Sunday, 17 February 2019

ಭಯೋತ್ಪಾದನೆಯ ಅಳಿವು ಮಾನವೀಯತೆಯ ಉಳಿವು . ಕವನ-ಭೈರಪ್ಪ ಹಾಲಪ್ಪಗೋಳ

 ಭಯೋತ್ಪಾದನೆಯ ಅಳಿವು
                       ಮಾನವೀಯತೆಯ ಉಳಿವು

ಭರತಖಂಡದಲ್ಲಿ  ಅಂದು ಶಾಂತಿಯುತ ಬಾಳ್ವೆಯ ಜೀವನ
ಆದರೆ ಇಂದು ಏನಿದ್ದರೂ ಬರಿ ಭಯದ ವಾತಾವರಣ
ಶಾಂತಿದೂತರ ನಾಡಿನಲ್ಲಿ ಭಯೋತ್ಪಾದನೆಯ ನರ್ತನ
ಭಾರತಾಂಬೆ ಕರುಣಿಸು ನಿನ್ನ ಮಕ್ಕಳಿಗೆ ಸಮೃದ್ಧ ಜನಜೀವನ


ವೈವಿಧ್ಯತೆಯಲ್ಲಿ ಏಕತೆಯ  ಹೆಮ್ಮೆಯ ಭರತ ಭೂಮಿ ನಮ್ಮದು
ವಿಶ್ವ ಧರ್ಮ ಧರ್ಮಗಳ ಮದ್ಯೆ ಮಾನವ ಧರ್ಮ  ಮರೆಯದಿರಲಿ ಎಂದೆಂದೂ
ಬರಿ ದ್ವೇಷ, ಅಹಂಕಾರ, ಹಿಂಸೆ, ತಾರತಮ್ಯ  ಶೋಷಣೆಯಲ್ಲಿ
ಜೀವನ ಸಾಗಲಿ ಮಾನವೀಯ ಮೌಲ್ಯಗಳ ನೆಲೆಯಲ್ಲಿ


ವಿಶ್ವಜನಸಂಕುಲಕ್ಕೆ  ವಿಶ್ವ ಭಾವೈಕ್ಯತೆ  ಭಾವ ಒದಗಲಿ ಬಹುಬೇಗ
ಶಾಂತಿ ಸಹಬಾಳ್ವೆಯೊಂದಿಗೆ ಮಾನವೀಯತೆ ಬರಲಿ ಜಗದಾಗ
ವಿಶ್ವದಾದ್ಯಂತ ಮರುಕಳಿಸದಿರಲಿ ಆವಂತಿಪೋರದ ಆಹುತಿ
ಪ್ರಪಂಚದಲ್ಲೆ ಮುಕ್ತವಾಗಲಿ ಭಯೋತ್ಪಾದನೆಯ ಭಯ ಬೀತಿ


ಚಿನ್ನದಂತಹ ಮನಸ್ಸಿಗೆ ಮುದ್ದಿನಂತ ಜೀವಗಳಿಗೆ ತಟ್ಟದಿರಲಿ  ಭಯ
ನಮ್ಮ್ಮೆಲ್ಲರಿಗೆ ಕೊಡು ದೇವರೆ ವೈರಿಗಳನ್ನ ಎದುರಿಸುವ ಅಭಯ
ಪ್ರೀತಿಯಿಂದ ಗೆಲ್ಲಲಿ ಜನರ ಮನ, ಶಾಂತಿಯೇ ಆಗಲಿ  ಜನಾಂದೋಲನ
ನಮ್ಮಲ್ಲಿ ಬಹುಬೇಗನೆ ಆಗಲಿ ಭಯೋತ್ಪಾದನೆ ನಿರ್ಮೂಲನ



ಕೊಡು ತಾಯಿ ಭಾರತಾಂಬೆಯ ಹೆಮ್ಮೆಯ ಪುತ್ರರಿಗೆ ಶೌರ್ಯದ ಚಲ
ಬಹುಬೇಗ ಬರಲಿ ಭೂತಾಯಿಯ ಮಕ್ಕಳಿಗೆ ಪ್ರೀತಿ ಶಾಂತಿ ಮಾನವೀಯ ಬಲ
ಪೂರ್ವ ಪಶ್ಚಿಮ ದಕ್ಷಿಣೋತ್ತರ ಭಾರತೀಯ ಮಕ್ಕಳಲ್ಲಿ ಬರಲಿ ಒಗ್ಗಟ್ಟು
ಗಡಿನಾಡೆ ಇರಲಿ ಕರುನಾಡೆ ಇರಲಿ ಬರಲಿ ಎಲ್ಲರಲ್ಲಿ  ದೇಶ ಪ್ರೇಮದ ನಂಟು
                   

                   ರಚನೆ - ಭೈರಪ್ಪ ಹಾಲಪ್ಪಗೋಳ 

1 comment: