ಶೋಷಿತ ಮಹಿಳೆಯರಿಗೆ ನೆರವಾಗಲು ಗ್ರಾಮ ಮಟ್ಟದಲ್ಲೆ ಸಿಗಲಿ ಪರಿಹಾರ
ಶೋಷಿತ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿನಿತ್ಯ ಕಂಡುಬರುತ್ತವೆ. ಸರ್ಕಾರಗಳು ಇವುಗಳ ನಿಯಂತ್ರಣಕ್ಕೆ ಹಲವಾರು ಕಾಯ್ದೆಗಳು ತಂದಿದ್ದರೂ ಅವು ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ. ನಿರ್ಭಯಾ ನಿಧಿ , ನಿರ್ಭಯಾ ಕೇಂದ್ರ, ಸಾಂತ್ವನ ಮಹಿಳಾ ಸಹಾಯವಾಣಿ, ಕೌಟುಂಬಿಕ ಆಪ್ತ ಸಮಾಲೋಚನೆ ಕೇಂದ್ರ ಹೀಗೆ ಜಾರಿಗೆ ತಂದಿದ್ದರೂ ಅವುಗಳ ಬಗ್ಗೆ ಜನರಿಗೆ ಮೊದಲು ಅರಿವೇ ಇಲ್ಲ. ಮಹಿಳಾ ಕಾನೂನುಗಳು ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ. ಮರ್ಯಾದೆಗೆ ಅಂಜಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಆರೋಪಿ ಮೇಲೆ ಕೇಸು ಹಾಕಲು ಹಿಂಜರಿಯುತ್ತಾರೆ . ಕೋರ್ಟ್, ಕಛೇರಿ ಅಲೆದಾಡವುದು ಬೇಡ, ಬಡತನ ಹೇಗಾದರೂ ಸಹಿಸಿಕೊಂಡರಾಯ್ತು ಎಂದು ಬಿಟ್ಟು ಬಿಡುತ್ತಾರೆ.
ಹೀಗೆ ಅಂಜುತ್ತಾ ಭಯದಲ್ಲಿಯೇ ಕಾಲ ಕಳೆಯುತ್ತಾರೆ. ಆದರೆ ನೋಂದ ಮಹಿಳೆಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ. ಹಲವಾರು ಮಹಿಳಾ ಪರ ಸರ್ಕಾರದ ಯೋಜನೆಗಳು ಇದ್ದರೂ ಅವುಗಳನ್ನು ಪಡೆದುಕೊಳ್ಳುವ ಅರಿವು, ಶಕ್ತಿ ಮಹಿಳೆಯರಲ್ಲಿ ಇಲ್ಲ. ಸಾಂತ್ವನ, ಧೈರ್ಯ ಹೇಳುವ ವ್ಯಕಿಗಳು ಕೂಡಾ ಸಿಗುವುದಿಲ್ಲ ಹೀಗಾಗಿ ಮಹಿಳೆಯರು ಆತ್ಮಹತ್ಯೆಯಂತಹ ಪ್ರಯತ್ನಗಳಿಗೆ ಒಳಗಾಗುತ್ತಾರೆ. ಖಿನ್ನತೆಗೆ ಒಳಗಾಗಿ ಮಾನಸಿಕವಾಗಿ ಜರ್ಜರಿತರಾಗುತ್ತಾರೆ.
ಇಷ್ಟೆಲ್ಲಾ ವಾಸ್ತವ ಅಂಶಗಳನ್ನು ನೋಡಿದರೆ ಏನಾದರೂ ಪರಿಹಾರ ಕಂಡುಕೊಳ್ಳುವ ಯೋಚನೆ ಬೇಕಾಗುತ್ತದೆ. ಈಗಾಗಲೆ ಜಾರಿಯಲ್ಲಿರುವ ಮಹಿಳಾ ಸ್ನೇಹಿ, ಕಾನೂನು, ಸಂವಿಧಾನ, ಯೋಜನೆಗಳು ಮಹಿಳಾ ಕಲ್ಯಾಣಕ್ಕೆ ಪೂರಕವಾಗಿವೆ. ಆದರೆ ಪ್ರಭಾವಿ ಕುಟುಂಬದ ಮಹಿಳೆಯರು ಹೇಗೋ ಪ್ರಭಾವ ಬಳಸಿ ಎಲ್ಲ ಸವಲತ್ತುಗಳನ್ನು ತಮ್ಮದಾಗಿಸಿಕೂಳ್ಳುತ್ತಿದ್ದಾರೆ. ಆದರೆ ದಮನಿತ, ಶೋಷಿತ ಬಡ ಮಹಿಳೆಯರಿಗೆ ಈ ಸವಲತ್ತುಗಳ ಅರಿವಿಲ್ಲ, ಇವುಗಳ ಅನುಷ್ಠಾನಕ್ಕೆ ಹಲವು ವಿನೂತನ ಕ್ರಮ ಕೈಗೊಳ್ಳಬೇಕಿದೆ.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಹಿಳಾ ಕಲ್ಯಾಣ ಅಧಿಕಾರಿಗಳನ್ನು ನೇಮಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಪ್ರತಿ ಹಳ್ಳಿಗಳಲ್ಲಿ ಪ್ರತಿ ವಾರಕ್ಕೊಮ್ಮೆ ಕೆಲಸದ ಅವಧಿ ಮುಗಿದ ನಂತರ ಮಧ್ಯಾಹ್ನ 03.00 ರಿಂದ ಸಾಯಂಕಾಲ 06.00 ರವರೆಗೆ ಮಹಿಳೆಯರ ವಾಸಸ್ಥಳಗಳಿಗೆ ಹೋಗಿ ಮಹಿಳಾ ಕಲ್ಯಾಣ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಯತ್ನ ನಡೆಯಬೇಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಂತಹ ಹೊಸ ಚಟುವಟಿಕೆಗಳಿಗೆ ಮುನ್ನುಡಿ ಬರೆಯಬೇಕಿದೆ. ಉಳಿದ ಸಮಯದಲ್ಲಿ ಮಹಿಳಾ ಕಲ್ಯಾಣ ಅಧಿಕಾರಿಗಳು ಸಂಶೋಧನೆ, ಅಧ್ಯಯನ ನಡೆಸಿ ಮಹಿಳಾ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳುವುದು. ಶಾಲಾ ಮಕ್ಕಳಿಗೆ ಮಹಿಳಾ ಕಲ್ಯಾಣಕ್ಕೆ ಸಂಬಂಧಿಸಿದಂತೆ, ನೈತಿಕ ಶಿಕ್ಷಣ, ಕಾಯ್ದೆ ಕಾನೂನುಗಳ ಕುರಿತು ಬೋಧನೆ ಮಾಡುವುದು.
ಮಹಿಳಾ ಕಲ್ಯಾಣ ಅಧಿಕಾರಿಗಳ ಜವಾಬ್ದಾರಿಗಳ ಮತ್ತು ಪಾತ್ರ
-ಮಹಿಳಾ ಕಲ್ಯಾಣ ಅಧಿಕಾರಿಗಳು ಇವರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಬೇಕು.
-ಮಹಿಳೆಯರಿಗೆ ಸಂವಿಧಾನ, ಮಹಿಳಾ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು.
-ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹಿಳಾ ಕಲ್ಯಾಣ ಸೇರಿ ಉಪಯುಕ್ತ ಯೋಜನೆಗಳ ಕುರಿತು ಮಾಹಿತಿ ನೀಡುವುದು.
-ನೋಂದ, ಶೋಷಿತ ಮಹಿಳೆಯರಿಗೆ ಸೂಕ್ತ ಕಾನೂನು ಸಲಹೆ, ನೆರವು ನೀಡುವುದು
-ಮಹಿಳಾ ಕಲ್ಯಾಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಮಹಿಳಾ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರ ಪಡೆದುಕೊಳಬೇಕು
-ಸ್ವಯಂ ಉದ್ಯೋಗಕ್ಕಾಗಿ ಕೌಶಲ್ಯ ತರಬೇತಿ ಹಾಗೂ ಸ್ವಯಂ ಉದ್ಯೋಗ ಗ್ರಾಮದಲ್ಲಿಯೇ ಹಾಗೂ ಮನೆಯಲ್ಲೇ ಕೈಗೊಳ್ಳಲು ಅನುವು ಮಾಡಿ ಕೊಡುವುದು.
-ಮಹಿಳೆಯರು ಮತ್ತು ಸರ್ಕಾರದ ಮಧ್ಯೆ ಮಧ್ಯಸ್ಥಿಕೆ ವಹಿಸಿ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಶ್ರಮಿಸುತ್ತಿರುವ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಉಪಯೋಗ ಪಡೆದುಕೊಳ್ಳುವುದು.
-ಶಾಲಾ ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ, ಅತ್ಯಾಚಾರ, ಶೋಷಣೆ, ಬಾಲಕಾರ್ಮಿಕ ಸೇರಿ ಸಮಸ್ಯೆಗಳನ್ನು ತಡೆಯಲು ಸೂಕ್ತ ಜಾಗೃತಿ ಮೂಡಿಸುವುದು.
-ನೋಂದ ಮಹಿಳೆಯರಿಗೆ ಮನೆ ಬೇಟಿ ಮಾಡಿ ಸಾಂತ್ವನ, ಆಪ್ತ ಸಮಾಲೋಚನೆ ನೀಡುವುದು.
-ಮಹಿಳೆಯರಿಗೆ ಉನ್ನತ ಶಿಕ್ಷಣ, ಆರೋಗ್ಯ ಪಡೆಯಲು ನೆರವು ನೀಡುವುದು
-ಹೀಗೆ ಮಹಿಳೆಯರಿಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ಈ ಮಹಿಳಾ ಕಲ್ಯಾಣ ಅಧಿಕಾರಿಗಳು ನಿರ್ವಹಿಸಬೇಕು.
ಮಹಿಳಾ ಕಲ್ಯಾಣ ಅಧಿಕಾರಿಗಳಿಗೆ ಶಿಕ್ಷಣ ಮತ್ತು ಅರ್ಹತೆ - ಮನಶಾಸ್ತ್ರದಲ್ಲಿ ಅಥವಾ ಸಮಾಜ ಕಾರ್ಯ ಅಥವಾ ಸಮಾಜಶಾಸ್ತ್ರ ಅಥವಾ ಮಹಿಳಾ ಅಧ್ಯಯನದಲ್ಲಿ ಪದವಿ ಪೂರೈಸಿರುವ ಅಭ್ಯರ್ಥಿಗಳಿಗೆ ಜವಾಬ್ದಾರಿ ನೀಡಬೇಕು. ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು.
ಇಂತಹ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಬೇಕಿದೆ. ಹೊಸತನಕ್ಕೆ ನಾಂದಿ ಹಾಡಬೇಕಿದೆ. ಮಹಿಳಾ ಸಮಸ್ಯೆಗಳಿಗೆ ಮುಕ್ತಿ ನೀಡಬೇಕಿದೆ ಹಾಗೂ ಕೆಲವು ವಿಷಯಗಳ ಪದವೀಧರರಿಗೆ ಉದ್ಯೋಗಾವಕಾಶ ಲಭಿಸುವುದರೊಂದಿಗೆ ಮಹಿಳಾ ಸಮಸ್ಯೆ ನಿವಾರಿಸಿ, ಮಹಿಳೆಯರಲ್ಲಿ ನಾಯಕತ್ವ ಬೆಳಸಲು ಈ ನಿರ್ಧಾರ ಕೈಗೊಳ್ಳಬೇಕಿದೆ.
ಭೈರಪ್ಪ ಹಾಲಪ್ಪಗೋಳ, ಸಮಾಜಕಾರ್ಯಕರ್ತರು, ಚಿಕ್ಕೋಡಿ

ಇನ್ನಾದರೂ ಶೋಷಣೆ ನಿಲ್ಲಲಿ
ReplyDeleteಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸತನಕ್ಕೆ ನಾನಾಂ ಹಾಡಲಿ
ReplyDeleteಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸತನಕ್ಕೆ ನಾಂದಿ ಹಾಡಬೇಕಿದೆ
ReplyDeleteಸಮಾಜ ಕಾರ್ಯಕ್ಕೆ ಬೇಡಿಕೆ ಹೆಚ್ಚಲಿ
ReplyDeleteSuper
ReplyDelete