ಯದ ಎಲ್ಲ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಕೋರ್ಸ್ ಅಳವಡಿಸುವುದು.
*ಬಿ ಎಸ್ ಡಬ್ಲ್ಯು ಪದವಿ ವ್ಯಾಸಂಗ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಎಂ ಎಸ್ ಡಬ್ಲ್ಯು ಕೋರ್ಸ್ ನಲ್ಲಿ ಪ್ರವೇಶ ದೊರೆಯಬೇಕು ಅಥವಾ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.
*ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಬೋದಿಸುವ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, ಸ್ವಾಯತ್ತ, ಖಾಸಗಿ, ಡಿಮ್ಡ್ ವಿಶ್ವವಿದ್ಯಾಲಯಗಳು ಪಠ್ಯಕ್ರಮ, ಫಲಿತಾಂಶದಲ್ಲಿ ಏಕರೂಪತೆ ತರಬೇಕು.
*ಕಾರ್ಯಾಗಾರ, ವಿಚಾರಗೋಷ್ಠಿಗಳು ಕಡ್ಡಾಯವಾಗಿ ಜರುಗಬೇಕು.
*ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನೆ, ಲೇಖನಗಳನ್ನು ಜರ್ನಲ್ ನಲ್ಲಿ ಪ್ರಕಟಿಸುವ ಕುರಿತು ಮಾಹಿತಿ ಒದಗಿಸಬೇಕು.
*ನೆಟ್ /ಸೆಟ್ /ಪಿ ಹೆಚ್ ಡಿ ಕುರಿತು ಮಾಹಿತಿ ಒದಗಿಸಬೇಕು
ಇತ್ಯಾದಿ
ಸ್ನಾತಕೋತ್ತರ ಡಿಪ್ಲೊಮಾ /ಪಿ ಹೆಚ್ ಡಿ
*ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಭೋದಿಸುತ್ತಿರುವ ರಾಜ್ಯದ ಎಲ್ಲ ಸಾಮಾನ್ಯ ವಿಶ್ವವಿದ್ಯಾಲಯಗಳು ಪಿ ಜಿ ಕೋರ್ಸ್ನೋಂದಿಗೆ. Human resource management, Rural Development, project management, counselling ನಂತಹ ಪಿ ಜಿ ಡಿಪ್ಲೊಮಾ ಕೋರ್ಸ್ನ ನ್ನು ಜಾರಿಗೆ ತರಬೇಕು.
*ಹಲವಾರು ಜನ ಪಿ ಹೆಚ್ ಡಿ ಆಕಾಂಕ್ಷಿಗಳಿದ್ದು ಅದಕ್ಕೆ ಪ್ರತಿವರ್ಷ ಪಿ ಹೆಚ್ ಡಿ ನೋಂದಣಿ ಮಾಡಿಕೊಳ್ಳಬೇಕು.
ಸಮಾಜ ಕಾರ್ಯ ವೃತ್ತಿಪರ ಸಂಘಟನೆಗಳು
*ರಾಜ್ಯ ಮಟ್ಟದ ಸಮಾಜ ಕಾರ್ಯಕರ್ತರ ಸಂಘಟನೆಯನ್ನು ರಚಿಸಿ ರಾಜ್ಯದ ಎಲ್ಲ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ನೊಂದಣಿ ಮಾಡಿಸಿ ಮೂದಲು ಸಮಾಜ ಕಾರ್ಯಕರ್ತರಲ್ಲಿಯೆ ಒಗ್ಗಟ್ಟಿನ್ನು ಮೂಡಿಸಬೇಕು.
*ಹಾಗೇ ಎಲ್ಲ ವಿಶ್ವವಿದ್ಯಾಲಯಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಕೂಡಾ ಸಂಘಟನೆಗಳನ್ನು ಜಾರಿಗೆ ತರಬೇಕು.
*ಪ್ರತಿ ವರ್ಷ ವರ್ಷಕ್ಕೆ ಒಂದು ಜಿಲ್ಲಾ ಕೇಂದ್ರ ಆಯ್ದುಕೊಂಡು ಸಮಾಜ ಕಾರ್ಯ ಸಮ್ಮೇಳನ ಹಮ್ಮಿಕೊಳ್ಳಬೇಕು. ಈ ಸಮ್ಮೇಳನದಲ್ಲಿ ಶಿಕ್ಷಕರ ಕ್ಷೇತ್ರದ, ಪದವಿದರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು, ಗ್ರಾಮೀಣಾಭಿವೃದ್ಧಿ, ಕಾರ್ಮಿಕ, ಆರೋಗ್ಯ ಸಚಿವರು, ಉನ್ನತ ಶಿಕ್ಷಣ ಸಚಿವರನ್ನು ಅತಿಥಿಗಳಾಗಿ ಕರೆಯಿಸಿ ಸಮಾಜಕಾರ್ಯದ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡುವುದು.
ವೃತ್ತಿಪರ ಸಮಾಜ ಕಾರ್ಯ ಸಂಘಟನೆಗಳ ಕರ್ತವ್ಯಗಳು
*ನೆಟ್, ಸೆಟ್ ಪರೀಕ್ಷೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುವುದು.
*ವ್ಯಕ್ತಿತ್ವ ವಿಕಸನ ತರಬೇತಿ
* ಅಂತರರಾಷ್ಟ್ರೀಯ, ರಾಷ್ಟ್ರೀಯ ಜರ್ನಲ್ ನಲ್ಲಿ ಲೇಖನ, ಸಂಶೋಧನೆ ಯನ್ನು ಪ್ರಕಟಿಸುವ ಕುರಿತು ತರಬೇತಿ.
*ಸಂದರ್ಶನ ಎದುರಿಸುವ ತರಬೇತಿ
*project proposal ತಯಾರಿಸುವ ಕುರಿತು ತರಬೇತಿ ನೀಡುವುದು.
*ಸದಸ್ಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯ ಆಗಬೇಕು.
ಸರ್ಕಾರಿ ಉದ್ಯೋಗಗಳು
*ಉನ್ನತ ಶಿಕ್ಷಣ ಸಚಿವರು, ಪದವೀಧರ, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರೂಂದಿಗೆ ಚರ್ಚಿಸಿ ಶಿಕ್ಷಣ ಕ್ಷೇತ್ರದಲ್ಲಿ ಶಾಲಾ ಸಮಾಜ ಕಾರ್ಯಕರ್ತರನ್ನು ನೇಮಿಸುವಂತೆ ಒತ್ತಾಯಿಸುವುದು.
*ಗ್ರಾಮೀಣಾಭಿವೃದ್ಧಿ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಬಿ ಎಸ್ ಡಬ್ಲ್ಯು ಪದವಿದರರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಹಾಗೂ ಎಂ ಎಸ್ ಡಬ್ಲ್ಯು ಪೂರ್ಣಗೊಳಿಸಿದವರಿಗೆ ಗ್ರಾಮೀಣಾಭಿವೃದ್ಧಿ ಅಧಿಕಾರಿ ಹುದ್ದೆ ಸೃಜಿಸಲು ಹೇಳುವುದು.
*ಸಿ ಡಿ ಪಿ ಓ ದಂತೆ ಹಾಸ್ಟೆಲ್ ವಾರ್ಡನ್, ತಾಲ್ಲೂಕಾ ಸಮಾಜ ಕಲ್ಯಾಣ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಹುದ್ದೆಗಳಿಗೆ ಕನಿಷ್ಟ 50% ರಷ್ಟು ಮೀಸಲಾತಿ ಒದಗಿಸಬೇಕು.
*ಕೈಗಾರಿಕೆ, ಆರೋಗ್ಯ, ಅಪರಾಧ ಕ್ಷೇತ್ರದಲ್ಲಿ ಕಡ್ಡಾಯವಾಗಿ ಸಮಾಜ ಕಾರ್ಯಕರ್ತರಿಗೆ ಉದ್ಯೋಗ ಭದ್ರತೆ ನೀಡಬೇಕು.
*ಕೆ ಎ ಎಸ್ /ಆಯ್ ಎ ಎಸ್ ನಲ್ಲಿ ಸಮಾಜ ಕಾರ್ಯ ವಿಷಯವನ್ನು ಐಚ್ಛಿಕ ವಿಷಯವಾಗಿ ಸೇರಿಸಲು ಶ್ರಮಿಸಬೇಕು.
ಮೇಲ್ಕಾಣಿಸಿದ ವಿಷಯಗಳ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳು
1)ಸಹಿ ಸಂಗ್ರಹ
2)ಸರ್ಕಾರ, ಮಂತ್ರಿಗಳೂಂದಿಗೆ ಚರ್ಚೆ
3)ಮನವಿ ಸಲ್ಲಿಕೆ
4)ಪತ್ರ ಚಳವಳಿ
5)ಅಂಕಿ ಅಂಶಗಳ ಸಂಗ್ರಹ
6)ಸಮಾಜ ಕಾರ್ಯದ ಪ್ರಾಮುಖ್ಯತೆ ತಿಳಿಸುವುದು.
7)ಸಮಾಜ ಕಾರ್ಯದ ಕಾರ್ಯಾಗಾರಗಳಿಗೆ ಉನ್ನತ ಶಿಕ್ಷಣ ಸಚಿವರನ್ನು ಕರೆಯಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದು.
8)ಸಂಶೋಧನೆ ಹಮ್ಮಿಕೊಂಡು ಸಮಾಜ ಕಾರ್ಯದ ಪ್ರಾಮುಖ್ಯತೆ ಕಂಡು ಹಿಡಿದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.
ಇತ್ಯಾದಿ
ಧನ್ಯವಾದಗಳು
Bairappa Halappagol .Gold medalist in BSW and MSW .Rani channamma university Belagavi
Karagaon tq-Chikkodi
Dist -Belagavi

Read and share to all social work students ,all social workers
ReplyDeleteSuper...
ReplyDeleteThis comment has been removed by the author.
Deletethanku dear
DeleteGood Work All the best friend
ReplyDeletethanku ree
ReplyDelete